ಪ್ರಭಾವತಿದೇವಿ ಜೀವನಚರಿತ್ರೆ ಪುಸ್ತಕವನ್ನು ಲೇಖಕ ನೀಲತ್ತಹಳ್ಳಿ ಕಸ್ತೂರಿ ಅವರು ರಚಿಸಿದ್ದಾರೆ. ಜಯಪ್ರಕಾಶ್ ನಾರಾಯಣರ ಪತ್ನಿ,. ಗಾಂಧೀಜಿಯ ಅಚ್ಚುಮೆಚ್ಚಿನ ಶಿಷ್ಯೆಯಾಗಿದ್ದ ಪ್ರಭಾವತಿದೇವಿ ಅವರು , ಗಾಂಧೀಜಿಯವರ ಉಪದೇಶದ ಜೀವಂತ ನಿದರ್ಶನದಂತೆ ಇದ್ದುದನ್ನೂ, ಗಂಡನ ನೆರಳಾಗಿ ಅವರು ಬದುಕಿದ್ದನ್ನೂ ದೇಶಕ್ಕಾಗಿ ತಮ್ಮ ಬಾಳನ್ನೆ ಮುಡಿಪಾಗಿಟ್ಟಿದ್ದನ್ನೂ ವಿವರಿಸಲಾಗಿದೆ.
ನೀಲತ್ತಹಳ್ಳಿ ಕಸ್ತೂರಿಯವರು ಮಾಗಡಿಯಲ್ಲಿ ಸೆಪ್ಟೆಂಬರ್ 29, 1931ರಂದು ಜನಿಸಿದರು. ತಂದೆ ವೆಂಕಟಾಚಾರ್ಯ, ತಾಯಿ ಸೀತಮ್ಮ. ಅಂಚೆ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದ ಅವರಿಗೆ ಸಾಹಿತ್ಯದಲ್ಲಿ ವಿಶೇಷ ಆಸಕ್ತಿ. ಅವರೊಬ್ಬ ಉತ್ತಮ ಅನುವಾದಕರು. ಚೀನಾ ಜಪಾನ್ ಕತೆಗಳು (ಅನುವಾದ) (ಕಾದಂಬರಿ), ಇದು ಭಾರತದ ದಾರಿ (ನಾಟಕ) ರಾಜೇಂದ್ರ ಪ್ರಸಾದ್, ಡಿ.ವಿ. ಗುಂಡಪ್ಪ ಜೀವನ ಮತ್ತು ಸಾಧನೆ, ಸಿದ್ಧವನಹಳ್ಳಿ ಕೃಷ್ಣಶರ್ಮ - ವ್ಯಕ್ತಿ ಮತ್ತು ಶಕ್ತಿ ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಬಹುಮಾನ ಸಂದಿದೆ. ...
READ MORE