ಸ್ವಾತಂತ್ಯ್ರ ಪೂರ್ವ ಭಾರತದ ಪ್ರಪ್ರಥಮ ಮಹಿಳಾ ಶಿಕ್ಷಕಿ ಎಂದೇ ಖ್ಯಾತಿಯ ಸಾವಿತ್ರಿಬಾಯಿ ಫುಲೆಯವರ ಸಾಧನೆಯ ಹೆಜ್ಜೆಗಳನ್ನು ಕುರಿತ ಮಹತ್ವದ ವಿಷಯಗಳನ್ನು ಸುಮಿತ್ರಾ ಮಾರುತಿ ದುರ್ಗಿ ಅವರು ಸಂಪಾದಿಸಿದ್ದು, ಈ ಕೃತಿಯ ಪ್ರಧಾನ ಸಂಪಾದಕರು-ಡಾ. ವಿ.ಟಿ. ವೆಂಕಟೇಶಯ್ಯ.
ಸಾವಿತ್ರಿಬಾಯಿಯ ಜನನ, ಶಿಕ್ಷಣ, ವೈವಾಹಿಕ ಜೀವನ, ಬಹಿಷ್ಕಾರ, ತೆರೆದ ಶಾಲೆಗಳು, ವಿಧವೆಯರ ಅನಿಷ್ಟ ಪದ್ಧತಿ ನಿರ್ಮೂಲನೆ, ಮಹಿಳಾ ಚಿಂತನೆ, ಸಾಮಾಜಿಕ ಚಿಂತನೆ, ಮಹಿಳಾ ಸಂಘಟನೆ, ರೋಗಿಗಳ ಸೇವೆ ಹೀಗೆ ಒಟ್ಟು22 ವಿವಿಧ ಅಧ್ಯಾಯಗಳಡಿ ಸಾವಿತ್ರಿ ಬಾಯಿಯ ಜೀವನ ಸಾಧನೆಗಳನ್ನು ಕಟ್ಟಿಕೊಡಲಾಗಿದೆ.
ಸುಮಿತ್ರಾ ಮಾರುತಿ ದುರ್ಗಿ ಅವರು (ಜನನ: 08-09-1970) ಮೂಲತಃ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಶಿರಹಟ್ಟಿ ಗ್ರಾಮದವರು. ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಮಸ್ತಮರಡಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ಹಿಂದಿ ಭಾಷಾ ಶಿಕ್ಷಕಿ. ಎಂ.ಎ, ಬಿ.ಇಡಿ, ಹಾಗೂ ಎಂ.ಫಿಲ್ ಪದವೀಧರೆ. ಸದ್ಯ ಬೆಳಗಾವಿಯಲ್ಲೇ ವಾಸಿಸುತ್ತಿದ್ದು, ಕತೆ, ಕವನ ಬರವಣಿಗೆ, ಸಾಹಿತ್ಯ ಓದು ಇವರ ಹವ್ಯಾಸ. ರಾಜ್ಯ ಶಿಕ್ಷಕ ರತ್ನ ಪ್ರಶಸ್ತಿ ಪುರಸ್ಕೃತರು. ‘ಸ್ವಾತಂತ್ಯ್ರಪೂರ್ವ ಭಾರತದ ಪ್ರಪ್ರಥಮ ಮಹಿಳಾ ಶಿಕ್ಷಕಿ ಸಾವಿತ್ರಿಬಾಯಿ ಫುಲೆಯವರ ಸಾಧನೆ ಹೆಜ್ಜೆಗಳು’-ಇವರ ಸಂಪಾದನಾ ಕೃತಿಯಾಗಿದೆ. ...
READ MORE