ಭಾರತಿ ಪಾಟೀಲ

Author : ಸುಜಾತಾ ಚಲವಾದಿ

Pages 46

₹ 60.00




Year of Publication: 2021
Published by: ಬೆರಗು ಪ್ರಕಾಶನ
Address: ಕಡಣಿ -586202, ಆಲಮೇಲ ತಾಲೂಕು, ವಿಜಯಪುರ ಜಿಲ್ಲೆ
Phone: 7795341335

Synopsys

ಲೇಖಕಿ ಸುಜಾತ ಚಲವಾದಿ ಅವರ ಕೃತಿ- ಸಂಘಟನಾ ಚತುರೆ, ಬಂಡಾಯ ದನಿಯ ಕವಯಿತ್ರಿ ಭಾರತಿ ಪಾಟೀಲ ಅವರ ಜೀವನ ಚಿತ್ರಣವಾಗಿದೆ. ಕೃತಿಗೆ ಬೆನ್ನುಡಿ ಬರೆದಿರುವ ರಮೇಶ ಎಸ್. ಕತ್ತಿ ಅವರು, ನಾಡಿನ ಶ್ರೇಷ್ಠ ಮಕ್ಕಳ ಸಾಹಿತಿ ಹಾಗೂ ಸಾಹಿತ್ಯದಲ್ಲಿ ತೀವ್ರ ಆಸಕ್ತಿಯನ್ನು ಬೆಳೆಸಿಕೊಂಡು ಜಿಲ್ಲೆಯ ಬೆರಳಣಿಕೆಯ ಮಹಿಳಾ ಸಾಹಿತಿಗಳಲ್ಲಿ ಎದ್ದು ಕಾಣುವ ಹೆಸರು ಶ್ರೀಮತಿ ಭಾರತಿ ಪಾಟೀಲ. ಬಂಡಾಯ ಸಾಹಿತ್ಯ ಸಂಘಟನೆಯ ಮುಂಚೂಣಿಯಲ್ಲಿದ್ದುಕೊಂಡು ತಮ್ಮ ಬರಹದ ಮೂಲಕ ಸಹೃದಯರಿಗೆ ಉತ್ತಮ ಕೃತಿಗಳನ್ನು ನೀಡಿದ್ದಾರೆ. ಕಡಣಿಯಲ್ಲಿ ಜರುಗಿದ ಸಿಂದಗಿ ತಾಲ್ಲೂಕಿನ ಪ್ರಥಮ ಬಂಡಾಯ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಸ್ಥಾನದ ಗೌರವಕ್ಕೆ ಭಾಜನರಾದವರು. ಅಲ್ಲದೇ, ವಿಜಾಪುರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಇತಿಹಾಸದಲ್ಲಿ ಮೊದಲ ಬಾರಿಗೆ ಜಿಲ್ಲಾ ಚುನಾಯಿತ ಅಧ್ಯಕ್ಷೆಯಾದ ಮಹಿಳೆ ಎಂಬ ಗೌರವಕ್ಕೂ ಪಾತ್ರರಾಗಿದ್ದಾರೆ. ಶ್ರೀಮತಿ ಭಾರತಿ ಪಾಟೀಲ ಅವರು ಸಾಹಿತ್ಯ, ಸಂಘಟನೆ ಎರಡರಲ್ಲೂ ಗಮನಾರ್ಹ ಸೇವೆ ಸಲ್ಲಿಸಿದ್ದಾರೆ. ಇವರ ಬದುಕು ಬರಹವನ್ನು ಹೊತ್ತಿಗೆ ರೂಪದಲ್ಲಿದೆ’ ಎಂದು ಅಭಿಪ್ರಾಯಿಸಿದ್ದಾರೆ.

About the Author

ಸುಜಾತಾ ಚಲವಾದಿ

ಲೇಖಕಿ ಸುಜಾತಾ ಚಲವಾದಿ ಅವರು ತಾಳಿಕೋಟಿಯ ಎಸ್.ಕೆ.ಕಲಾ ವಾಣಿಜ್ಯ ಮತ್ತು ವಿಜ್ಞಾನ ಮಹಾ ವಿದ್ಯಾಲಯದ ಸಹಾಯಕ ಪ್ರಾಧ್ಯಾಪಕಿ.ತಂದೆ ಚಂದಪ್ಪ , ತಾಯಿ ಚನ್ನಬಸಮ್ಮ. "ಕೊರಗು,ಕಾವ್ಯ,ಅನುರಣನ' ವಿಮರ್ಶಾ ಲೇಖನಗಳ ಕೃತಿ ಪ್ರಕಟಣೆ ಹಾಗೂ ಮುಂಬೈ ಕರ್ನಾಟಕದ " ಮಹಿಳಾ ಕಾದಂಬರಿಗಳು,: ಒಂದು ಅಧ್ಯಯನ,’ ವಿಷಯವಾಗಿ ಸಲ್ಲಿಸಿದ ಮಹಾಪ್ರಬಂಧಕ್ಕೆ ವಿಜಯಪುರದ ಅಕ್ಕಮಹಾದೇವಿ ಮಹಿಳಾ ವಿ ವಿ ಡಾಕ್ಟರೇಟ್ ಪದವಿ ನೀಡಿದೆ. ಅಚಲ ತ್ರೈಮಾಸಿಕ ಪತ್ರಿಕೆಯ ಸಹ ಸಂಪಾದಕಿಯೂ ಆಗಿದ್ದಾರೆ. ನಾಡಿನ ವಿವಿಧ ಸಂಘ ಸಂಸ್ಥೆಗಳು ನೀಡಿದ ಅತ್ಯುತ್ತಮ ಯುವ ವಿಜ್ಞಾನಿ, ಸಾಹಿತ್ಯ ಸಿರಿ, ಸಿದ್ಧ ಸಿರಿ' ರವೀಂದ್ರನಾಥ ಟ್ಯಾಗೋರ್ ರಾಷ್ಟೀಯ ಪ್ರಶಸ್ತಿ,,ಡಾ ...

READ MORE

Related Books