ಡಾ. ಬಿ.ಡಿ. ಜತ್ತಿ ಜೀವನ ಸಾಧನೆ

Author : ಜಯಶ್ರೀ ದಂಡೆ

Pages 164

₹ 100.00




Year of Publication: 2015
Published by: ಡಾ. ಬಿ.ಡಿ. ಜತ್ತಿ ವಚನ ಅಧ್ಯಯನ ಮತ್ತು ಸಂಶೋಧನ ಕೇಂದ್ರ
Address: ಕಲಬುರ್ಗಿ ಬಸವ ಸಮಿತಿ, ಅನುಭವ ಮಂಟಪ, ಜಯನಗರ, ಕಲಬುರಗಿ- 585105

Synopsys

‘ಡಾ. ಬಿ.ಡಿ. ಜತ್ತಿ ಜೀವನ ಸಾಧನೆ’ ಜಯಶ್ರೀ ದಂಡೆ ಅವರು ರಚಿಸಿರುವ ಕೃತಿ. ಭಾರತದ ಮಾಜಿ ಉಪರಾಷ್ಟ್ರಪತಿ ಹಾಗೂ ಕರ್ನಾಟಕದ ಮಾಜಿ ಮುಖ್ಯಮಂತ್ರಿಗಳೂ ಆಗಿದ್ದ ಜತ್ತಿ ಅವರು, ಸ್ವಲ್ಪ ದಿನಗಳ ಕಾಲ ಹಂಗಾಮಿ ರಾಷ್ಟ್ರಪತಿಯಾಗಿ ಕೂಡ ಕಾರ್ಯ ನಿರ್ವಹಿಸಿದ್ದರು.

ಕರ್ನಾಟಕದ ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲ್ಲೂಕಿನ ಸಾವಳಗಿ ಗ್ರಾಮ ಪಂಚಾಯತಿಯಿಂದ ದೇಶದ ಹಂಗಾಮಿ ರಾಷ್ಟ್ರಪತಿ ಹುದ್ದೆಯವರೆಗೆ ತಲುಪಿದ ಏಕೈಕ ರಾಜಕಾರಣಿ ಬಿ.ಡಿ.ಜತ್ತಿ. ಲೇಖಕರು ಅವರ ಜೀವನ ಸಾಧನೆಯನ್ನು ಈ ಕೃತಿಯಲ್ಲಿ ದಾಖಲಿಸಿದ್ದಾರೆ. ಡಾ. ಬಿ.ಡಿ. ಜತ್ತಿ ವಚನ ಅಧ್ಯಯನ ಮತ್ತು ಸಂಶೋಧನ ಕೇಂದ್ರದಿಂದ ಪ್ರಕಟಗೊಂಡ ಪ್ರಥಮ ಕೃತಿಯಾಗಿದೆ. ಈಗಾಗಲೇ ಜತ್ತಿಯವರ ಬಗ್ಗೆ ಪ್ರಕಟವಾಗಿರುವ ಕೃತಿಗಳಲ್ಲಿ ಇರಲಾರದ ವಿಷಯಗಳನ್ನು ವಿಭಿನ್ನವಾದ ರೀತಿಯಲ್ಲಿ ಅವಲೋಕಿಸಿ, ಅವರ ಮನೆತನದ ಅನೇಕ ವ್ಯಕ್ತಿಗಳನ್ನು ಸಂದರ್ಶಿಸಿ ಅಂತರಂಗದಿಂದ ಜತ್ತಿಯವರ ಜೀವನವನ್ನು ಪ್ರಸ್ತುತಪಡಿಸುವ ಪ್ರಯತ್ನ ಮಾಡಿದ್ದಾರೆ.

