ಇಂದಿರಾ ಗಾಂಧಿ

Author : ಸಂಗಮೇಶ ತಮ್ಮನಗೌಡ್ರ

Pages 40

₹ 25.00




Year of Publication: 2014
Published by: ಸಿದ್ಧೇಶ್ವರ ಪ್ರಕಾಶನ
Address: ಹಳೆಯ ಸರಾಫ್ ಬಜಾರ್, ಶ್ರೀ ಜಗದಂಬಾ ದೇವಿ ದೇವಸ್ಥಾನ ಹತ್ತಿ, ಗದಗ-01

Synopsys

ಕವಿ ಸಂಗಮೇಶ ತಮ್ಮನಗೌಡ್ರ ಅವರು ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಜೀವನ ವೃತ್ತಾಂತ ಕುರಿತು ಬರೆದ ಕೃತಿ ಇದು. ರಾಜಕಾರಣದ ದಿಟ್ಟ ಮಹಿಳೆ ಇಂದಿರಾ, ಅವರ ದಾಂಪತ್ಯ ಜೀವನ, ಸಮಗ್ರ ರಾಜಕೀಯ ಬದುಕು, ಭಾರತದ ಪ್ರಥಮ ಮಹಿಳಾ ಪ್ರಧಾನಿಯಾಗಿ ಇಂದಿರಾ ಗಾಂಧಿ, ದೇಶದಲ್ಲಿ ಹೇರಿದ ತುರ್ತು ಪರಿಸ್ಥಿತಿಯಿಂದಾದ ಪರಿಣಾಮಗಳು, ಇಂದಿರಾಗೆ ಎದುರಾದ ಸಂಕಟ ಪರಿಸ್ಥಿತಿಗಳು, ಅವರ ರಾಜಕೀಯ ಬದುಕಿನ ವಿವಿಧ ಆಯಾಮಗಳು ಹೀಗೆ ವಿವಿಧ ಶೀರ್ಷಿಕೆಗಳಡಿ ಲೇಖಕರು ಇಂದಿರಾಳ ಜೀವನ ವೃತ್ತಾಂತ ವಿವರಿಸಿದ್ದಾರೆ.

About the Author

ಸಂಗಮೇಶ ತಮ್ಮನಗೌಡ್ರ
(15 January 1970)

ಸಂಗಮೇಶ ತಮ್ಮನಗೌಡ್ರ (ಎಸ್.ವಿ. ತಮ್ಮನಗೌಡ್ರ) ಮೂಲತಃ ಗದಗ ಜಿಲ್ಲೆಯ ಗುಜಮಾಗಡಿ ಗ್ರಾಮದವರು. (ಜನನ: 15-01-1970) ಸದ್ಯ, ರೋಣ ತಾಲೂಕಿನ ಬೂದಿಹಾಳ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಮಹಾರಾಷ್ಟ್ರದ ಕೊಲ್ಹಾಪುರ ವಿ.ವಿ.ಯಿಂದ ಎಂ.ಎ, ಮಧುರೈ ಕಾಮರಾಜ ವಿವಿಯಿಂದ ಎಂ.ಫಿಲ್ ಹಾಗೂ ಮುಂಬೈ ವಿ.ವಿ.ಯಿಂದ ಪಿಎಚ್ ಡಿ (ವಿಷಯ: ಕನ್ನಡದಲ್ಲಿ ಏಕಾಂಕಗಳು: ಒಂದು ಅಧ್ಯಯನ-1975-95) ಪದವಿ ಪಡೆದರು. ದ.ರಾ. ಬೇಂದ್ರೆ ವೇದಿಕೆ ಸ್ಥಾಪಿಸಿ (2000) ನಿರಂತರವಾಗಿ ಕಾರ್ಯಕ್ರಮಗಳನ್ನು ನಡೆಸುತ್ತಿದ್ದಾರೆ. ಕೃತಿಗಳು: ಹಂಸ, ಸ್ಫೂರ್ತಿ-ಕವನ ಸಂಕಲನಗಳು, ಮತ್ತೆ ಹುಟ್ಟಿತು ಕವನ-ಭಾವಗೀತೆಗಳ ಸಂಕಲನ, ಪಶ್ಚಾತ್ತಾಪ, ಕರುಳಿನ ಬೆಲೆ, ಖಳನಾಯಕನ ...

READ MORE

Related Books