ಮಾತೋಶ್ರೀ ಕಲ್ಲೂರು ನಾಗಮ್ಮನವರು-ಈ ಕೃತಿಯ ರಚನೆಕಾರರು ಲೇಖಕ ನಿಷ್ಠಿ ರುದ್ರಪ್ಪ. ಶತಾಯುಷಿಗಳಾಗಿದ್ದ ಶ್ರೀಮತಿ ಕಲ್ಲೂರು ನಾಗಮ್ಮನವರ ಜನ್ಮ ಶತಮಾನೋತ್ಸವ ಹಾಗೂ ಕನಕಾಭಿಷೇಕ ಮಹೋತ್ಸವದ ಸಂದರ್ಭದಲ್ಲಿ ಈ ಕಿರುಹೊತ್ತಿಗೆಯನ್ನು ಅವರ ಕುಟುಂಬ ವರ್ಗದಿಂದ ಹೊರತರಲಾಗಿದೆ. ಇದು ಅತ್ಯಂತ ಚಿಕ್ಕ ಕೃತಿಯಾಗಿದ್ದರೂ ಆದರ್ಶಪ್ರಾಯವಾಗಿದೆ. ಸ್ತ್ರೀವಾದದ ಹೆಸರಿನಲ್ಲಿ ವಿವಾಹ ವಿಚ್ಛೇದನಗ ಪ್ರಕರಣಗಳು ಹೆಚ್ಚುತ್ತಿವೆ. ಸಂಸಾರಿಕ ಸಹನೆ, ತಾಳ್ಮೆ, ಸಮಸ್ಯೆ ಎದುರಿಸುವ ದಿಟ್ಟತನ ಅನುಸರಿಸುತ್ತಿಲ್ಲ ಹಿರಿಯ ಮಾತು ಕೇಳಿ ಸಂಸಾರ ನಡೆಸುವುದು ಅಂದರೆ ಶೋಷಣೆಗೆ ಬಲಿಯಾದಂತೆ ಎಂಬ ಭಾವನೆ ಮಹಿಳೆಯರಲ್ಲಿ ಅಧಿಕವಾಗುತ್ತಿದೆ. ಆದರೆ ವಿದ್ಯೆ ಕಲಿಯದ ಹಳ್ಳಿಯ ಮುಗ್ಧ ಹೆಣ್ಣು ಜೀವ ಬಯಲು ಸೀಮೆಯಲ್ಲಿ ತನ್ನ ಗಂಡ-ಮನೆ-ಮಕ್ಕಳೊಂದಿಗೆ ಬಡತನದಲ್ಲಿಯೇ ಉತ್ತಮ ಸಂಸ್ಕಾರವನ್ನು ನೀಡಿ, ಎಲ್ಲಾ ಮಕ್ಕಳನ್ನು ವಿದ್ಯಾವಂತರನ್ನಾಗಿಸಿ, ಉನ್ನತ ನಾಗರಿಕ ಸಮಾಜದಲ್ಲಿ ನಾಲ್ಕಾರು ಮಂದಿಯ ಎದುರಿನಲ್ಲಿ ಅವರು ತಲೆ ಎತ್ತಿ ಬಾಳುವಂತೆ ಮಾಡಿದ ಕಲ್ಲೂರು ನಾಗಮ್ಮನವರ ಜೀವನ ಸಾಧನೆ ಇಂದಿನ ಮಹಿಳೆಯರಿಗೆ ಮಾದರಿ. ನಾಗಮ್ಮನವರ ಬದುಕು-ಸಾಧನೆ ಕುರಿತು ವರ್ಣಿಸುವ ಕೃತಿ ಇದು. ಪ್ರಕಾಶನ ಸಂಸ್ಥೇಯು ಈ ಕೃತಿಯನ್ನು ಓದುಗರಿಗೆ ಉಚಿತವಾಗಿ ನೀಡಲು ಉದ್ದೇಶಿಸಿದ್ದು, ಬೆಲೆ ನಮೂದಿಸಿಲ್ಲ.
ಲೇಖಕ ನಿಷ್ಠಿ ರುದ್ರಪ್ಪ ಅವರು ಮೂಲತಃ ಬಳ್ಳಾರಿಯವರು. ತಂದೆ ನಿಷ್ಠಿ ಬಸವರಾಜಪ್ಪ, ತಾಯಿ ಪ್ರಭಾವತಿ. ಬಿ.ಕಾಂ, ಎಂ.ಎ, ಬಿ.ಇಡಿ ಪದವೀಧರರು. ಸ್ಮಾತಕೋತ್ತರ ವಚನ ಕಮ್ಮಟ ಪರೀಕ್ಷೆಯಲ್ಲಿ ರಾಜ್ಯಕ್ಕೆ ಮೂರನೇ ರ್‍ಯಾಂಕ್, ಬಳ್ಳಾರಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮಾಜಿ ಅಧ್ಯಕ್ಷರು, ವಿಜಯನಗರ ಶ್ರೀಕೃಷ್ಣದೇವರಾಯ ವಿ.ವಿ. ಸಿಂಡಿಕೇಟ್ ಮಾಜಿ ಸದಸ್ಯರು. ಖಾಸಗಿ ಕಂಪನಿಯಲ್ಲಿ ಸೇವೆ, ಬಳ್ಳಾರಿಯ ಲೋಕದರ್ಶನ ಪತ್ರಿಕೆಯಲ್ಲಿ ವರದಿಗಾರರಾಗಿ, ಬಳ್ಳಾರಿಯ ವೈದ್ಯಕೀಯ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕಾರಿ ಹಾಗೂ ಕಲ್ಪತರು ವಿದ್ಯಾಸಂಸ್ಥೆಯಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ್ದಾರೆ. ಹೊಸಪೇಟೆಯ ಆಕಾಸವಾಣಿ ಕೇಂದ್ರದಿಂದ ‘ಚಿಂತನೆ’ ಹಾಗೂ ಹಚ್ಚೇವು ಕನ್ನಡದ ದೀಪ’ ದೂರದರ್ಶನದಲ್ಲಿ ...
READ MORE