ಗಾಂಧೀ ಮಾರ್ಗ

Author : ನಾ. ರೇವನ್‌

₹ 100.00




Year of Publication: 2021
Published by: ಚಿತ್ರ ಪುಸ್ತಕ
Address: ಬೆಂಗಳೂರು
Phone: 9008913311

Synopsys

ಲೇಖಕ ನಾ. ರೇವನ್‌ ಅವರ ʼಗಾಂಧಿ ಮಾರ್ಗʼ ಕೃತಿಯು ಗಾಂಧಿ ಮೌಲ್ಯಗಳನ್ನು ಪರಿಚಯಿಸುತ್ತದೆ.ಸರಳ ಭಾಷೆಯ ಈ ಕೃತಿಯು ಬ್ರಿಟಿಷರ ಈಸ್ಟ್‌ ಇಂಡಿಯಾ ಕಂಪನಿಯ ಸ್ಥಾಪನೆಯಿಂದ ತೊಡಗಿ ಇತಿಹಾಸದ ಹಲವು ಮಜಲುಗಳನ್ನು ಪರಿಚಯಿಸಿ, ನಂತರ ಗಾಂಧಿಯವರ ವಿಚಾರವನ್ನು ಪ್ರಸ್ತಾಪಿಸುತ್ತದೆ. ಈ ಅಂಶಗಳು ಗಾಂಧೀಜಿಯ ಪ್ರವೇಶಕ್ಕೆ ಒಂದು ಭೂಮಿಕೆಯನ್ನು ನೀಡಿದೆ. ಇತಿಹಾಸದ ಕುರಿತು ಮಕ್ಕಳಲ್ಲಿ ಗೌರವ ಮೂಡಿಸುವ ಹಲವಾರು ವಿಚಾರಗಳು ʼಗಾಂಧಿ ಮಾರ್ಗʼ ಕೃತಿಯಲ್ಲಿ ಅಡಕವಾಗಿದೆ.

ಗಾಂಧೀಜಿಯವರ ಜೀವನ ಗಾಥೆ ಹಾಗೂ ಜೀವನದ ಮೌಲ್ಯಗಳನ್ನು ಪ್ರಸ್ತಾಪಿಸಿರುವ ಈ ಕೃತಿಯು  ಬದುಕಿನ ಬಗ್ಗೆ ವಿಶ್ವಾಸವನ್ನು ಮೂಡಿಸುತ್ತದೆ. ಗಾಂಧೀಜಿಯವರ ಹನ್ನೆರಡು ಸೂತ್ರಗಳು, ಸಪ್ತ ಸಾಮಾಜಿಕ ಪಾತಕಗಳು ಬದುಕಿನ ದಿಗ್ದರ್ಶಿಯಾಗಿವೆ.

About the Author

ನಾ. ರೇವನ್‌
(06 June 1954)

ಲೇಖಕ ನಾ. ರೇವನ್‌ ಮೂಲತಃ ದಾವಣಗೆರೆಯವರು. ದಾವಣಗೆರೆಯಲ್ಲಿ ಕಲಾ ಶಾಲೆ ಆರಂಭಗೊಂಡ ಸಂದರ್ಭದಲ್ಲಿ, ಅವರ 14 ನೇ ವಯಸ್ಸಿನಲ್ಲೇ ಕಲಾ ಶಾಲೆಗೆ ಮಾಡೆಲ್‌ ಆಗಿ ಕಲಾಭಿರುಚಿ ಬೆಳೆಸಿಕೊಂಡವರು. ನಂತರದ ದಿನಗಳಲ್ಲಿ ಚಿಂದೋಡಿ ಲೀಲಾ ಹಾಗೂ ಆರ್‌. ನಾಗರತ್ನಮ್ಮ ನೇತೃತ್ವದ ನಾಟಕ ಮಂಡಳಿಗೆ ಸೇರಿ ನಾಟಕ, ಬ್ಯಾನರ್ ಬರೆಯಲು, ವರ್ಣಾಲಂಕಾರ, ಪಾತ್ರ ಇತ್ಯಾದಿಗಳಲ್ಲಿ ತಮ್ಮನ್ನು ತೊಡಗಿಸಿಕೊಂಡರು. ದಾವಣಗೆರೆಯಲ್ಲಿ 1974 ರಲ್ಲಿ ಸೃಷ್ಟಿ ಕಲಾ ಶಾಲೆ ಆರಂಭಿಸಿ, ಅನೇಕ ಕಲಾ ಕಾರ್ಯಗಾರ, ಚಿತ್ರ ಕಲಾ ಸ್ಫರ್ಧೆಗಳನ್ನು ನಡೆಸಿದರು. ನಾಗಮ್ಮ ಕೇಶವಮೂರ್ತಿಯವರ ವನಿತಾ ಸಮಾಜದಲ್ಲಿ14 ವರ್ಷ ಕಾಲ ಕಲಾ ಉಪನ್ಯಾಸಕರಾಗಿದ್ದರು. 175 ಕನ್ನಡ ಹಿರಿಯ ಸಾಹಿತಿಗಳ ಭಾವಚಿತ್ರಗಳನ್ನು ...

READ MORE

Related Books