ಬಿ.ಕೆ.ಸುಮಿತ್ರ 75

Author : ನಾ. ದಾಮೋದರ ಶೆಟ್ಟಿ

Pages 224

₹ 300.00




Year of Publication: 2021
Published by: ಗಾಯಕ ಗೋಪಿ
Address: ನಂ 36, ‘ಸಪ್ತಸ್ವರ’, 2ನೆ ಅಡ್ಡರಸ್ತೆ, ಟಿ.ಪಿ. ವೇಣುಗೋಪಾಲ್ ಲೇ ಔಟ್, ಗಂಗಾನಗರ, ಬೆಂಗಳೂರು - 560032

Synopsys

ಲೇಖಕ ನ ದಾಮೋದರ ಶೆಟ್ಟಿ ಅವರ ಪ್ರಧಾನ ಸಂಪಾದಕತ್ವದಲ್ಲಿ ಹೊರಬಂದ ‘ಬಿ.ಕೆ.ಸುಮಿತ್ರ- 75’ ಕೃತಿಯು ಗಾಯಕ ಲೋಕದಲ್ಲಿ ಸಹಸ್ರಾರು ಕಲಾರಾಧಕರಿಗೆ ಕಲಾ ಸಂಸ್ಕಾರವನ್ನು ಧಾರೆ ಎರೆದ ಗಾನ ವಿಶಾರದೆ, ನಾಡೋಜ ಬಿ.ಕೆ.ಸುಮಿತ್ರ ಅವರ ಬಗೆಗಿನ ಕೃತಿ. ಲಕ್ಷ್ಮಣ ಕೊಡಸೆ ಹಾಗೂ ಸಂಧ್ಯಾ ಭಟ್ ಸಂಪಾದಕರಾಗಿ, ಶ್ರೀನಿವಾಸ್ ಜಿ.ಕಪ್ಪಣ್ನ, ವೆಂಕಟೇಶಮೂರ್ತಿ ಶಿರೂರ್ ಅವರ ಸಲಹೆಯೊಂದಿಗೆ ಈ ಕೃತಿ ನಿರ್ಮಾಣವಾಗಿದೆ. ಕಲಾಜಗತ್ತು ಕಾಣುವಷ್ಟು ಸುಂದರವಲ್ಲ; ಕೇಳುವಷ್ಟು ಮಧುರವಲ್ಲ. ಒಂದು ಮಟ್ಟ ಮುಟ್ಟಬೇಕಾದರೆ, ಹಾಡಿದ್ದು ಕೇಳುಗರ ಮನಸ್ಸನ್ನು ತಟ್ಟಬೇಕಾದರೆ, ಬೇಕಾದಷ್ಟು ಏರಿಳಿತಗಳನ್ನು ದಾಟಬೇಕಾಗುತ್ತದೆ. ಹಾಗೆ ದಾಟಿ ಏರಿಳಿತಗಳನ್ನು ಮೆಟ್ಟಿ ನಿಂತ ಕನ್ನಡದ ಮಹಾನ್ ಪ್ರತಿಭೆ ಅಂದರೆ ಅದು ಬಿ.ಕೆ.ಸುಮಿತ್ರ ಎಂಬುದಾಗಿ ಕಲಾವಿದ ಎಸ್. ಶಿವರಾಂ ಕೃತಿಯ ಮುನ್ನಡಿಯಲ್ಲಿ ಬರೆದಿದ್ದಾರೆ. ಕೃತಿಯ ಎರಡನೆಯ ಉತ್ತರರಂಗದಲ್ಲಿ ಎಸ್.ಪಿ.ಬಾಲಸುಬ್ರಹ್ಮಣ್ಯ, ಬಿವಿ ಶ್ರೀನಿವಾಸ್ , ರತ್ನಮಾಲಾ ಪ್ರಕಾಶ್, ಶಿವಮೊಗ್ಗ ಸುಬ್ಬಣ್ಣ, ಉಪಾಸನಾ ಮೋಹನ್, ಶಶಿಧರ ಕೋಟೆ, ನಾಗತ್ತಿಹಳ್ಳಿ ಚಂದ್ರಶೇಖರ್, ದೊಡ್ಡರಂಗೇಗೌಡ, ಎನ್.ಎಸ್.ಲಕ್ಷ್ಮೀನಾರಾಯಣ ಭಟ್ಟ, ಬಿ.ಆರ್. ಲಕ್ಷ್ಮಣ ರಾವ್ ಸೇರಿದಂತೆ ಅನೇಕ ಹಿರಿಯ ಗಾಯಕ, ಗಾಯಕಿಯರು, ಲೇಖಕರು, ಕವಿ, ಸಾಹಿತಿಗಳು ಬಿ.ಕೆ.ಸುಮಿತ್ರ ಅವರ ಬಗೆಗೆ ತಮ್ಮ ಮಾತುಗಳನ್ನು ಬರಹದ ರೂಪದಲ್ಲಿ ಈ ಪುಸ್ತಕದಲ್ಲಿ ನೀಡಿದ್ದಾರೆ. ಕೃತಿಯ ಮೂರನೆಯ ಉತ್ತರರಂಗದಲ್ಲಿ ಕುಟುಂಬ ಪುರಾಣೆ ಎಂಬ ಭಾಗವನ್ನು ಹೊಂದಿದ್ದು, ಬಿ.ಕೆ.ಸುಮಿತ್ರ ಅವರ ಪತಿ ಸುಧಾಕರ್, ಮಗ-ಮಗಳು, ತಂಗಿ ಹೀಗೆ ಕುಟುಂಬದ ಅನೇಕ ಸದಸ್ಯರು ಸುಮಿತ್ರ ಅವರ ಬಗ್ಗೆ ಬರೆದಿದ್ದಾರೆ..

