ಸಾಂಪ್ರದಾಯಿಕ ವಿದ್ಯೆ ಕಲಿತು ಸಾಂಪ್ರದಾಯಿಕ ಜೀವನ ನಡೆಸುತ್ತ ಹಳ್ಳಿಯಲ್ಲಿದ್ದ ಶ್ರೀಮನ್ಮಧ್ವರ ಬೋಧನೆಯನ್ನು ಹಿನ್ನೆಲೆಗೆ ಇಟ್ಟುಕೊಂಡು ಈ ಕೃತಿಯನ್ನು ರಚಿಸಲಾಗಿದೆ. ಅವರ ಆದರ್ಶಗಳು ಮತ್ತು ಮೌಲ್ಯಗಳು ಭಿನ್ನ ಪರಿಸರದಲ್ಲೂ ಭಿನ್ನ ಕಾಲಘಟ್ಟಗಳಲ್ಲೂ ಮುಕ್ಕಾಗದೆ ಮುಂದುವರಿದಿರುವುದನ್ನು ಪರಿಶೀಲಿಸಿ ಇಲ್ಲಿ ದಾಖಲಿಸಿದ್ದಾರೆ. `ಆತ್ಮೀಯ ಸಂವಾದಾತ್ಮಕ ಸರಳ ಸುಭಗ ಶೈಲಿ, ಹೃದ್ಯನಿರೂಪಣೆ, ಶಾಸ್ತ್ರೀಯ ಬರವಣಿಗೆಗೆ ತಕ್ಕುದಾದ ನಿರ್ದುಷ್ಟ ಭಾಷೆ - ಈ ಪುಟ್ಟ ಕೃತಿಗೆ ವಿಶೇಷ ಮೆರಗು ನೀಡಿವೆ' ಎಂದು ವಿಮರ್ಶಕರು ಮೆಚ್ಚಿದ್ದಾರೆ.
ಸಾಹಿತ್ಯ ರಂಗದಲ್ಲಿ ನಿರಂತರ ಬರೆಯುವ ಸೃಜನಶೀಲತೆಯನ್ನು ಕಾಪಿಟ್ಟುಕೊಂಡಿರುವ ಪ್ರಣತಾರ್ತಿಹರನ್ ಹಾಸನ ಜಿಲ್ಲೆ ಅರಕಲಗೂಡು ತಾಲ್ಲೂಕಿನ ಬಸವಾಪಟ್ಟಣದವರು. ತೋಟಗಾರಿಕೆಯೇ ಕುಲಕಸುಬಾಗಿದ್ದ, ಹರಿಕಥೆ ಮತ್ತು ಗಮಕ ಕಲೆಯನ್ನು ರೂಢಿಸಿಕೊಂಡ ಪೂರ್ವಿಕರಿದ್ದ ಮನೆತನದಲ್ಲಿ ಹುಟ್ಟಿ, ಪ್ರಖರ ಸಾಂಸ್ಕೃತಿಕ ಮತ್ತು ವಿದ್ವತ್ ಪರಿಸರದ ಸಂಸ್ಕಾರ ಪಡೆದವರು ಪ್ರಣತಾರ್ತಿಹರನ್. ಜಾನಪದ ಮತ್ತು ಭಾರತೀಯ ಸಾಹಿತ್ಯದ ಸ್ನಾತಕೋತ್ತರ ಡಿಪ್ಲೊಮಾ ಪದವಿ ಪಡೆದಿದ್ಧಾರೆ. 2015ನೇ ಸಾಲಿನ ಪ್ರವಾಸ ಸಾಹಿತ್ಯ ಪ್ರಕಾರದ ಅತ್ಯುತ್ತಮ ಕೃತಿಗೆ ಅವರ ‘ಆಸುಪಾಸು’ ಪ್ರವಾಸ ಕಥನ ಆಯ್ಕೆಯಾಗಿದೆ. ...
READ MORE