ಲೇಖಕಿ ಪ್ರೀತಿ ನಾಗರಾಜ್ ಅವರ ಕೃತಿ-ಕಣ್ಣಾ ಮುಚ್ಚೇ ಕಾಡೇ ಗೂಡೇ...! ರಂಗ ನಟಿ, ಕಲಾವಿದೆ ಬಿ. ಜಯಶ್ರೀ ಅವರ ಬದುಕು- ರಂಗ ಸಾಧನೆ-ಮಾನವೀಯ ವ್ಯಕ್ತಿತ್ವದ ಪರಿಚಯಿಸುವ ಕೃತಿ ಇದು. ರಾಷ್ಟ್ರೀಯ ನಾಟಕ ಶಾಲೆಯ ಅಧ್ಯಕ್ಷರೂ ಆಗಿರುವ ಬಿ. ಜಯಶ್ರೀ ತಮ್ಮ ರಂಗ ಪ್ರತಿಭೆಯ ಮೂಲಕ ದೇಶದ ಅತ್ಯುನ್ನತ ನಾಟಕ ಸಂಸ್ಥೆಯ ಉನ್ನತ ಪದವೀಗೇರಿದವರು. ತುಮಕೂರು ಜಿಲ್ಲೆಯ ಗುಬ್ಬಿ ಯಲ್ಲಿರುವ ಗುಬ್ಬಿ ವೀರಣ್ಣನವರ ರಂಗ ಶಾಲೆಯ ಚಟುವಟಿಕೆಗಳನ್ನು ನಿರ್ದೇಶಿಸುತ್ತಿದ್ದಾರೆ.
ಪತ್ರಕರ್ತರು, ಬರಹಗಾರರಾದ ಪ್ರೀತಿ ನಾಗರಾಜ ಅವರ ಹುಟ್ಟೂರು ದಾವಣಗೆರೆ. ವೃತ್ತಿಯಲ್ಲಿ ಪತ್ರಕರ್ತರಾಗಿರುವ ಇವರು ಸಾಹಿತ್ಯ ಕೃಷಿಯಲ್ಲಿಯೂ ತೊಡಗಿಕೊಂಡಿದ್ದಾರೆ. ಇಂಡಿಯನ್ ಎಕ್ಸ್‌ಪ್ರೆಸ್, ಡೆಕ್ಕನ್ ಹೆರಾಲ್ಡ್ ಹಾಗೂ ಸಿಎನ್‌ಬಿಸಿ ಮುಂತಾದ ಎಲೆಕ್ಟ್ರಾನಿಕ್ ಮೀಡಿಯಾಗಳಲ್ಲಿ ಕಾರ್ಯನಿರ್ವಹಿಸಿದ್ದಾರೆ. ಇವರು ಬಿ. ಜಯಶ್ರೀ ಅವರ ಆತ್ಮಕತೆ ’ಕಣ್ಣಾಮುಚ್ಚೇ ಕಾಡೇಗೂಡೇ’ ಕೃತಿಯನ್ನು ನಿರೂಪಣೆ ಮಾಡಿದ್ದಾರೆ. ಪ್ರಜಾವಾಣಿ ಪತ್ರಿಕೆಗೆ ಬರೆಯುತ್ತಿದ್ದ ಮಿರ್ಚಿ ಮಂಡಕ್ಕಿ ಅಂಕಣವೂ ಅದೇ ಹೆಸರಿನ ಪುಸ್ತಕವಾಗಿ ಪ್ರಕಟಗೊಂಡಿದೆ. ಇವರಿಗೆ ಕನ್ನಡ ಸಾಹಿತ್ಯ ಅಕಾಡೆಮಿಯ ಪುಸ್ತಕ ಬಹುಮಾನ ಹಾಗೂ ಇವರು ಬರೆದ ಪಂಚಾಯತ್ ರಾಜ್ ವ್ಯವಸ್ಥೆಯಲ್ಲಿ ಮಹಿಳೆಯ ಪಾತ್ರ ಲೇಖನಕ್ಕೆ ಸರೋಜಿನಿ ನಾಯ್ಡು ಬಹುಮಾ ದೊರೆತಿದೆ. ...
READ MORE