About the Author

ನಾ. ದಾಮೋದರ ಶೆಟ್ಟಿ
(02 August 1951)

ನಟ, ನಾಟಕಕಾರ, ಸಾಹಿತಿ ನಾ. ದಾಮೋದರ ಶೆಟ್ಟಿ ಪ್ರಾರಂಭಿಕ ಶಿಕ್ಷಣವನ್ನು ಹುಟ್ಟೂರಾದ ಕೇರಳದ ಕಾಸರಗೋಡು ಜಿಲ್ಲೆಯ ಕುಂಬಳೆಯಲ್ಲಿ ಪಡೆದರು. ಆನಂತರ ಮೈಸೂರು ವಿಶ್ವವಿದ್ಯಾಲಯದಿಂದ ಎಂ.ಎ. ಪದವಿ ಹಾಗೂ ಡಾ. ಶ್ರೀನಿವಾಸ ಹಾವನೂರರ ಮಾರ್ಗದರ್ಶನದಲ್ಲಿ ‘ಮುದ್ದಣನ ಶಬ್ದ ಪ್ರತಿಭೆ’ ಮಹಾಪ್ರಬಂಧ ಮಂಡಿಸಿ ಮಂಗಳೂರು ವಿಶ್ವವಿದ್ಯಾಲಯದಿಂದ ಪಿಎಚ್.ಡಿ. ಪದವಿ ಪಡೆದಿದ್ದಾರೆ. 1975ರಲ್ಲಿ ಮಂಗಳೂರಿನ ಸಂತ ಅಲೋಷಿಯಸ್ ಕಾಲೇಜಿನಲ್ಲಿ ಕನ್ನಡವಿಭಾಗದ ಪ್ರಾಧ್ಯಾಪಕರಾಗಿ ವೃತ್ತಿ ಆರಂಭಿಸಿದ ಅವರು 36 ವರ್ಷಗಳ ದೀರ್ಘಸೇವೆಯ ನಂತರ 2011ರಲ್ಲಿ ನಿವೃತ್ತಿಯಾಗಿದ್ದಾರೆ.  ಚಿಕ್ಕಂದಿನಿಂದಲೇ ನಾಟಕ, ಯಕ್ಷಗಾನ ಕಲೆಯ ಬಗ್ಗೆ ಆಸಕ್ತಿ ಹೊಂದಿದ್ದ ಅವರು ಕೇರಳದ ತ್ರಿಶೂರಿನ ಸ್ಕೂಲ್‌ ಆಫ್‌ ...

READ MORE

Related Books