ಲೇಖಕ ಡಾ.ವಿಜಯಕುಮಾರ ಪರುತೆ ಅವರು ಬರೆದ ಕೃತಿ-ಮಹಾತಪಸ್ವಿ ಕಲ್ಯಾಣ ಕರ್ನಾಟಕ ಭಾಗದಲ್ಲಿ ಶ್ರೀ ಗುರುನಂಜೇಶ್ವರ ಮಹಾ ಶಿವಯೋಗಿಗಳು ಪ್ರಸಿದ್ಧರು. ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಕೋಕಟನೂರ ಗ್ರಾಮದಲ್ಲಿ (11-10-1912) ಜನಿಸಿದ್ದು, ವಿದ್ಯಾಭ್ಯಾಸ ಮುಗಿಸಿ ಭರತನೂರಿನ ವಿರಕ್ತಮಠದ ಅಧಿಕಾರ ವಹಿಸುವರು.ತಮ್ಮ ಜೀವಿತಾವಧಿಯಲ್ಲಿ 32 ಸಲ 41 ದಿವಸಗಳ ವರೆಗೆ ಭಾರತದ ಅನೇಕ ಪವಿತ್ರ ಸ್ಥಳ ಗಳಲ್ಲಿ ಲೋಕ ಕಲ್ಯಾಣಕ್ಕಾಗಿ ಉಪವಾಸವಿದ್ದು ಆಧ್ಯಾತ್ಮಿಕ ಸಾಧನೆ ಮಾಡಿದ ಮಹಾ ಶಿವಯೋಗಿಗಳು. ಇವರು 31-03-1994 ರಲ್ಲಿ ಲಿಂಗೈಕ್ಯರಾದರು. ಧಾರ್ಮಿಕ, ಸಮಾಜ ಸೇವೆ, ಆಧ್ಯಾತ್ಮ ಕ್ಷೇತ್ರದಲ್ಲಿ ಸಾಧನೆ ಮಾಡಿರುವುದು.ಅವರ ಕುರಿತು ಬರೆದ ಈ ಚರಿತ್ರೆ ಪುಸ್ತಕ. ಈ ಕೃತಿಗೆ ಕಲಬುರ್ಗಿ ಜಿಲ್ಲೆಯ ಆಳಂದ ತಾಲೂಕಿನ ಖಜೂರಿ ಗ್ರಾಮದ ಶ್ರೀ ಕೋರಣೇಶ್ವರ ಮಠದ ವತಿಯಿಂದ"ಮುರುಘಾ ಶ್ರೀ ಪ್ರಶಸ್ತಿ ಲಭಿಸಿದೆ.
ಲೇಖಕ ಡಾ. ವಿಜಯಕುಮಾರ ಜಿ. ಪರುತೆ ಅವರು ಕಲಬುರಗಿ ಜಿಲ್ಲೆಯ ಕಾಳಗಿ ತಾಲೂಕಿನ ಕಾಳಗಿಯವರು. ತಂದೆ ಗುರುಪಾದಪ್ಪ, ತಾಯಿ ಗುರು ಬಾಯಿ. ಕಾಳಗಿಯಲ್ಲಿ ಎಸ್ ಎಸ್ ಎಲ್ ಸಿ ಹಾಗೂ ನಂತರ ಬಿಎ ಪದವಿವರೆಗೆ ಕಲಬುರಗಿಯಲ್ಲಿ, ಗುಲಬರ್ಗಾ ವಿಶ್ವವಿದ್ಯಾಲಯದಿಂದ ಎಂ.ಎ (ಹಿಂದಿ) ಹಾಗೂ ಧಾರವಾಡದ ಕರ್ನಾಟಕ ವಿ.ವಿ.ಯಿಂದ ಎಂ.ಎ (ಕನ್ನಡ) ಪದವಿ ಪಡೆದರು. ಗುಲಬಗಾ ವಿವಿಯಿಂದ (2006) ಪಿಎಚ್ ಡಿ ಪಡೆದರು. ಕನ್ನಡ ಸಾಹಿತ್ಯ ಪರಿಷತ್ ಚಿಂಚೋಳಿ ತಾಲೂಕು (2001-08) ಅಧ್ಯಕ್ಷರಾಗಿ, ಕಲಬುರ್ಗಿ ಜಿಲ್ಲಾ ಕ.ಸಾ.ಪರಿಷತ್ತಿನ ಗೌರವ (2008-12) ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದರು. ಕಲಬುರಗಿಯ ಶರಣಬಸವೇಶ್ವರ ಮಹಾವಿದ್ಯಾಲಯದಲ್ಲಿ ತಾತ್ಕಾಲಿಕ ...
READ MORE