ಕವಿ ಕೆ.ಎಸ್. ನಿಸಾರ್ ಅಹಮದ್ ಅವರ ಹಲವು ಜೀವನ ದೃಶ್ಯಗಳನ್ನು ಈ ಕೃತಿ ತೆರೆದಿಡುತ್ತದೆ. ಅವರ ಸಾಹಿತ್ಯಕ ಹಿನ್ನೆಲೆ ಹಾಗೂ ಪರಿಸರ, ವೃತ್ತಿ ಮತ್ತು ಪ್ರವೃತ್ತಿ, ಪ್ರಶಸ್ತಿ-ಗೌರವಗಳು, ಕರ್ನಾಟಕ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷತೆ, ನಿಸಾರ್ ಅಹಮದ್ ಅವರ ಕಾವ್ಯ, ನಿಸಾರ್ ಅಹಮದ್ ಅವರ ವಿಮರ್ಶೆ, ನಿಸಾರ್ ಅಹಮದ್ ಅವರ ವೈಚಾರಿಕ ಸಾಹಿತ್ಯ,, ಅನುವಾದಿತ ಕೃತಿಗಳು, ಹೊಸಗನ್ನಡ ಸಾಹಿತ್ಯದಲ್ಲಿ ನಿಸಾರ್ ಅಹಮದ್‌ರವರ ಸ್ಥಾನ’ ಕುರಿತ ಮಹತ್ವ ಸಂಗತಿಗಳು ಇಲ್ಲಿವೆ.
ರಾಮಚಂದ್ರ ಗಣಾಪೂರ ತಮ್ಮ ಅಧ್ಯಯನ ಹಾಗೂ ಅಧ್ಯಾಪನದೊಂದಿಗೆ ಸಾಹಿತ್ಯದ ವಿದ್ಯಾರ್ಥಿ. ತಮ್ಮದೇ ಚೌಕಟ್ಟಿನಲ್ಲಿ ಓದು-ಬರಹದ ಲೋಕವನ್ನು ಸೃಷ್ಟಿಸಿಕೊಂಡು, ಅನೇಕ ವರ್ಷಗಳಿಂದ ಗುಲಬರ್ಗಾ ವಿಶ್ವವಿದ್ಯಾಲಯದ ಸ್ನಾತಕೋತ್ತರ ಕೇಂದ್ರಗಳಲ್ಲಿ ಎಂ.ಎ. ವಿದ್ಯಾರ್ಥಿಗಳಿಗೆ ಪಾಠ ಮಾಡುತ್ತಿದ್ದಾರೆ. ಕನ್ನಡ ಸಾಹಿತ್ಯಕ್ಕೆ 11 ಕೃತಿಗಳನ್ನು, 80ಕ್ಕೂ ಹೆಚ್ಚು ಲೇಖನಗಳನ್ನು ನೀಡಿದ್ದಾರೆ. ...
READ MORE