ಡಾ.ಆರ್‌.ಸಿ. ಹಿರೇಮಠ

Author : ಸಿ.ಕೆ ನಾವಲಗಿ

Pages 32

₹ 10.00




Year of Publication: 2008
Published by: ಕರ್ನಾಟಕ ಜಾನಪದ ಪರಿಷತ್ತು
Address: ಪ್ರಿಯದರ್ಶಿನಿ ಲೇಔಟ್‌, ಎಂ.ಎಸ್. ರಾಮಯ್ಯ ಆಸ್ಪತ್ರೆ ಗೇಟ್‌ ಬಳಿ, ನ್ಯೂ ಬಿಇಎಲ್‌ ರಸ್ತೆ, ಬೆಂಗಳೂರು-560054

Synopsys

ಭಾಷಾವಿಜ್ಞಾನ, ವಚನಗಳಿಗೆ ಸಂಬಂಧಿಸಿದಂತೆ ಪ್ರಮುಖ ಕೆಲಸ ಮಾಡಿದ ರುದ್ರಯ್ಯ ಚಂದ್ರಯ್ಯ ಹಿರೇಮಠ (ಆರ್.ಸಿ. ಹಿರೇಮಠ) ಕನ್ನಡದ ಪ್ರಮುಖ ಸಂಶೋಧಕ ಆಗಿದ್ದರು. ಪ್ರಸ್ತುತ ಕೃತಿಯು ಆರ್‌.ಸಿ. ಹಿರೇಮಠ ಅವರ ಬದುಕು-ಬರೆಹ-ಸಾಧನೆಗಳ ಕುರಿತು ಸಂಕ್ಷಿಪ್ತ ಮಾಹಿತಿ ನೀಡುತ್ತದೆ.  ಸಿ.ಕೆ. ನಾವಲಗಿ ಅವರು ಈ ಕೃತಿಯನ್ನು ರಚಿಸಿದ್ದಾರೆ. ಹಿರೇಮಠ ಅವರು ರೋಣ ತಾಲ್ಲೂಕಿನ ಕುರುಡಗಿಯಲ್ಲಿ 1920ರ ಜನೆವರಿ 15ರಂದು ಜನಿಸಿದರು. ತಂದೆ ಚಂದ್ರಯ್ಯ- ತಾಯಿ ವೀರಮ್ಮ. ತಮ್ಮ ವಿದ್ಯಾಭ್ಯಾಸವನ್ನು ಧಾರವಾಡ, ಬೆಳಗಾವಿಯಲ್ಲಿ ಪೂರೈಸಿದರು. ಮುಂಬೈ ವಿಶ್ವವಿದ್ಯಾಲಯದಿಂದ ಕನ್ನಡ ಎಂ.ಎ.ಪದವಿ (1940) ಗಳಿಸಿದರು. ಬಾಗಲಕೋಟೆಯ ಬಸವೇಶ್ವರ ಕಾಲೇಜಿನಲ್ಲಿ ಕನ್ನಡ ಅಧ್ಯಾಪಕರಾಗಿ ವೃತ್ತಿಜೀವನವನ್ನು ಪ್ರಾರಂಭಿಸಿದ್ದ ಅವರು ಪಿಎಚ್.ಡಿ ಪದವಿ (1951) ಗಳಿಸಿದರು. ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಅಧ್ಯಾಪಕರಾಗಿ, ಪ್ರಾಧ್ಯಾಪಕರಾಗಿ ಮುಖ್ಯಸ್ಥರಾಗಿ, ಕುಲಪತಿ (1975-1980)ಗಳಾಗಿದ್ದರು. ಕನ್ನಡ ವಿಭಾಗ ಇವರ ಕಾಲದಲ್ಲಿ ಕನ್ನಡ ಅಧ್ಯಯನ ಪೀಠವಾಯಿತು. ಕುಲಪತಿಗಳಾಗಿ ನಿವೃತ್ತರಾದ ಅನಂತರ ತಿರುವನಂತಪುರದ ಅಂತರ್ ರಾಷ್ಟ್ರೀಯ ದ್ರಾವಿಡ ಭಾಷಾವಿಜ್ಞಾನದ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದರು.

ಹುಬ್ಬಳ್ಳಿಯಲ್ಲಿ ನಡೆದ 59ನೇ ಕನ್ನಡ ಸಾಹಿತ್ಯ ಸಮ್ಮೇಳನ (1990) ಅಧ್ಯಕ್ಷತೆ ವಹಿಸಿದ್ದರು. ಭಾಷಾಶಾಸ್ತ್ರ, ವೀರಶೈವ ಸಾಹಿತ್ಯ, ವಚನ ಸಾಹಿತ್ಯ ಕ್ಷೇತ್ರಗಳಿಗೆ ಸಂಬಂಧಿಸಿದ ವಿದ್ವತ್‍ಪೂರ್ಣ ಗ್ರಂಥಗಳನ್ನು ಸಂಪಾದಿಸಿದ ಹೆಗ್ಗಳಿಕೆ ಇವರದು. 1

