ದೇಶ ಕಂಡ ಅದ್ವಿತೀಯ ಗಾಯಕರಲ್ಲಿ ಎಸ್. ಪಿ. ಬಾಲಸುಬ್ರಹ್ಮಣ್ಯಂ ಅವರೂ ಒಬ್ಬರು. ಅವರ ಕುರಿತು ನಾಡಿನ ಅನೇಕ ಸಾಹಿತಿಗಳು, ಅವರ ಒಡನಾಡಿಗಳು ಬರೆದ ಲೇಖನಗಳ ಸಂಗ್ರಹವೇ ಈ ಕೃತಿ. ಸಂಗೀತ ದಿಗ್ಗಜ ಹಂಸಲೇಖ ಅವರು ಈ ಕೃತಿಗೆ ಕಾವ್ಯಾತ್ಮಕ ಮುನ್ನುಡಿ ಬರೆದಿದ್ದಾರೆ. ಕೃತಿಗೆ ಬೆನ್ನುಡಿ ಬರೆದಿರುವ ಸಾಹಿತಿ ಡಾ. ದೊಡ್ಡರಂಗೇಗೌಡ ಅವರು “ಬಣ್ಣನೆಗೆ ಎಟುಕದ, ಅಸಾಧಾರಣ ಮಾನವ ನಮ್ಮ ನಿಮ್ಮೆಲ್ಲರ ಅಚ್ಚುಮೆಚ್ಚಿನ ಗಾಯಕ ಎಸ್ ಪಿ ಬಿ ಅವರ ಬಗೆಗೆ ಶ್ರದ್ಧೆ, ಭಕ್ತಿ, ಅಭಿಮಾನ, ಗೌರವಭಾವ,ಸಾಹಿತಿ, ಪ್ರಕಾಶಕ (ಕೃತಿಯ ಪ್ರಧಾನ ಸಂಪಾದಕರು) ಭದ್ರಾವತಿ ರಾಮಾಚಾರಿ ಅವರ ಈ ಬಗೆಯ ಸಾಹಿತ್ಯದ ಸಂಗೀತದ ಆರಾಧನೆಯ ದ್ಯೋತಕ ಈ ಮಹತ್ವದ ಕೃತಿ” ಎಂದು ಪ್ರಶಂಸಿಸಿದ್ದಾರೆ. ಈ ಕೃತಿಯ ಪ್ರಧಾನ ಸಂಪಾದಕರು-ಡಾ.ಭದ್ರಾವತಿ ರಾಮಾಚಾರಿ ಹಾಗೂ ಸಂಪಾದಕರು ತಾರಾನಾಥ್ ಭದ್ರಾವತಿ.
ಲೇಖಕ ಡಾ. ಭದ್ರಾವತಿ ರಾಮಾಚಾರಿ ಅವರು ಶಿವಮೊಗ್ಗ ಜಿಲ್ಲೆಯ ಭದ್ರಾವತಿ (ಜನನ: 09-08-1972) ತಾಲೂಕಿನ ಬೊಮ್ಮನಕಟ್ಟೆ ಗ್ರಾಮದವರು. ತಂದೆ ವೀರಾಚಾರಿ, ತಾಯಿ ಪಾರ್ವತಮ್ಮ, ಕನ್ನಡದಲ್ಲಿ ಎಂ.ಎ. ಪದವೀಧರರು. ಕೃತಿಗಳು: ಚೈತ್ರ ತಂದ ಚಿಗುರು, ಹರಕೆ, ನೆನಪೊಂದೇ ಶಾಶ್ವತ, ಭಾವನದೀ, ಅಮ್ಮಾ...ನನ್ನನ್ನೂ ಸ್ವಲ್ಪ ಅರ್ಥ ಮಾಡ್ಕೋ, ಆಶಾಕಿರಣ(ಇವು ಕಾದಂಬರಿಗಳು), ದೀಪ ಹಚ್ಚುವ ಸಮಯ(ಕಥಾಸಂಕಲನ), ಆಶಾ ಕಿರಣ(ಮಕ್ಕಳ ಕಾದಂಬರಿ), ಅಭಿರಾಮಿ ಮತ್ತು ಇತರ ಕಥೆಗಳು, ನಮ್ಮ ಬದುಕಿನ ಸುತ್ತ, ಕನಸುಗಳು ನೂರಾರು, ಹೊಸ ಚಿಗುರು(ಸಂಪಾದಿತ ಕೃತಿ), ತುಂತುರು ಮಳೆ ಹನಿ(ಸಂಪಾದಿತ ಕೃತಿ), ಪಯಣಿಗರು, ಬೆಳಕು ನೀನಾದೆ, ಬೇವರ್ಸಿ ಬರೆದ ಕಥೆಗಳು (ಇವು ಕಥಾ ಸಂಕಲನಗಳು), ಭದ್ರಾವತಿ ಆಕಾಶವಾಣಿಯಿಂದ 12 ಕಥೆಗಳು, ರಶ್ಮಿ, ಸಂದರ್ಶನ, ನಾಟಕಗಳು ಪ್ರಸಾರವಾಗಿವೆ. ಸುವರ್ಣ ಸ್ವಾತಂತ್ರ್ಯ ನಾಟಕ ರಚನೆ, ಕರ್ನಾಟಕd ಎಲ್ಲ ಬಾನುಲಿ ...
READ MORE