ಸಾಕ್ರೆಟಿಸ್ -ಸತ್ಯಪಥಿಕ ಎಂಬುದು ಲೇಖಕಿ ಎಲ್.ವಿ. ಶಾಂತಕುಮಾರಿ ಅವರು ಬರೆದ ಜೀಔನ ಚಿತ್ರ. ಸಾಕ್ರೆಟಿಸ್ ಅವರು ಇಡೀ ವಿಶ್ವ ಕಂಡ ತತ್ವಜ್ಞಾನಿ. ಆಡಳಿತ, ರಾಜಸತ್ತೆ, ಜನಸಾಮಾನ್ಯರ ಅಭಿವೃದ್ಧಿ, ಜೀವನದ ಉದ್ದೇಶ ಇತ್ಯಾದಿ ಕುರಿತ ಆತನ ವಿಚಾರಗಳನ್ನು ತತ್ವಜ್ಞಾನಿ ಪ್ರೇಟೊ ಎಂಬಾತನು ಆದರ್ಶ ಗಣರಾಜ್ಯ ಎಂಬ ಕೃತಿಯಲ್ಲಿ ಹಿಡಿದಿಟ್ಟಿದ್ದಾನೆ. ಆ ಮೂಲಕವೇ ಸಾಕ್ರೆಟಿಸ್ ನನ್ನು ಜೀವಂತವಾಗಿರಸಿರುವ ಶ್ರೇಯಸ್ಸು ಪ್ರೊಟೋಗೆ ಸಲ್ಲುತ್ತದೆ. ಸಾಕ್ರೆಟಿಸ್ ಎಂಬ ವ್ಯಕ್ತಿ, ಆತನ ವೈಚಾರಿಕತೆ, ಅಂದಿನ ರಾಜಸತ್ತೆಯು ಈತನಿಗೆ ನೀಡಿದ ಹಿಂಸೆ ಇತ್ಯಾದಿಗಳನ್ನು ಒಂದೆಡೆ ಕಟ್ಟಿಕೊಡುವ ಪರಿಣಾಮಕಾರಿ ಕೃತಿ ಇದು.
ಶಾಂತಕುಮಾರಿ ಎಲ್.ವಿ., ಎಂ.ಎ.(ಇಂಗ್ಲಿಷ್) ಹಿಂದಿ(ವಿಶಾರದ) ಪದವೀಧರರು. ನಿವೃತ್ತ ಪ್ರಾಧ್ಯಾಪಕರು. ಮೈಸೂರಿನಲ್ಲಿ 10-03-1938 ರಂದು ಜನಿಸಿದರು. ತಂದೆ ಲಕ್ಕೇನಹಳ್ಳಿ ವೆಂಕಟರಾಮಯ್ಯ, ತಾಯಿ- ಲಲಿತಮ್ಮ. ಎಚ್.ವಿ. ಸಾವಿತ್ರಮ್ಮ-2006, ಅನುಪಮಾ ನಿರಂಜನ -2016,, ಸಿ.ಎನ್. ಜಯಲಕ್ಷ್ಮೀದೇವಿ -2007, ಸುಧಾ ಮೂರ್ತಿ-2010 ರಲ್ಲಿ ಇವರ ಪ್ರಕಟಿತ ಕೃತಿಗಳು. ನೆನಪು ಗರಿ ಬಿಚ್ಚಿದಾಗ, ಚೈತನ್ಯದ ಚಿಲುಮೆ-ಜೀವನ ಚಿತ್ರಗಳು. ಪಪೆ ಮತ್ತು ಇತರ ಕತೆಗಳನ್ನು ಭಾಷಾಂತರಿಸಿದ್ದಾರೆ. ಯುಗಸಾಕ್ಷಿ-2009 ರಲ್ಲಿ ವಿಮರ್ಶಾ ಕೃತಿ ಪ್ರಕಟವಾಗಿದೆ. ...
READ MORE