ಲೇಖಕ ಶಂಕರ ಭೀಮರಾಯ ಬಿರಾದಾರ ಅವರ ’ ಕಡಣಿಯ ಅನುಭಾವಿ ಕವಿ ಶ್ರೀ ಶಿವಣ್ಣಮಾಸ್ತರ ಕತ್ತಿ’ ಕೃತಿಯು ಶಿವಣ್ಣ ಮಾಸ್ತರ ಅವರ ಜೀವನ ಚಿತ್ರಣವಾಗಿದೆ. ಅವರು ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಹಳಗನ್ನಡ ಬೋಧನೆಯಲ್ಲಿ ನೈಪುಣ್ಯತೆ ಪಡೆದಿದ್ದರು. ಛಂದೋಬದ್ದವಾಗಿ ಸರಳವಾಗಿ ಅರ್ಥವಾಗುವಂತೆ ಮಕ್ಕಳಿಗೆ ಪಾಠ ಮಾಡುತ್ತಿದ್ದ ಶಿವಣ್ಣಮಾಸ್ತರರ ಶಿಷ್ಯ ಬಳಗ ಅಪಾರವಾದ್ದು. ಹಳಗನ್ನಡ ಕಾವ್ಯವನ್ನು ಓದಿ ಹೊಸಗನ್ನಡಕ್ಕೆ ಪಾಠಾಂತರ ಮಾಡಿಕೊಡುತ್ತಿದ್ದರು. ಕೆಂಭಾವಿ ಭೋಗಣ್ಣ, ಸತ್ಯವಾನ ಸಾವಿತ್ರಿ ಎಂಬೆರಡು ನಾಟಕಗಳು, ಗೋಳಸಾರ ಶ್ರೀ ಪುಂಡಲಿಂಗೇಶ್ವರ ಮಹಾರಾಜರು ಎಂಬ ಪುರಾಣಕಾವ್ಯವನ್ನು ರಚಿಸಿದ್ದಾರೆ. ಅಲ್ಲದೇ ಹಲವಾರು ಶರಣರ ಕುರಿತು ಸುಪ್ರಭಾತಗಳನ್ನು ರಚಿಸಿದ್ದಾರೆ. ಅಧ್ಯಾತ್ಮಿಕ ಬದುಕನ್ನು ತಮ್ಮದಾಗಿಸಿಕೊಂಡಿದ್ದ ಶಿವಣ್ಣ ಮಾಸ್ತರರು ಮಾದರಿ ಶಿಕ್ಷಕರಾಗಿ ಬದುಕಿದವರು. ಇವರ ಕುರಿತ ಈ ಕಿರು ಪುಸ್ತಕ.
ಲೇಖಕ ಶಂಕರ ಭೀಮರಾಯ ಬಿರಾದಾರ ಅವರು ಪ್ರೌಢಶಾಲೆಯ ಮುಖ್ಯ ಶಿಕ್ಷಕರಾಗಿ ನಿವೃತ್ತರು. ಕೃಷಿ, ಅಧ್ಯಯನ ಮತ್ತು ಬರಹದಲ್ಲಿ ಆಸಕ್ತರು. ಎರಡು ಕೃತಿಗಳನ್ನು ಪ್ರಕಟಿಸಿದ್ದಾರೆ. ಕೃತಿಗಳು: ಕಡಣಿಯ ಅನುಭಾವಿ ಕವಿ ಶ್ರೀ ಶಿವಣ್ಣಮಾಸ್ತರ ಕತ್ತಿ. ...
READ MORE