ಸ್ವಾಮಿ ನಿತ್ಯಸ್ಥಾನಂದ ಅವರು ಬರೆದ ಕೃತಿ-ವಿಶ್ವಗುರು ಸ್ವಾಮಿ ವಿವೇಕಾನಂದ. ಹೇಸರೇ ಸೂಚಿಸುವಂತೆ ಸ್ವಾಮಿ ವಿವೇಕಾನಂದರ ಬದುಕು-ಸಾಧನೆ ಕುರಿತು ವಿಸ್ತೃತವಾಗಿ ಬರೆದ ಕೃತಿ. ಇವರ ವ್ಯಕ್ತಿತ್ವವು ವಿಶ್ವಕ್ಕೆ ಗುರುವಾಗಬಲ್ಲಷ್ಟು ಹಿರಿದಾದದು. ಜಾತಿ-ಪಂಥ-ಧರ್ಮಗಳನ್ನು ಮೀರಿದ ಇವರ ವಿಚಾರಗಳು, ಉಪನ್ಯಾಸಗಳು ಮಾನವೀಯ ಪ್ರತೀಕವಾಗಿವೆ ಎಂದು ಪ್ರತಿಪಾದಿಸಿದ ಕೃತಿ ಇದು. ಬರಹ ಶೈಲಿ ಸರಳವಾಗಿದೆ. ಹೀಗಾಗಿ, ವಿವೇಕಾನಂದರ ಅಧ್ಯಾತ್ಮಕ ವಿಚಾರಗಳು ಸಹ ಸಾಮಾನ್ಯರಿಗೂ ತಿಳಿಯುವಂತಿವೆ.
ಸ್ವಾಮಿ ನಿತ್ಯಸ್ಥಾನಂದ ಅವರು ಶ್ರೀ ರಾಮಕೃಷ್ಣ ಪರಮಹಂಸರ ಅನುಯಾಯಿಗಳು. ಶ್ರೀರಾಮಕೃಷ್ಣರ ವಿಚಾರಗಳನ್ನು ಪ್ರಚುರ ಪಡಿಸುವಲ್ಲಿ ತಮ್ಮನ್ನು ತಾವು ಸಮರ್ಪಿಸಿಕೊಂಡವರು. ದೇಶದುದ್ದಕ್ಕೂ ಸಂಚರಿಸಿ, ಶ್ರೀರಾಮಕೃಷ್ಣರ-ವಿವೇಕಾನಂದರ ಉಪದೇಶಗಳ ಕುರಿತು ಹಲವಾರು ಉಪನ್ಯಾಸಗಳನ್ನು ನೀಡಿದ್ದಾರೆ. ಕೃತಿಗಳು: ಪರಿಪೂರ್ಣ ವ್ಯಕ್ತಿತ್ವ, ಶ್ರೀಮದ್ಭಗವದ್ಗೀತೆ : ಚಿಂತನ ಮಂಥನ, ವಿಶ್ವಗುರು ಸ್ವಾಮಿ ವಿವೇಕಾನಂದ ...
READ MORE