ಬಸವರಾಜ ಹಳಿಜೋಳ

Author : ಆರ್. ಜಿ. ರಾಯಕರ

Pages 15

₹ 25.00




Year of Publication: 2000
Published by: ಕರ್ನಾಟಕ ಲಲಿತಕಲಾ ಅಕಾಡೆಮಿ
Address: ಕರ್ನಾಟಕ ಲಲಿತಕಲಾ ಅಕಾಡೆಮಿ 2ನೇ ಮಹಡಿ, ಕನ್ನಡ ಭವನ, ಜೆ.ಸಿ.ರಸ್ತೆ, ಬೆಂಗಳೂರು – 560002

Synopsys

ರಾಜ್ಯದ ಚಿತ್ರಕಲಾ ಶಿಕ್ಷಣದ ಪರಂಪರೆಯಲ್ಲಿ ’ಭಾವಚಿತ್ರಗಳಿಗಾಗಿ’ ತಮ್ಮನ್ನು ತಾವು ಗುರುತಿಸಿಕೊಂಡ ಪ್ರತಿಭೆ ಬಸವರಾಜ ಹಳಿಜೋಳ ಅವರ ಬದುಕು ವಿಶೇಷವಾದುದು.  ಬದುಕಿನುದ್ದಕ್ಕೂ ಹೋರಾಟದ  ಸ್ವಾಭಿಮಾನಿ ಕಲಾವಿದರಾಗಿದ್ದರು. ಹುಬ್ಬಳ್ಳಿ- ಧಾರವಾಡದ ಮನೆಮನೆಗಳಲ್ಲಿ ಅವರು ರಚಿಸಿದ ಭಾವಚಿತ್ರಗಳ ಮೂಲಕ ಜನರ ಭಾವನೆಳಿಗೆ ಸ್ಪಂದಿಸಿದ್ದರು. 

ಅಸಾಧಾರಣ ವ್ಯಕ್ತಿತ್ವ ಹೊಂದಿದ್ದ ಇಂತಹ ಹಿರಿಯ ಕಲಾವಿದರ ಜೀವನ ಕುರಿತು ಪರಿಚಯಿಸುವ ಪುಸ್ತಕವನ್ನು ಲೇಖಕ , ಆರ್‍. ಜಿ. ರಾಯಕರ ಅವರು ಕರ್ನಾಟಕ ಲಲಿತಕಲಾ ಅಕಾಡೆಮಿಯ ’ಕರ್ನಾಟಕ ಕಲಾವಿದರ ಮಾಲೆ’ ಸರಣಿಯಲ್ಲಿ ಪ್ರಕಟಗೊಳಿಸಿದ್ದಾರೆ.

About the Author

ಆರ್. ಜಿ. ರಾಯಕರ

ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ 1934ರಲ್ಲಿ ಜನಿಸಿದ ಆರ್.ಜಿ. ರಾಯಕರರು, ಮುಂಬಯಿಯ ಸರ್. ಜೆ. ಜೆ. ಕಲಾಶಾಲೆಯ ಪದವೀಧರರು. ಅವರು 35 ವರ್ಷ ಕಲಾ ಅಧ್ಯಾಪಕರಾಗಿ ದುಡಿದು ನಿವೃತ್ತರಾಗಿರುವರು. ರಾಜ್ಯ ಕಲಾಶಿಕ್ಷಣ, ಕಲಾರಂಗಕ್ಕೆ ಚಿರಪರಿಚಿತರು. ಅವರು ನುರಿತ ಲೇಖಕರಾಗಿ, ೯ ಕೃತಿಗಳು ಪ್ರಕಟಗೊಂಡಿವೆ. ಆಧ್ಯಾತ್ಮಿಕ, ಧಾರ್ಮಿಕ, ಶೈಕ್ಷಣಿಕ, ಸಾಮಾಜಿಕ ಹಾಗೂ ಸಾಂಸ್ಕೃತಿಕ ರಂಗಗಳಲ್ಲಿ ತಮ್ಮನ್ನು ಸಕ್ರಿಯವಾಗಿ ತೊಡಗಿಸಿದ್ದಾರೆ. ಆಕಾಶವಾಣಿಯಿಂದ ಭಾಷಣಗಳು ಬಿತ್ತರಿಸಲ್ಪಟ್ಟಿವೆ. ರಾಜ್ಯದ ಪ್ರಮುಖ ಸಂಗ್ರಹಗಾರರು ಹಾಗೂ ಕಲಾವಿದರ ಬಳಗದಲ್ಲಿ ಚಿರಪರಿಚಿತರು. 1989ರಲ್ಲಿ ರಾಜ್ಯೋತ್ಸವ ಹಾಗೂ 1981ರಲ್ಲಿ ಲಲಿತಕಲಾ ಅಕಾಡೆಮಿಯ ಪ್ರಶಸ್ತಿ' ಗಳನ್ನು ನೀಡಿ ಸರಕಾರ ಅವರನ್ನು ...

READ MORE

Related Books