ಲೇಖಕ ಶೇಖರ್ ಗಣಗಲೂರು ಅವರ ಲೇಖನಗಳ ಕೃತಿ ʻಗೆಲುವುʼ. ಪುಸ್ತಕವು ಗೆಲುವು ಎಂದರೇನು ಎಂಬುವುದರ ಕುರಿತು ಹೇಳುವ ಒಂದು ಕೈಪಿಡಿಯಾಗಿದೆ. ಇಲ್ಲಿ ಹೊಸ ಆರಂಭ, ಹೊಸ ಪ್ರಗತಿ, ಹೊಸ ವಿಮರ್ಶೆ ಹೆಸರಿನಲ್ಲಿ ಮೂರು ಭಾಗಗಳಿದ್ದು, ಅದರಲ್ಲಿ ಹೇಗೆ ಗೆಲ್ಲಬೇಕು, ನಾವೇಕೆ ಗೆಲ್ಲುವುದಿಲ್ಲ, ಸೋಲು ಹೇಗೆ ಸಂಭವಿಸುತ್ತದೆ ಹಾಗೂ ಅದನ್ನು ಹೇಗೆ ದಾಟಿಕೊಂಡು ಮುಂದೆ ಬರಬೇಕು, ಗೆಲುವಿನ ವಲಯ, ಗೆಲುವಿನ ವಲಯದ ಸ್ವಯಂ ಮೌಲ್ಯಮಾಪನ, ದೃಷ್ಟಾಂತ, ವೈಫಲ್ಯಗಳೇ ಹುಷಾರ್, ಪರಿಶ್ರಮದ ಪುರಸ್ಕಾರ, ಸಾಧನೆಯ ಹಂಬಲ ಹೇಗಿರಬೇಕು ಹೀಗೆ ಹಲವಾರು ಶೀರ್ಷಿಕೆಗಳಲ್ಲಿ ಲೇಖನಗಳಿವೆ.
ಶೇಖರ್ ಗಣಗಲೂರು, ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ತಾಲೂಕಿನ ಗಣಗಲೂರು ಗ್ರಾಮದವರು. ಸಮಾಜಕಾರ್ಯದಲ್ಲಿ ಸ್ನಾತಕೋತ್ತರ ಪದವಿಯನ್ನು ಬೆಂಗಳೂರು ವಿಶ್ವವಿದ್ಯಾನಿಲಯದಿಂದ ಮತ್ತು ಎಲ್.ಎಲ್.ಬಿ. ಯನ್ನು ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದಲ್ಲಿ ಪೂರ್ಣಗೊಳಿಸಿದ್ದಾರೆ. ಪ್ರಸ್ತುತ ಬಿ.ಎಸ್ಸಿ ಮ್ಯಾನುಫ್ಯಾಕ್ಚರಿಂಗ್ ಸಂಸ್ಥೆಯಲ್ಲಿ ಪ್ರಧಾನ ವ್ಯವಸ್ಥಾಪಕರಾಗಿ (ಮಾನವ ಸಂಪನ್ಮೂಲ ವಿಭಾಗ) ಸೇವೆ ಸಲ್ಲಿಸುತ್ತಿದ್ದಾರೆ. ವ್ಯಾಯಾಮ, ಓದುವುದು, ಬರೆಯುವುದು, ಆಪ್ತಸಮಾಲೋಚನೆ, ಯುವಕರಿಗೆ ಮಾರ್ಗದರ್ಶನ ನೀಡುವುದು, ಗೆಳೆಯರೊಂದಿಗೆ ಚಿಂತನ-ಮಂಥನ, ಹಸು ಮತ್ತು ಕುರಿ ಕಾಯುವುದು ಹಾಗೂ ಅಡುಗೆ ಮಾಡುವುದು ಶೇಖರ್ ಅವರ ನೆಚ್ಚಿನ ಹವ್ಯಾಸಗಳು. ‘ಬದುಕು ಬದಲಾಯಿಸಿದ ಕಥನಗಳು’ - ವ್ಯಕ್ತಿತ್ವ ವಿಕಸನಕ್ಕೆ ಸಂಬಂಧಿಸಿದಂತೆ ಈ ಕೃತಿ ಬಹುಮುಖ್ಯವೆನಿಸುತ್ತದೆ. ...
READ MORE