ಲಾಲ್‌ ಬಹಾದುರ್‌ ಶಾಸ್ತ್ರಿ

Author : ಮ.ಸು. ಮನ್ನಾರ್ ಕೃಷ್ಣರಾವ್

Pages 480

₹ 600.00




Year of Publication: 2022
Published by: ವಿದ್ಯಾಶ್ರೀ ಪ್ರಕಾಶನ
Address: ವಿದ್ಯಾರಣ್ಯಪುರ ಬೆಂಗಳೂರು 560097
Phone: 9880020888

Synopsys

ಲಾಲ್‌ ಬಹುದ್ದಾರ್‌ ಶಾಸ್ತ್ರಿ ಮನ್ನಾರ್‌ ಕೃಷ್ಣರಾವ್‌ ಅವರ ಕೃತಿಯಾಗಿದೆ. ಸಾಮಾನ್ಯವಾಗಿ ಜೀವನ ಚರಿತ್ರೆಯನ್ನು ಬರೆಯುವ ಲೇಖಕರು ನಾಯಕ ಅಥವಾ ನಾಯಕಿಯ ಮರಣಾನಂತರ ಉಪಸಂಹಾರ ಮಾಡಿ ಕೃತಿಯನ್ನು ಮುಗಿಸುವುದು ರೂಢಿಯಲ್ಲಿದೆ. ಮ. ಸು. ಕೃಷ್ಣ ರಾವ್‌ರವರು ಶಾಸ್ತ್ರೀಜಿಯ ಮರಣಾ ನಂತರ ಅವರ ಕುಟುಂಬದಲ್ಲಿನ ಬೆಳವಣಿಗೆಗಳನ್ನು ತಿಳಿಸುತ್ತಾರೆ, ತಾಯಿ ರಾಮ್ ದುಲಾರಿ ದೇವಿ ಕಾಕತಾಳೀಯವೆಂಬಂತೆ ಶಾಸ್ತ್ರೀಜಿಯವರ ಮರಣ ಹೊಂದಿದ 9 ತಿಂಗಳಿಗೆ ಸಾವನ್ನಪ್ಪುತ್ತಾರೆ. ಲಲಿತಾದೇವಿ ಪತಿಯವರ ಸಮಾಜ ಸೇವಾ ಕಾರ್ಯ ಮುಂದುವರಿಸಲು ಮಕ್ಕಳಿಗೆ ಪ್ರೇರಣೆಯಾಗುತ್ತಾರೆ. ಲಾಲ್ ಬಹಾದುರರ ಮಕ್ಕಳು ತಂದೆಯ ಹಾದಿಯಲ್ಲೇ ನಡೆಯುತ್ತಾರೆ. ಹುಟ್ಟಿನಿಂದ ಬಡತನದಲ್ಲೇ ಬಳಲಿದರೂ ಪ್ರಾಮಾಣಿಕತನ ಸರಳತೆ ಬಿಡದ ವ್ಯಕ್ತಿತ್ವ ಶಾಸ್ತ್ರೀಜಿಯವರದು, ಪ್ರಧಾನ ಮಂತ್ರಿಯಾದರೂ ಬ್ಯಾಂಕ್‌ ಬ್ಯಾಲೆನ್ಸ್ ಇಲ್ಲವೇ ಇಲ್ಲ, ಅವರ ಮರಣದ ನಂತರವೂ ಅವರ ಕುಟುಂಬ ಆರ್ಥಿಕವಾಗಿ ಬಹಳ ಕಷ್ಟವನ್ನು ಅನುಭವಿಸಿತು, ಲಾಲ್ ಬಹುದ್ದಾರ್‌ರಂತಹ ಸರಳ ವಿನಯಶೀಲ ಪ್ರಾಮಾಣಿಕ ವ್ಯಕ್ತಿಗಳು ರಾಜಕೀಯ ಇತಿಹಾಸದಲ್ಲಿ ಸಿಗುವುದು ದುರ್ಲಭ, ಇದೇ ಅವರ ಧೀರೋದಕ್ಕೆ ವ್ಯಕ್ತಿತ್ವಕ್ಕೆ ದೋಶಕವಾಗಿದೆ ಎಂಬುದನ್ನು ಈ ಕೃತಿಯಲ್ಲಿ ವಿವರಿಸಲಾಗಿದೆ.

About the Author

ಮ.ಸು. ಮನ್ನಾರ್ ಕೃಷ್ಣರಾವ್

ಮ.ಸು. ಮನ್ನಾರ್ ಕೃಷ್ಣರಾವ್ ಮಂಡ್ಯ ನಗರದ ಮೈಷುಗರ್ ಪ್ರೌಢಶಾಲೆಯ  ಮುಖ್ಯ ಶಿಕ್ಷಕರಾಗಿ ನಿವೃತ್ತರಾಗಿದ್ದಾರೆ. ಸದ್ಯ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಈವರೆಗೆ 12 ಕವನ ಸಂಕಲನಗಳು, 8 ಸತ್ಯ ಘಟನೆಗಳ ಗದ್ಯ ಕೃತಿಗಳು ಮತ್ತು ಅದ್ವಿತೀಯ ಭಾರತೀಯ ಜಿ.ಡಿ. ಬಿರ್ಲಾ ಅವರ ಜೀವನ ಚರಿತ್ರೆಗಳನ್ನು ಪ್ರಕಟಿಸಿದ್ದಾರೆ. ...

READ MORE

Related Books