ಕವಿ ಚೆನ್ನವೀರ ಕಣವಿ ಅವರು ಮೂಲತಃ ಗದಗ ಜಿಲ್ಲೆಯವರು. 1982ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ಪುರಸ್ಕೃತರು. ಕರ್ನಾಟಕ ಸರ್ಕಾರದ ಪಂಪ ಪ್ರಶಸ್ತಿ ಮತ್ತು ಕನ್ನದ ವಿಶ್ವವಿದ್ಯಾಲಯದ ನಾಡೋಜ ಪ್ರಶಸ್ತಿ ಪುರಸ್ಕೃತರೂ ಹೌದು. ಕವಿಯಾಗಿ 16 ಕವನ ಸಂಕಲನಗಳನ್ನು ಪ್ರಕಟಿಸಿದ್ದಾರೆ. ಕನ್ನಡ ಸಾಹಿತ್ಯ ವಿಮರ್ಶೆ ಕ್ಷೇತ್ರಕ್ಕೂ ತಮ್ಮದೇ ಕೊಡುಗೆ ನೀಡಿದ್ದಾರೆ. ಹತ್ತು ಹಲವು ಗ್ರಂಥಗಳನ್ನು ಸ್ವತಂತ್ರವಾಗಿಒಯೂ ಹಾಗೂ ಇತರರೊಡನೆಯೂ ಸಂಪಾದಿಸಿದ್ದಾರೆ. ಮಧುರಚೆನ್ನರ ಜೀವನ ಸಾಧನೆ ಕುರಿತು ಕೃತಿ ರಚಿಸಿದ್ದಾರೆ. ಇಂತಹ ಕವಿಯ ಕುರಿತು ಸಾಹಿತಿ ಡಾ. ಗುರುಲಿಂಗ ಕಾಪಸೆ ಅವರು ಈ ಕೃತಿ ರಚಿಸಿದ್ದು, ಡಾ. ಪ್ರಧಾನ ಗುರುದತ್ತ ಅವರು ಸಂಪಾದಿಸಿದ್ದಾರೆ.
ಗುರುಲಿಂಗ ಕಾಪಸೆ ಅವರು 1928ರ ಏಪ್ರಿಲ್ 2 ರಂದು ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಬಿ.ಕೆ. ಲೋಣಿಯಲ್ಲಿ ಜನಿಸಿದರು. ಮಧುರಚೆನ್ನರ ಜೀವನ ಹಾಗೂ ಕೃತಿಗಳು ಕುರಿತು ಮಹಾಪ್ರಬಂಧ ಬರೆದಿದ್ದಾರೆ. ‘ಹಲಸಂಗಿ ಗೆಳೆಯರು’ (1998, ಪ್ರಸಾರಾಂಗ ಕನ್ನಡ ವಿಶ್ವವಿದ್ಯಾಲಯ ಹಂಪಿ) ಡಾ. ಕಾಪಸೆ ಅವರು ಸಂಪಾದಿಸಿದ ಮಧುರ ಚೆನ್ನರ ಲೇಖನಗಳಲ್ಲಿ ಆ ಕಾಲದ ಅನೇಕ ಜಾನಪದ ವಿರಳ ಸಂಗತಿಗಳು ದಾಖಲಾಗಿವೆ. ಕನ್ನಡ ವಿಶ್ವವಿದ್ಯಾಲಯವು “ಜಾನಪದ ಅಧ್ಯಯನ” ಕ್ಕೆ ಕೊಟ್ಟ ವಿಶಿಷ್ಠ ಕೊಡುಗೆಯಾಗಿದೆ. ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ನಿವೃತ್ತಿಯಾಗಿದ್ದಾರೆ. ಕೃತಿಗಳು: ಅಕ್ಕಮಹಾದೇವಿ, ಮಧುರಚೆನ್ನ, ಶ್ರೀ ಅರವಿಂದರು, ಬಸವೇಶ್ವರ, ಹಲಸಂಗಿ ಗೆಳೆಯರು, ಪ್ರವಾಸಕಥನ: ಶಾಲ್ಮಲೆಯಿಂದ ಗೋದಾವರಿಯವರೆಗೆ ಹಾಗೂ ಮಕ್ಕಳ ಸಾಹಿತ್ಯ: ಕವಿ ರವಿಂದ್ರರು, ಶಿ.ಶಿ.ಬಸವನಾಳ ಮತ್ತು ವಿಮರ್ಶೆ: ಸಾಹಿತ್ಯ ಸಂಬಂಧ, ಬೇಂದ್ರೆ-ಮಧುರಚೆನ್ನ ಸಖ್ಯಯೋಗ. ಸಂಪಾದಿತ ಕೃತಿಗಳು: ಕಾಲ-ಕವಿ (ಕಾವ್ಯ), ಪಾರಮಾರ್ಥ ಗೀತಾ ...
READ MORE