ಹುಲಿಹೆಜ್ಜೆಯ ಕೆದಂಬಾಡಿ ಜತ್ತಪ್ಪ ರೈ

Author : ನರೇಂದ್ರ ರೈ ದೇರ್ಲ

Pages 112

₹ 120.00




Year of Publication: 2021
Published by: ವಿಕಸನ
Address: ವಿಜ್ಞಾತಂ ಭವನ,ಆದಿಚುಂಚನಗಿರಿ ವಿಶ್ವವಿದ್ಯಾನಿಲಯ,ಬಿ.ಜಿ.ನಗರ- 571448, ನಾಗಮಂಗಲ ತಾಲ್ಲೂಕು,ಮಂಡ್ಯ ಜಿಲ್ಲೆ

Synopsys

ಒಕ್ಕಲಿಗ ಸಾಧಕರು ಸರಣಿಯಲ್ಲಿ ಕೆದಂಬಾಡಿ ಜತ್ತಪ್ಪ ರೈಯವರ ಬಗ್ಗೆ ಲೇಖಕ ನರೇಂದ್ರ ರೈ ದೇರ್ಲ ಅವರು ಬರೆದಿರುವ ಪರಿಚಯಾತ್ಮಕ ಕೃತಿ ‘ಹುಲಿಹೆಜ್ಜೆಯ ಕೆದಂಬಾಡಿ ಜತ್ತಪ್ಪ ರೈ’. ಕೃತಿಯ ಬೆನ್ನುಡಿಯಲ್ಲಿ, 'ಬೇಟೆಯ ನೆನಪುಗಳು' ಕೃತಿಯ ಮೂಲಕ ಕನ್ನಡ ಸಾಹಿತ್ಯ ಲೋಕಕ್ಕೆ ಪ್ರವೇಶಿಸಿದವರು ಕದಂಬಾಡಿ ಜತ್ತಪ್ಪ ರೈಯವರು. ಮೊದಲ ಕೃತಿಯೇ ಅವರನ್ನು ಮೃಗಯಾ ಸಾಹಿತಿಯನ್ನಾಗಿಸಿ ಕನ್ನಡ ಸಾಹಿತ್ಯ ಲೋಕವೇ ಗಮನಿಸುವಂತಾಯಿತು. ಕರ್ನಾಟಕದ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿಯೂ ಬಂತು. ಇದೆಲ್ಲಾ ನಡೆದುದು ಕೆದಂಬಾಡಿಯವರ ಅರವತ್ತನೆಯ ವಯಸ್ಸಿನಲ್ಲ. ಮುಂದೆ ಅವರು ತಿರುಗಿ ನೋಡಲಿಲ್ಲ. ಮುಂದೆ  ಶಿಕಾರಿಯ ಅನುಭವಗಳನ್ನೇ ನಾಲ್ಕು ಕೃತಿಗಳಲ್ಲಿ ದಾಖಲಸಿದರು. ಬೇರೆ ಭಾಷೆಯ ಕೃತಿಗಳನ್ನೂ ಅನುವಾದಿಸಿದರು. ಶಿವರಾಮ ಕಾರಂತರ 'ಚೋಮನ ದುಡಿ', ಠಾಗೂರರ 'ಕಾಬೂಲಿವಾಲಾ', ಮುದ್ದಣನ 'ರಾಮಾಶ್ವಮೇಧ', ಕುವೆಂಪು ಅವರ 'ಕಿಂದರ ಜೋಗಿ' ಹೀಗೆ ಕನ್ನಡ ಮತ್ತು ತುಳು ಭಾಷೆಗಳಿಗೆ ಕೆದಂಬಾಡಿ ನೀಡಿದ ಕೊಡುಗೆ ಗಮನಾರ್ಹ. 'ತರಂಗ' ಪತ್ರಿಕೆಯಲ್ಲಿ ಧಾರಾವಾಹಿಯಾಗಿ ಪ್ರಕಟವಾದ 'ತಲೆಬುರುಡೆ ಜಡಿಸಿದ ಕೊಲೆ ರಹಸ್ಯ' ರೈಯವರಿಗೆ ತುಂಬಾ ಜನಪ್ರಿಯತೆಯನ್ನು ತಂದುಕೊಟ್ಟ ಅನುವಾದ ಕೃತಿ, ರಾಷ್ಟ್ರಕವಿ ಕುವೆಂಪು ಇವರಿಂದ ವೈಯಕ್ತಿಕ ಮೆಚ್ಚುಗೆ, ಸನ್ಮಾನ ಪಡೆದ ರೈಯವರು 'ಭಾಷಾ ಸನ್ಮಾನ್' ಪ್ರಶಸ್ತಿಗೂ ಭಾಜನರಾದವರು. ಕನ್ನಡದಲ್ಲಿ ಬೇಟೆ: ಸಾಹಿತ್ಯವನ್ನು ಒಂದು ಪ್ರಕಾರವಾಗಿ ಬೆಳೆಸಿದ ಶ್ರೀ ಕದಂಬಾಡಿ ಜತ್ತಪ್ಪ ರೈ ಅವರ ಬದುಕು ಸಾಧನೆಯನ್ನು 'ಹುಲಿಹೆಜ್ಜೆಯ ಕದಂಬಾಡಿ ಜತ್ತಪ್ಪ ರೈ' ಕೃತಿಯಲ್ಲಿ ಡಾ. ನರೇಂದ್ರ ರೈ ದೇರ್ಲ ಅವರು ಅತ್ಯಂತ ಸೊಗಸಾಗಿ ಚಿತ್ರಿಸಿದ್ದಾರೆ ಎಂಬುದಾಗಿ ಬರೆಯಲಾಗಿದೆ. ಕೃತಿಯ ಪರಿವಿಡಿಯಲ್ಲಿ ಕೆದಂಬಾಡಿ ಜತ್ತಪ್ಪ ರೈಯವರ ಮೃಗಯಾ ಕೃತಿಗಳು, ಕೆದಂಬಾಡಿಯವರ ಅನುವಾದ ಸಾಹಿತ್ಯ, ಕೆದಂಬಾಡಿ ಜತ್ತಪ್ಪ ರೈ ನೆನಪುಗಳು, ಕೆದಂಬಾಡಿ ಜತ್ತಪ್ಪ ರೈ ಅವರ ಕೃತಿಗಳು, ಪ್ರಶಸ್ತಿಗಳು,ಬಿರುದುಗಳು ಎಂಬ ಶೀರ್ಷಿಕೆಗಳ ಲೇಖನಗಳಿವೆ.

