ಹಿರಿಯ ರಂಗಕರ್ಮಿ ವಿ. ರಾಮಮೂರ್ತಿ ಹೆಸರಾಂತ ನಟ, ನೇಪಥ್ಯ ಕಲಾವಿದ ಹಾಗೂ ನಿರ್ದೇಶಕರು. ನಾಟಕಗಳಿಗೆ ಬೆಳಕಿನ ವಿನ್ಯಾಸ ಮಾಡುವುದರಲ್ಲಿ ಅವರು ನಿಸ್ಸೀಮರು. ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರಾಗಿದ್ದು, ದೆಹಲಿ ರಾಷ್ಟ್ರೀಯ ನಾಟಕ ಶಾಲೆಯ ಪದವಿ ನಂತರ ಯೂರೋಪ್, ಅಮೆರಿಕ, ದೇಶಗಳ ಹಲವು ರಂಗ ತಂಡಗಳ ಜೊತೆ ನೇಪಥ್ಯ ಕಲಾವಿದರಾಗಿ ಕೆಲಸ ಮಾಡಿ, ಕನ್ನಡ ನಾಡಿನಲ್ಲಿ ಹವ್ಯಾಸಿ ರಂಗಭೂಮಿಯಲ್ಲಿ ತೊಡಗಿಕೊಂಡು ಅದರ ತಾಂತ್ರಿಕ ಉನ್ನತಿಗೆ ಶ್ರಮಿಸಿದ್ದಾರೆ. ಇವರ ಬದುಕಿನ ಸಾಧನೆ ಕುರಿತು ಎಚ್.ಎ. ಪಾರ್ಶ್ವನಾಥ್ ಅವರು ವಿವರಿಸಿದ್ದಾರೆ.
ಸಾಹಿತಿ, ಹವ್ಯಾಸಿ ಪತ್ರಕರ್ತರಾಗಿರುವ ಎಚ್.ಎ. ಪಾರ್ಶ್ವನಾಥರು ಜನಿಸಿದ್ದು 1947 ಜುಲೈ 7ರಂದು. ತಂದೆ ಎಚ್.ಡಿ. ಅನಂತರಾಮಯ್ಯ, ತಾಯಿ ಪ್ರಭಾವತಮ್ಮ. ಧಾರವಾಡದ ಎಸ್.ಡಿ.ಎಂ. ಕಾಲೇಜಿನ ಪೆಥಾಲಜಿ ವಿಭಾಗದಲ್ಲಿ ಪ್ರಾಧ್ಯಪಕರಾಗೊ ಕಾರ್ಯ ನಿರ್ವಹಿಸಿ ನಿವೃತ್ತರಾಗಿದ್ದಾರೆ. ಕಾಲೇಜು ದಿನಗಳಿಂದಲೇ ನಾಟಕ ರಚನೆಯಲ್ಲಿ ತೊಡಗಿಸಿಕೊಂಡಿದ್ದ ಇವರು ಮೈಸೂರು ವಿಶ್ವವಿದ್ಯಾಲಯದಿಮದ ನಾಟಕದಲ್ಲಿಡಿಪ್ಲೊಮಾ ಪದವಿ ಪಡೆದರು. ರಂಗನಟನಾಗಿ ನೂರಕ್ಕೂ ಹೆಚ್ಚು ನಾಟಕಗಳಲ್ಲಿ ಪಾತ್ರ ನಿರ್ವಹಿಸಿದ್ದಾರೆ. ಕೈಲಾಸಂ ಶತಮಾನೋತ್ಸವ, ರಂಗ ಸಂಗೀತ, ಬಳ್ಳಾರಿ ಜಿಲ್ಲಾ ರಂಗಭೂಮಿ ಮುಂತಾದ ಕೃತಿಗಳನ್ನು ರಚಿಸಿದ್ದಾರೆ. ಇವರಿಗೆ ಹೊಯ್ಸಳ ಪ್ರಶಸ್ತಿ, ಬೆಂಗಳೂರಿನ ಚೇತನ ಪ್ರಶಸ್ತಿ, ಜ್ಞಾನ ಸಾಗರ ಪ್ರಶಸ್ತಿ, ಕೊಪ್ಪಳದ ಸಿದ್ಧಯ್ಯ ಪುರಾಣಿಕ ಪ್ರಶಸ್ತಿ, ...
READ MORE