ಹಿರಿಯ ಲೇಖಕ ಡಾ. ಎಸ್.ವಿ. ಸಂಪತ್ಕುಮಾರಾಚಾರ್ಯ ಅವರು ರಚಿಸಿದ ಕೃತಿ-ಶ್ರೀ ತ್ಯಾಗರಾಜ ಕೃತಿಮಂಜರಿ, ಸಂಪುಟ-1 ತ್ಯಾಗರಾಜರು ಕರ್ನಾಟಕ ಸಂಗೀತ ಪರಂಪರೆಯಲ್ಲಿ ಬಹುದೊಡ್ಡ ಹೆಸರು. ಕರ್ನಾಟಕ ಸಂಗೀತ ಪದ್ಧತಿಯ ಮುಖ್ಯ ರಚನೆಕಾರರು ಎಂದು ಪರಿಗಣಿಸಲಾಗುತ್ತಿದೆ. ಅವರು ಶ್ರೀರಾಮನ ಭಕ್ತರು. ದಕ್ಷಿಣ ಭಾರತದ ಎಲ್ಲ ಮುಖ್ಯ ದೇವಸ್ಥಾನಗಳಿಗೆ ಭೇಟಿ ನೀಡಿ, ಅಲ್ಲಿಯ ದೇವತೆಗಳ ಕುರಿತು ಕೃತಿಗಳನ್ನು ರಚಿಸಿದ್ದು, ಸುಮಾರು 700ಕ್ಕೂ ಅಧಿಕ ಎನ್ನಲಾಗುತ್ತದೆ. ಈ ಕುರಿತು ವಿಸ್ತೃತ ಮಾಹಿತಿ ಒಳಗೊಂಡ ಕೃತಿ ಇದು.
ವಿ.ಎಸ್. ಸಂಪತ್ಕುಮಾರಾಚಾರ್ಯ ಮೈಸೂರು ಜಿಲ್ಲೆಯ ಚಾಮರಾಜ ತಾಲ್ಲೂಕಿನ ವೆಂಕಟಯ್ಯನ ಛತ್ರ ಅಗ್ರಹಾರದವರು.ಮೈಸೂರು ವಿಶ್ವವಿದ್ಯಾಲಯದಿಂದ ಬಿ.ಎ. (ಆನರ್ಸ್) ಬಿ.ಎಡ್. ರಾಷ್ಟ್ರಭಾಷಾ ವಿಶಾರದ ಹಾಗೂ ಕಾಶಿಯ ಹಿಂದೂ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವೀಧರರು. ‘ಹೊಯ್ಸಳ ಯುಗದ ಜನಜೀವನ’ ಎಂಬುದು ಮೈಸೂರು ವಿಶ್ವವಿದ್ಯಾಲಯಕ್ಕೆ ಸಲ್ಲಿಸಿ, ಪಿಎಚ್ ಡಿ ಪಡೆದ ಮಹಾಪ್ರಬಂಧ. ತಮಿಳುನಾಡಿನ ಪ್ರೌಢಶಾಲೆಯೊಂದರಲ್ಲಿ ಶಿಕ್ಷಕರಾದರು. ಕರ್ನಾಟಕ ಪ್ರೌಢಶಾಲೆ ಹಾಗೂ ಪದವಿ ಪೂರ್ವ ಕಾಲೇಜುಗಳಲ್ಲಿ ಉಪನ್ಯಾಸಕರಾಗಿ, ಪ್ರಾಂಶುಪಾಲರಾಗಿ ನಿವೃತ್ತರಾದರು. ಸಂಗೀತ ಸಾಹಿತ್ಯ ಕ್ಷೇತ್ರದಲ್ಲೂ ಇವರ ಆಸಕ್ತಿ. ಕೃತಿಗಳು: ಸಂಗೀತ ಮತ್ತು ಅದರ ಇತಿಹಾಸ ವಾದ್ಯಗಳು, ನಾನಾ ನೃತ್ಯ ಪ್ರಕಾರಗಳು, ಶಾಸ್ತ್ರ ಗ್ರಂಥಗಳು, ಸಂಗೀತಜ್ಞರು, ಸಂಗೀತಗಾರರು ಮುಂತಾದ ನಾನಾ ವಿವರಣೆಗಳು ಒಳಗೊಂಡ ವಿಶ್ವಕೋಶದಂತಿರುವ ...
READ MORE