ಜಿ.ಪಿ.ರಾಜರತ್ನಂ ಜೀವನಚರಿತ್ರೆ ಪುಸ್ತಕವನ್ನು ಲೇಖಕ ನೀಲತ್ತಹಳ್ಳಿ ಕಸ್ತೂರಿ ಅವರು ರಚಿಸಿದ್ದಾರೆ. ಈ ಕೃತಿಯಲ್ಲಿ ಮಕ್ಕಳ ತುಟಿಗಳನ್ನೂ ಮನಸ್ಸನ್ನೂ ಅರಳಿಸುವ ಸಾಹಿತ್ಯ ಬರೆದ ರಾಜರತ್ನಂ ಎಲ್ಲ ವಯಸ್ಸಿನವರಿಗೂ ಬೆಳಕು ತೋರುವ ಪುಸ್ತಕಗಳನ್ನು ಬರೆದರು. ಕವಿ, ನಾಟಕಕಾರ, ವಿಮರ್ಶಕ, ಚಿಂತನಶೀಲ ಬರಹಗಾರ ಎಂದು ಪ್ರಸಿದ್ಧಿ ಪಡೆದ ಅವರು ಎಲೆಡೆಗಳಿಂದ eನವನ್ನು ಪಡೆದುಕೊಂಡರು. ಎಲ್ಲರೊಡನೆ ಅದನ್ನು ಹಂಚಿಕೊಂಡರು. ಅವರ ತರಗತಿಗಳಲ್ಲಿ ಕುಳಿತ ಸಾವಿರಾರು ಮಂದಿಗಲ್ಲದೆ ಹತ್ತಾರು ಸಾವಿರ ಮಂದಿಗೆ ಗುರುವಾದರು ಎಂದು ಜಿ.ಪಿ.ರಾಜರತ್ನಂ ಅವರ ಕುರಿತು ಈ ಕೃತಿಯಲ್ಲಿ ವಿವರಿಸಲಾಗಿದೆ.
ನೀಲತ್ತಹಳ್ಳಿ ಕಸ್ತೂರಿಯವರು ಮಾಗಡಿಯಲ್ಲಿ ಸೆಪ್ಟೆಂಬರ್ 29, 1931ರಂದು ಜನಿಸಿದರು. ತಂದೆ ವೆಂಕಟಾಚಾರ್ಯ, ತಾಯಿ ಸೀತಮ್ಮ. ಅಂಚೆ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದ ಅವರಿಗೆ ಸಾಹಿತ್ಯದಲ್ಲಿ ವಿಶೇಷ ಆಸಕ್ತಿ. ಅವರೊಬ್ಬ ಉತ್ತಮ ಅನುವಾದಕರು. ಚೀನಾ ಜಪಾನ್ ಕತೆಗಳು (ಅನುವಾದ) (ಕಾದಂಬರಿ), ಇದು ಭಾರತದ ದಾರಿ (ನಾಟಕ) ರಾಜೇಂದ್ರ ಪ್ರಸಾದ್, ಡಿ.ವಿ. ಗುಂಡಪ್ಪ ಜೀವನ ಮತ್ತು ಸಾಧನೆ, ಸಿದ್ಧವನಹಳ್ಳಿ ಕೃಷ್ಣಶರ್ಮ - ವ್ಯಕ್ತಿ ಮತ್ತು ಶಕ್ತಿ ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಬಹುಮಾನ ಸಂದಿದೆ. ...
READ MORE