ಸುಮನಾಂಜಲಿ, ಮೌನ ಸ್ಪಂದನ, ಸಾಹಿತ್ಯ ಸಂಸ್ಕೃತಿ, ಕವಿ ಪದ್ಮಣಾಂಕ, ತಥಾಗತ ಚಾರಿತ್ರ್ಯ(ಕಾವ್ಯ), ಬಸವ ಪುರಾಣ, ಪದ್ಮರಾಜಹುರಾನಿ, ರಾಜಶೇಖರ ವಿಳಾಸ, ರಾಮಚಂದ್ರಚರಿತ ಪುರಾಣ, ಅಮೃತ ಬಿಂದುಗಳು (ಸಂಪಾದನೆ), ಲಿಂಗ್ವಿಸ್ಟಿಕ್ ಇನ್ವೆಸ್ಟಿಗೇಷನ್ ಆಫ್ ಸಂಪ್ಲಾಬ್ಲಂಸ್ ಆನ್ ದಿ ರಿಲೇಷನ್‍ಷಿಪ್ ಆಫ್ ಇಂಡೋ-ಆರ್ಯನ್ ಅಂಡ್ ದ್ರಾವಿಡಿಯನ್ ಲ್ಯಾಂಗ್ವೇಜಸ್(ಪಿಎಚ್.ಡಿ ಗ್ರಂಥ), ಪ್ಲೇಸ್ ನೇಮ್ಸ್ ಇನ್ ಕರ್ನಾಟಕ, ದಿ ಸ್ಟ್ರಕ್ಚರ್ ಆಫ್ ಕನ್ನಡ, ಕಾಂಪೌಂಡ್‍ವರ್ಡ್ಸ್ ಇನ್ ಕನ್ನಡ ಇತ್ಯಾದಿ ಕೃತಿಗಳು ಇಂಗ್ಲಿಷ್‍ನಲ್ಲಿ ರಚಿತವಾಗಿವೆ. ಸಿದ್ಧರಾಮೇಶ್ವರ ವಚನಗಳು, ಬಸವಣ್ಣನವರ ವಚನಗಳು, ನೀಲಮ್ಮ ಮತ್ತು ಲಿಂಗಮ್ಮನ ವಚನಗಳು, ಇಪ್ಪತ್ತೇಳು ಶಿವಶರಣೆಯರ ವಚನಗಳು, ಷಟ್‍ಸ್ಥಲ ಜ್ಞಾನಸಾರಾಮೃತ ವೀರಶೈವ ಚಿಂತಾಮಣಿ, ಚೆನ್ನಬಸವಣ್ಣನವರ ವಚನಗಳು ಮೊದಲಾದವು ವಚನ ಸಾಹಿತ್ಯಕ್ಕೆ ಸಂಬಂಧಿಸಿದ ಸಂಪಾದಿತ ಕೃತಿಗಳು. ಸಾಹಿತ್ಯ ಕ್ಷೇತ್ರದ ಮಹತ್ವದ ಸಾಧನೆಗಾಗಿ ಹಲವಾರು ಗೌರವ ಪುರಸ್ಕಾರಗಳಿಗೆ ಪಾತ್ರರಾಗಿದ್ದ ಹಿರೇಮಠ ಅವರು 1998ರ ನವಂಬರ್ 3 ರಂದು ನಿಧನರಾದರು.

About the Author

ಸಿ.ಕೆ ನಾವಲಗಿ
(01 August 1956)

ಡಾ. ಸಿ.ಕೆ. ನಾವಲಗಿ ಎಂತಲೇ ಪರಿಚಿತರಾಗಿರುವ ಲೇಖಕ ಚೆನ್ನಬಸಪ್ಪ ಕಲ್ಲಪ್ಪ ನಾವಲಗಿ ಅವರು 1956 ಆಗಸ್ಟ್‌ 1ರಂದು ಬೆಳಗಾವಿ ಜಿಲ್ಲೆಯ ಕಿತ್ತೂರು ತಾಲ್ಲೂಕಿನ ಬಸರಕೋಡ ಗ್ರಾಮದಲ್ಲಿ ಜನಿಸಿದರು. ಕನ್ನಡ ಜಾನಪದ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದ ಇವರು ಕನ್ನಡ ಅಧ್ಯಾಪಕರಾಗಿ ವೃತ್ತಿ ಆರಂಭಿಸಿ, ಪಾಚಾರ್ಯರಾಗಿ ನಿವೃತ್ತಿ ಹೊಂದಿದ್ದಾರೆ.  ಇವರು ರಚಿಸಿದ ಪ್ರಮುಖ ಕೃತಿಗಳೆಂದರೆ ಜಾನಪದ ಸ್ಪಂದನ, ಬೇಂದ್ರೆಯವರ ಕಾವ್ಯದ ಮೇಲೆ ಜಾನಪದ ಪ್ರಭಾವ, ಗಾದೆಗಳಲ್ಲಿ ಹಾಸ್ಯ, ಶರಣ ವಿಚಾರವಾಹಿನಿ, ವಚನ ಸಾಹಿತ್ಯ ಮತ್ತು ಜಾನಪದ, ದಿಕ್ಸೂಚಿ, ವಚನ ಸಾಹಿತ್ಯದಲ್ಲಿ ಜಾನಪದ ಅಂಶಗಳು, ಗ್ರಾಮೀಣ ಗ್ರಹಿಕೆ, ಕಥನ ಕವನ ಸಂಚಯ, ...

READ MORE

Related Books