ಲೇಖಕರಾದ ಕಾ ತ ಚಿಕ್ಕಣ್ಣ ಮತ್ತು ಲಕ್ಶ್ಮಣ ಕೊಡಸೆ ಅವರು ಸಂಪಾದಿಸಿರುವ ಹಾಗೂ ಎಮ್ ರಾಮಯ್ಯ ಅವರು ಸಂಯೋಜನೆ ಮಾಡಿರುವ ಕೃತಿ ಸಿದ್ದರಾಮಯ್ಯ ಆಡಳಿತ : ನೀತಿ ನಿರ್ಧಾರ. ' ಸಾಮಾಜಿಕ ನ್ಯಾಯ' ಎಂಬ ಪರಿಕಲ್ಪನೆಯನ್ನು ವಿಸ್ತರಿಸಿ ಸಮಸಮಾಜ ನಿರ್ಮಾಣದ ಉದ್ದೇಶಕ್ಕೆ ಅನುಗುಣವಾಗಿ ಕಾರ್ಯಕ್ರಮಗಳನ್ನು ರೂಪಿಸಿದ್ದು ಸಿದ್ಧರಾಮಯ್ಯ. ಸಂವಿಧಾನದ ಸರ್ವ ಸಮಾನತೆಯ ಆಶಯವನ್ನು ಸಾಕಾರಗೊಳಿಸಲು ಆರಂಭಿಸಿದ ಯೋಜನೆಗಳು ಜಾತಿ ಉಪಜಾತಿಗಳ ಜಡುಕಿನಲ್ಲಿ ಸಿಲುಕಿಹೋದ ಸಮಾಜದಲ್ಲಿ ಪರಿಣಾಮಕಾರಿಯಾಗಿ ಅನುಷ್ಠಾನಗೊಳ್ಳುವತ್ತ ಒತ್ತು ನೀಡಿದರು. ವೈಜ್ಞಾನಿಕ ದೃಷ್ಟಿ ಮತ್ತು ವೈಚಾರಿಕ ಧೋರಣೆಯನ್ನು ಕಾರ್ಯಕ್ರಮಗಳಲ್ಲಷ್ಟೇ ಅಲ್ಲದೆ ವೈಯಕ್ತಿಕ ನಡವಳಿಕೆಯಲ್ಲೂ ಅನುಸರಿಸುವ ಮೂಲಕ ಸಿದ್ಧರಾಮಯ್ಯ ರಾಜ್ಯದ ಆಡಳಿತದಲ್ಲಿ ತಮ್ಮ ಛಾಪನ್ನು ಉಳಿಸಿದ್ದಾರೆ. “ಸಿದ್ಧರಾಮಯ್ಯ ಆಡಳಿತ : ನೀತಿ ನಿರ್ಧಾರ' ಗ್ರಂಥವು ಅವರು ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ ಅವಧಿಯಲ್ಲಿ ಜನರಿಗಾಗಿ ರೂಪಿಸಿದ ಯೋಜನೆಗಳು, ಆ ಯೋಜನೆಗಳ ಹಿಂದಿನ ಸೈದ್ಧಾಂತಿಕ ನಿಲುವಿನಲ್ಲಿದ್ದ ಜನಪರ ಕಾಳಜಿ ಮತ್ತು ಅನುಷ್ಠಾನ ಬದ್ಧತೆ, ಆ ಮೂಲಕ ರಾಜ್ಯ ಪಡೆದುಕೊಂಡ ಚಲನಶೀಲತೆ ಹಾಗೂ ಆ ಚಲನಶೀಲತೆಯ ಗತಿಯಲ್ಲಿನ ಪ್ರಗತಿಯ ಸಾಧಕ ಬಾಧಕಗಳ ವಸ್ತುನಿಷ್ಠ ಅವಲೋಕನಗಳನ್ನು ಈ ಗ್ರಂಥ ಒಳಗೊಂಡಿದೆ. ವರ್ತಮಾನದ ಸಾಮಾಜಿಕ, ರಾಜಕೀಯ, ಆರ್ಥಿಕ, ಆಡಳಿತಾತ್ಮಕ ವ್ಯವಸ್ಥೆಗಳ ಸ್ಥಿತಿಗತಿ ಮತ್ತು ರಾಜಕೀಯ ಒಂದು ಸೇವೆಯಾಗಿ ಉಳಿಯದೆ ಬಂಡವಾಳವಾಗುತ್ತಿರುವ ಇವತ್ತಿನ ಸಂದರ್ಭಕ್ಕೆ ಈ ಗ್ರಂಥವು ಸರಿದಾರಿಯತ್ತ ಬೆಳಕು ತೋರುತ್ತದೆ. ಆಸಕ್ತರಿಗೆ ಪರಾಮರ್ಶನ ಕೈಪಿಡಿಯಾಗಿಯೂ, ಮುಂದಿನ ದಿನಗಳಿಗೆ ಐತಿಹಾಸಿಕ ದಾಖಲೆಯಾಗಿಯೂ ಉಳಿಯುತ್ತದೆ ಎಂಬುವುದು ಈ ಗ್ರಂಥ ಪ್ರಕಟಣೆಯ ಹಿಂದಿರುವ ಆಶಯ.
ಕತೆಗಾರ-ಕಾದಂಬರಿಕಾರ ಕಾ.ತ. ಚಿಕ್ಕಣ್ಣ ಅವರು ಮೂಲತಃ ಮೈಸೂರು ಜಿಲ್ಲೆಯ ಕಾಳಮ್ಮನವರ ಕೊಪ್ಪಲು ಗ್ರಾಮದವರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕರಾಗಿ ನಿವೃತ್ತರಾಗಿರುವ ಚಿಕ್ಕಣ್ಣ ಅವರು ಸಂತಕವಿ ರಾಷ್ಟ್ರೀಯ ಅಧ್ಯಯನ ಮತ್ತು ಸಂಶೋಧನ ಸಂಸ್ಥೆಯ ಸಂಚಾಲಕರು. ನಾಲ್ಕು ಕಥಾಸಂಕಲನ, ಮೂರು ಕಾದಂಬರಿ ರಚಿಸಿದ್ದಾರೆ, ’ಮುಂಜಾವು’ ಕಾದಂಬರಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಬಹುಮಾನ ಬಂದಿದೆ. ಅವರ ’ವಧೂಟಿ’ ನಾಟಕಕ್ಕೆ ಆರ್ಯಭಟ ಪ್ರಶಸ್ತಿ ಲಭಿಸಿದೆ. ಹಲವು ಸಮಿತಿಗಳ ಸದಸ್ಯ ಕಾರ್ಯದರ್ಶಿ, ಸಂಚಾಲಕರಾಗಿ ಕಾರ್ಯನಿರ್ವಹಿಸಿರುವ ಅವರು ಪಠ್ಯ ಪುಸ್ತಕ ರಚನಾ ಸಮಿತಿಯ ಸದಸ್ಯರಾಗಿದ್ದರು. ಬಿಳಲು ಬಿಟ್ಟ ಬದುಕು, ಒಡಲುರಿ, ವಾಸನಾಮಯ ಬದುಕಿನ ಆಚೆ ಈಚೆ, ಮನಸ್ಸು ...
READ MORE