ಡಾ. ವಿಕ್ರಂ ಸಾರಾಭಾಯ್ ಭಾರತ ಬಾಹ್ಯಾಕಾಶ ಪಿತಾಮಹಾ. ಈ ಕೃತಿಯು ಅವರ ಮಹತ್ವದ ಸಾಧನೆಯನ್ನು ಪರಿಚಯಿಸುತ್ತದೆ. ವಿಜ್ಞಾನದಲ್ಲಿ ಪರಿಣತಿ ಮತ್ತು ಆಳವಾದ ಆಸಕ್ತಿಯನ್ನು ಹೊಂದಿದ್ದ ಸಾರಾಭಾಯ್, ದೇಶವನ್ನು ಪ್ರಗತಿ ಪಥದಲ್ಲಿ ಕೊಂಡೊಯ್ಯಲು ಬೇಕಾದ ಆರ್ಥಿಕ ಬೆಳವಣಿಗೆ ಮತ್ತು ಸಾಮಾಜಿಕ ಪ್ರಗತಿ ಅವರ ಕಾರ್ಯದ ಗುರಿಯಾಗಿದ್ದಿತು.
ಅವರು ಕೈಗೊಂಡ ಪ್ರಯೋಗಗಳಿಂದ ಮತ್ತು ರೂಪಿಸಿದ ಸಿದ್ಧಾಂತಗಳಿಂದ ದೊರಕಿಸಿದ ಅಗಾಧ ಪ್ರಮಾಣದ ವಿಷಯಗಳಿಂದ ಪಡೆದ ಜ್ಞಾನವನ್ನು ಇತರರಿಗೆ ನೀಡಿದರು. ಇವರ ಕುರಿತು ಲೇಖಕ ಡಾ. ಪಿ.ಎಸ್. ಶಂಕರ್ ಅವರು ಮಾಹಿತಿಯನ್ನು ನೀಡಿದ್ದಾರೆ.
ವೃತ್ತಿಯಲ್ಲಿ ವೈದ್ಯರಾಗಿ ವೈದ್ಯ ಸಾಹಿತಿಯಾಗಿ ಪ್ರಸಿದ್ಧರಾಗಿರುವ ಡಾ.ಪಿ.ಎಸ್.ಶಂಕರ್ ಅವರು 1936 ಜನವರಿ 1ರಂದು ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲ್ಲೂಕಿನ ಹಲಗೇರಿಯಲ್ಲಿ ಜನಿಸಿದರು. ಹುಟ್ಟೂರು ಹಾಗೂ ಚಿತ್ರದುರ್ಗದಲ್ಲಿ ಪ್ರಾಥಮಿಕ ಶಿಕ್ಷಣ ಪಡೆದ ಇವರು ಮೈಸೂರು ಮತ್ತು ದೆಹಲಿಯಲ್ಲಿ ವೈದ್ಯಕೀಯದಲ್ಲಿ ಪದವಿ ಮತ್ತು ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಕಲಬುರ್ಗಿಯ ಎಂ.ಆರ್. ಮೆಡಿಕಲ್ ಕಾಲೇಜಿನಲ್ಲಿ ಅಧ್ಯಾಪಕರಾಗಿ, ಪ್ರಾಂಶುಪಾಲರಾಗಿ ಕಾರ್ಯ ನಿರ್ವಹಿಸಿ ನಿವೃತ್ತರಾಗಿದ್ದಾರೆ. ವೃದ್ಧಾಪ್ಯದಲ್ಲಿನ ಕಾಯಿಲೆಗಳು, ಹೃದಯ ಜೋಪಾನ, ಕ್ಯಾನ್ಸರ್, ಹೃದಯ ರೋಗ ತಡೆಗಟ್ಟಿ, ಡಾ. ವಿಕ್ರಂ ಸಾರಾಭಾಯ್, ಮುಂತಾದ ಕೃತಿಗಳನ್ನು ರಚಿಸಿದ್ದಾರೆ. ಸೋವಿಯತ್ ಲ್ಯಾಂಡ್ ನೆಹರು ಪ್ರಶಸ್ತಿ, ರಾಕ್ ಫೆಲ್ಲರ್ ಸ್ಕಾಲರ್ ಇನ್ ರೆಸಿಡೆನ್ಸ ಗೌರವ, ಭಾರತ ಸರ್ಕಾರದ ವಿಜ್ಞಾನ ತಂತ್ರಜ್ಞಾನ ಇಲಾಖೆಯ ...
READ MORE