About the Author

ನರೇಂದ್ರ ರೈ ದೇರ್ಲ
(14 October 1965)

ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ಳಾರೆಯ ಡಾ. ಶಿವರಾಮ ಕಾರಂತ ಪ್ರಥಮ ದರ್ಜೆ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿರುವ ಡಾ. ನರೇಂದ್ರ ರೈ ದೇರ್ಲ ಅವರು ಪತ್ರಕರ್ತರೂ ಹೌದು. ಹಾಗೆಯೇ  ಕವಿಗಳೂ ಕೂಡ. 'ತೊದಲು' ಕವನ ಸಂಕಲನದ ನಂತರ ಗದ್ಯ ಬರವಣಿಗೆ ಮುಂದುವರಿಸಿದರು.  ಆದರೆ, ಪದ್ಯದ ಗುಣ ಅವರ ಗದ್ಯಕ್ಕಿದೆ. ಅವರಿಗೆ ಸಾವಯವ ಕೃಷಿಯಲ್ಲಿ ವಿಶೇಷ ಆಸಕ್ತಿ . ಹಾಗಯೇ ಪರಿಸರದ ಬಗ್ಗೆ ಗಾಢ ಅನುರಕ್ತಿ.  ತೇಜಸ್ವಿಯೊಳಗಿನ ಕಲಾವಿದ'ನನ್ನು ಕಂಡರಿಸಿದ ನರೇಮದ್ರ ಅವರು  'ನಮ್ಮೆಲ್ಲರ ತೇಜಸ್ವಿ'ಯ ಅನಾವರಣಗೊಳಿಸಿದ್ದಾರೆ. ’ವಿಶುಕುಮಾರ್ ಬದುಕು ಬರೆಹ'; 'ಹೊನ್ನಯ ಶೆಟ್ಟಿ ಬದುಕು ಬರೆಹ'; 'ಡಾ. ಮೋಹನ ...

READ MORE

Related Books