ಕನ್ನಡ ನಾಡು ಕಂಡ ಶ್ರೇಷ್ಠ ರಂಗಕರ್ಮಿ ಗುಬ್ಬಿ ವೀರಣ್ಣ. ‘ಗುಬ್ಬಿ ಕಂಪನಿ’ಯ ಮೂಲಕ ನಾಟಕವನ್ನಾಡುವ ಮೊದಲು ವೃತ್ತಿರಂಗಭೂಮಿಯ ದುಃಸ್ಥಿತಿ ಶೋಚನೀಯವಾಗಿತ್ತು. ಮೊದಲು ನಾಟಕ ಆನಂತರ ನಟರು ತಟ್ಟೆಯನ್ನು ಹಿಡಿದು ಪ್ರೇಕ್ಷಕರ ಬಳಿ ಹೋಗಬೇಕು. ಪ್ರೇಕ್ಷಕ ಮಹಾಪ್ರಭು ದಯಪಾಲಿಸಿದಷ್ಟು ಸ್ವೀಕರಿಸಿ ಬದುಕನ್ನು ನಡೆಸಬೇಕು. ಇಂತಹ ಸ್ಥಿತಿಯಲ್ಲಿ ಕ್ಯೂ ನಿಂತು ನಾಟಕಗಳ ಟಿಕೆಟ್ ಕೊಳ್ಳುವಂತೆ ಮಾಡಿ ‘ಹೌಸ್ ಫುಲ್‘ ನಾಟಕಗಳನ್ನು ನಡೆಸಿದ ಕೀರ್ತಿ ವೀರಣ್ಣನವರದು. ಅವರ ಬಾಲ್ಯ-ಜೀವನ-ನಡೆದು ಬಂದ ದಾರಿಯ ಕುರಿತು ಸಂಕ್ಷಿಪ್ತವಾಗಿ ತೆರೆದಿಡುವ ಕೃತಿ ಇದು. ಸಾಹಿತಿ ಕೆ.ಎಸ್. ಭಗವಾನ್ ಕೃತಿ ರಚಿಸಿದ್ದು, ನಾ. ಸೋಮೇಶ್ವರ ಅವರು ಸಂಪಾದಿಸಿದ್ದಾರೆ.
ವಿಮರ್ಶಕ, ಅನುವಾದಕರಾದ ಕೆ.ಎಸ್.ಭಗವಾನ್ ಅವರು 14-07-1945ರಂದು ಮೈಸೂರು ಜಿಲ್ಲೆಯ ಕಲ್ಲಹಳ್ಳಿಯಲ್ಲಿ ಜನಿಸಿದರು. ಮೈಸೂರು ವಿಶ್ವವಿದ್ಯಾಲಯದಲ್ಲಿ ಇಂಗ್ಲಿಷ್ ವಿಷಯದಲ್ಲಿ ಎಂ.ಎ ಪದವಿ ಪಡೆದಿರುವ ಅವರು ಅಮೆರಿಕಾದ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದಿಂದ ಡಿ.ಲಿಟ್.ಪದವಿಯನ್ನೂ ಪಡೆದಿದ್ದಾರೆ. ಬಂಡಾಯ ವಿಮರ್ಶೆಯ ಮೊದಲ ಮತ್ತು ಮುಖ್ಯ ವಿಮರ್ಶಕರಾದ ಭಗವಾನ್ ವಿಮರ್ಶೆಯಲ್ಲಿ ಅಂತರ್ ಶಿಸ್ತೀಯ ಅಧ್ಯಯನಗಳನ್ನು ಪ್ರಾರಂಭಿಸಿದವರು. ಮೈಸೂರಿನ ಕುವೆಂಪು ನಗರದಲ್ಲಿ ವಾಸವಾಗಿರುವ ಅವರು, ಮೈಸೂರಿನ ಮಹಾರಾಜ ಕಾಲೇಜಿನ ಇಂಗ್ಲಿಷ್ ವಿಭಾಗದ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸಿದ್ದಾರೆ. ಅನುವಾದಕರಾಗಿ ಹೆಸರುವಾಸಿಯಾಗಿರುವ ಭಗವಾನ್ ಷೇಕ್ಸ್ ಪಿಯರ್ ನ ಒಂಬತ್ತು ಮಹತ್ವದ ನಾಟಕಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಅವರ ಕೃತಿ ಶಂಕರಾಚಾರ್ಯ ಮತ್ತು ಪ್ರತಿಗಾಮಿತನ ...
READ MORE