‘ಶಂಕರಗೌಡ ಬೆಟ್ಟದೂರ’ ಕರ್ನಾಟಕದ ಪ್ರಸಿದ್ಧ ಕಲಾವಿದರಲ್ಲಿ ಒಬ್ಬರಾದ ಶಂಕರಗೌಡ ಬೆಟ್ಟದೂರ ಅವರ ಜೀವನ ಚರಿತ್ರೆ. ಈ ಕೃತಿಯನ್ನು ಕಲಾವಿದ, ಲೇಖಕ ಎಚ್.ಎ. ಅನಿಲ್ ಕುಮಾರ್ ಅವರು ರಚಿಸಿದ್ದಾರೆ. ಕರ್ನಾಟಕ ಸಾಂಪ್ರದಾಯಿಕ ಚಿತ್ರಕಲೆಗೆ ಬಂಗಾಳಿ ಕಲೆಯನ್ನು ಸಂಮಿಶ್ರಣ ಮಾಡಿ ವಿನೂತನ ಶೈಲಿಯನ್ನು ರೂಪಿಸಿದ ಕೀರ್ತಿ ಶಂಕರಗೌಡ ಬೆಟ್ಟದೂರು ಅವರದ್ದು. ಕಲಾಕ್ಷೇತ್ರದಲ್ಲಿ ಅವರು ಮಾಡಿದ ಸಾಧನೆ ಮತ್ತು ಕಲಾಬದುಕಿನ ಕುರಿತಾದ ಮಾಹಿತಿ ಈ ಕೃತಿಯನ್ನು ಕರ್ನಾಟಕ ಲಲಿತಕಲಾ ಅಕಾಡೆಮಿ ಪ್ರಕಟಿಸಿದೆ.
ಎಚ್.ಎ.ಅನಿಲ್ ಕುಮಾರ್ ಕಲಾ ವಿಮರ್ಶಕರು, ಚಿತ್ರಕಲಾ ಪರಿಷತ್ತಿನ ಕಲಾ ಇತಿಹಾಸ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿರುವ ಇವರು ಕಲೆಗೆ ಸಂಬಂಧಿಸಿದ ಬರಹಗಳ ಮೂಲಕ ಕನ್ನಡ ಮತ್ತು ಇಂಗ್ಲಿಷ್ ಓದುಗರಿಬ್ಬರಿಗೂ ಪರಿಚಿತರು. ಇವರಿಗೆ ದೆಹಲಿ ಕಲಾ ಶಾಲೆ ರಾಷ್ಟ್ರಮಟ್ಟದಲ್ಲಿ ಅತ್ಯುತ್ತಮ ಕಲಾ ಶಿಕ್ಷಕರಿಗೆ ನೀಡುವ ಪ್ರತಿಷ್ಠಿತ ಬಿ.ಸಿ.ಸನ್ಯಾಲ್ ಪ್ರಶಸ್ತಿ ನೀಡಿ ಗೌರವಿಸಿದೆ. ಮೊದಲ ಬಾರಿಗೆ ಕರ್ನಾಟಕದ ಕಲಾ ಶಿಕ್ಷಕರೊಬ್ಬರಿಗೆ ಈ ಪ್ರಶಸ್ತಿ ದೊರೆತಿದೆ. ಶಾಂತಿನಿಕೇತನದ ವಿಶ್ವಭಾರತಿ ವಿಶ್ವವಿದ್ಯಾಲಯದ ಕಲಾ ಇತಿಹಾಸದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು ಚಿತ್ರಕಲಾ ಪರಿಷತ್ತಿನ ಹಳೆಯ ವಿದ್ಯಾರ್ಥಿಯೂ ಹೌದು. ಲಂಡನ್‌ನ ರಾಯಲ್ ಕಾಲೇಜ್‌ನಲ್ಲಿ ಸಮಕಾಲೀನ ಕ್ಯುರೇಶನ್ ...
READ MORE