ಬಡತನದ ಹಿನ್ನೆಲೆಯಲ್ಲಿ ಜೀವನ ಪ್ರಾರಂಭಿಸಿ, ಇಡೀ ಸಮಾಜಕ್ಕೆ ಆದರ್ಶಪ್ರಾಯ ವ್ಯಕ್ತಿಯಾಗಿ “ಹಳ್ಳಿಯಿಂದ ದಿಲ್ಲಿಯವರೆಗೆ” ಎಂಬಂತೆ ಪಂಚಾಯತಿಯ ಕಟ್ಟೆಯಿಂದ ರಾಷ್ಟ್ರದ ಅತ್ಯುನ್ನತ ಸ್ಥಾನವಾದ ರಾಷ್ಟ್ರಪತಿ ಸ್ಥಾನ ಗ್ರಹಿಸಬೇಕಾದರೆ ಅವರ ವ್ಯಕ್ತಿತ್ವದ ಅಂತರಂಗವನ್ನು ಅವಲೋಕಿಸಿ ಬಹಿರಂಗ ಪಡಿಸಿದಲ್ಲಿ ಸಮಾಜದ ಬಂಧು-ಬಾಂಧವರಲ್ಲಿ ಸ್ಫೂರ್ತಿದಾಯಕ ಅಂಶಗಳು ಲಭ್ಯವಾಗಬಹುದು ಎಂಬ ದೃಷ್ಟಿಕೋನದಿಂದ ಈ ಪುಸ್ತಕವನ್ನು ಡಾ. ಜಯಶ್ರೀ ದಂಡೆ ಅವರು ರಚಿಸಿದ್ದಾರೆ.

About the Author

ಜಯಶ್ರೀ ದಂಡೆ
(03 March 1958)

ಸದಾ ಅಧ್ಯಯನ, ಅಧ್ಯಾಪನಗಳಲ್ಲಿ ತೊಡಗುವ ಮೂಲಕ ಸಾಹಿತ್ಯದ ವಿವಿಧ ಪ್ರಕಾರಗಳು ಸೇರಿದಂತೆ ಶರಣ ಸಾಹಿತ್ಯದಲ್ಲಿ ವಿಶೇಷ ಸಾಧನೆ ಮಾಡಿದ್ದಾರೆ ಜಯಶ್ರೀ ದಂಡೆಯವರು. 1958 ಮಾರ್ಚ್ 03 ಬಿಜಾಪುರದ ಮುದ್ದೇಬಿಹಾಳದಲ್ಲಿ ಜನಿಸಿದರು. ಡಾ. ಜಯಶ್ರೀ ದಂಡೆಯವರು  ವಚನಕಾರರ ಬದುಕು-ಬೋಧನೆಗಳ ಆಶಯಕ್ಕೆ ಧಕ್ಕೆ ಬಾರದ ರೀತಿಯಲ್ಲಿ ಬದ್ದತೆಯ ಬರವಣಿಗೆ ಮಾಡಿದ್ದಾರೆ. ಅವರ 50 ಕ್ಕೂ ಹೆಚ್ಚು ಕೃತಿಗಳಲ್ಲಿ ಅರ್ಧಕ್ಕಿಂತ ಹೆಚ್ಚು ಶರಣ ಸಾಹಿತ್ಯಕ್ಕೆ ಸಂಬಂಧಿಸಿದವುಗಳಾಗಿವೆ ಎಂಬುದು ಗಮನಾರ್ಹ ಸಂಗತಿ. ’ವಚನಗಳಲ್ಲಿ ಶೈವ ಹಾಗೂ ವೀರಶೈವ’ (ಸಂಶೋಧನೆ), ’ಸ್ವಭಾವದ ವಚನಗಳು’ (ಕಾವ್ಯ), ”ವಚನಕಾರ್ತಿ ರಾಯಮ್ಮ, ಅಕ್ಕಮಹಾದೇವಿ, ಚೆನ್ನಬಸವಣ್ಣ, ಆಯ್ದಕ್ಕಿ ಲಕ್ಕಮ್ಮ, ಶಿಶುನಾಳ ...

READ MORE

Related Books