ರವೀಂದ್ರನಾಥ ಠಾಕೂರ ಅವರು ನೊಬೆಲ್ ಪ್ರಶಸ್ತಿಗೆ ಭಾಜನರಾಗುವ ಮೂಲಕ ಭಾರತದ ಸಾಹಿತ್ಯ-ಸಂಸ್ಕೃತಿಯನ್ನು ವಿಶ್ವಮಟ್ಟದಲ್ಲಿ ಪರಿಚಯಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಭಾರತೀಯ ಸಾಹಿತ್ಯ-ಸಂಸ್ಕೃತಿ-ಆದರ್ಶ-ಅಧ್ಯಾತ್ಮಿಕ ಶಿಕ್ಷಣ, ಸಾಮರಸ್ಯದ ಬಾಳು-ಸರ್ವ ಜನರಿಗೂ ಶಾಂತಿ ಬಯಸುವ ಉನ್ನತ ಮೌಲ್ಯಗಳನ್ನು ತಮ್ಮ ಸಾಹಿತ್ಯದ ಮೂಲಕ ತೋರಿದ್ದಾರೆ ಮಾತ್ರವಲ್ಲ; ಅವರ ಬದುಕೇ ಹಾಗಿತ್ತು ಎಂದರೆ ಸೂಕ್ತ.
ಸಾಹಿತಿ ಹಾ.ಮಾ. ನಾಯಕ ಅವರು ಈ ಸಾಹಿತ್ಯ ಸಂತನ ಪರಿಚಯವನ್ನು ಮಾಡಿಕೊಡುವ ಯತ್ನದ ಭಾಗವೇ ಈ ಕೃತಿ-ರವೀಂದ್ರನಾಥ ಠಾಕೂರ್. ಬಹುಮುಖೀಯ ವ್ಯಕ್ತಿತ್ವದ ಠಾಕೂರರ ಜೀವನ ಸುಲಭವಾಗಿ ಅಕ್ಷರಗಳಿಗೆ ಸಿಗದು. ಆದರೂ. ಲೇಖಕರು ತಮ್ಮ ಅಧ್ಯಯನ ಸಿದ್ಧಿಯಿಂದ ಠಾಕೂರರ ಜೀವನಕ್ಕೆ ನ್ಯಾಯ ಒದಗಿಸಿದ್ದಾರೆ. ಠಾಕೂರರೇ ಹೇಳಿರುವಂತೆ ಕವಿಯನ್ನು ನೀನು ಆತನ ಬದುಕಿನ ಚರಿತ್ರೆಯಲ್ಲಿ ಕಾಣಲಾರೆ’ ಎಂದು. ಅದಕ್ಕೆ, ಠಾಕೂರರ ಜೀವನವೇ ಕಾವ್ಯ, ಸಾಹಿತ್ಯ, ಸಂಗೀತ, ಚಿತ್ರಕಲೆ, ಕಾದಂಬರಿ ಎಲ್ಲವೂ ಆಗಿತ್ತು ಎನ್ನುವುದೇ ಅವರ ಸೂಕ್ತ ಪರಿಚಯ ಎಂಬುದನ್ನು ಈ ಕೃತಿಯು ಧ್ವನಿಸುತ್ತದೆ.
ತಮ್ಮ ಅಂಕಣ ಬರಹಗಳಿಂದ ಪ್ರಸಿದ್ಧರಾಗಿದ್ದ ಹಾ.ಮಾ. ನಾಯಕರು (ಹಾರೋಗದ್ದೆ ಮಾನಪ್ಪನಾಯಕ) ಸಾಹಿತ್ಯ- ಸಾಂಸ್ಕೃತಿಕ ಲೋಕದ ದೊಡ್ಡ ಹೆಸರಾಗಿದ್ದರು. ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಹಾರೋಗದ್ದೆಯಲ್ಲಿ 1931ರ ಸೆಪ್ಟೆಂಬರ್ 12ರಂದು ಜನಿಸಿದರು. ತಂದೆ ಶ್ರೀನಿವಾಸನಾಯಕ, ತಾಯಿ ರುಕ್ಮಿಣಿಯಮ್ಮ. ಶಿವಮೊಗ್ಗೆಯಲ್ಲಿ ಶಾಲಾ ವಿದ್ಯಾಭ್ಯಾಸವನ್ನು ಪೂರೈಸಿ ಕಾಲೇಜು ವಿದ್ಯಾಭ್ಯಾಸವನ್ನು ಮೈಸೂರಿನಲ್ಲಿಯೂ ಸ್ನಾತಕೋತ್ತರ ಶಿಕ್ಷಣವನ್ನು ಕಲ್ಕತ್ತೆಯಲ್ಲಿಯೂ ಮಾಡಿ ಭಾಷಾವಿಜ್ಞಾನದಲ್ಲಿ ಎಂ.ಎ. (1958)ಪದವಿಯನ್ನು ಪಡೆದರು. ತುಮಕೂರಿನಲ್ಲಿ ಕನ್ನಡ ಅಧ್ಯಾಪಕ (1955) ಆಗುವ ಮೂಲಕ ತಮ್ಮ ವೃತ್ತಿಯನ್ನು ಪ್ರಾರಂಭಿಸಿದ್ದ ಅವರು ಅನಂತರ ಪ್ರವಾಚಕ, ಪ್ರಾಧ್ಯಾಪಕ, ನಿರ್ದೇಶಕರಾಗಿ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಸೇವೆ ಸಲ್ಲಿಸಿದ್ದರು. ಗುಲ್ಬರ್ಗ ವಿಶ್ವವಿದ್ಯಾಲಯದಲ್ಲಿ ಕುಲಪತಿ (1984) ...
READ MORE