ಖ್ಯಾತ ಚಿಂತಕ ಶ್ರೀನಿವಾಸ ದೇಸಾಯಿ ಅವರು ಶ್ರೀ ವಿಶ್ವೇಶ್ವರಯ್ಯ ಅವರ ಜೀವನ ದರ್ಶನ ನೀಡಿರುವ ಕೃತಿ ಇದು. ಮೈಸೂರು ಒಡೆಯರ ಆಡಳಿತಾವಧಿಯಲ್ಲಿ ಮುಖ್ಯ ಎಂಜಿನಿಯರ್ ಆಗಿದ್ದರು. ನಿಷ್ಠೆಗೆ, ಪ್ರಾಮಾಣಿಕತೆಗೆ ಹಾಗೂ ಕರ್ತವ್ಯ ದಕ್ಷತೆಗೆ ಹೆಸರುವಾಸಿ. ಮೈಸೂರಿನಲ್ಲಿ ಕನ್ನಂಬಾಡಿ ಆಣೆಕಟ್ಟು, ಭದ್ರಾವತಿಯಲ್ಲಿ ಕಬ್ಬಿಣ ಹಾಗೂ ಉಕ್ಕು ತಯಾರಿಕಾ ಕಾರ್ಖಾನೆ ಸೇರಿದಂತೆ ರಾಜ್ಯದ ವಿವಿಧೆಡೆ ಹತ್ತು ಹಲವು ಕೆಲಸದ ಘಟಕಗಳನ್ನು ಸೃಷ್ಟಿಸಿದ್ದು, ಸಾವಿರಾರು ಮಂದಿಗೆ ಉದ್ಯೋಗ ಒದಗಿಸಿದ್ದರು. ಅವರ ಪರೋಪಕಾರ ಜೀವನದ ದರ್ಶನವೇ ಈ ಕೃತಿ.
ಹಿರಿಯ ಲೇಕಖ ಶ್ರೀನಿವಾಸ ಕೃ. ದೇಸಾಯಿ ಅವರು ಕುವೆಂಪು ಅವರ ಶ್ರೀರಾಮಾಯಣ ದರ್ಶನದ ಮೇಲೆ ಆಳವಾದ ಅಧ್ಯಯನ ನಡೆಸಿದ್ದಾರೆ. ಅಲ್ಲದೇ 'ಕುವೆಂಪು ಅವರ ಮಹಾಕಾವ್ಯ ಶ್ರೀ ರಾಮಾಯಣ ದರ್ಶನಂ – ಶ್ರೀ ದರ್ಶನ' ಎಂಬ ಸಂಕಲನವನ್ನು ಪ್ರಕಟಿಸಿದ್ದಾರೆ. ಜೊತೆಗೆ ಶ್ರೀಮದ್ ಭಗವದ್‌ಗೀತಾ ದರ್ಶನ ಎಂಬ ಕೃತಿಯನ್ನು ಸಂಪಾದಿಸಿದ್ದಾರೆ. ...
READ MORE