ಬೆಳಕಿನ ವಿನ್ಯಾಸದ ಕೌಶಲ್ಯಕ್ಕೆ ತಮ್ಮ ಓರಿಗೆಯವರಿಂದ ‘ದೀವಟಿಗೆ ಕೃಷ್ಣಪ್ಪ’ ಎಂದೇ ಹೆಸರಾಗಿರುವ ಎಲ್. ಕೃಷ್ಣಪ್ಪನವರ ಕುರಿತು ಚಿತ್ರಣ ನೀಡಿರುವ ಕೃತಿ ಇದಾಗಿದೆ. ಯಾವುದೇ ಸಾಮಾಜಿಕ ಹಿನ್ನೆಲೆ ಇಲ್ಲದ, ಸಾಂಸ್ಕೃತಿಕ -ಸಾಹಿತ್ಯಿಕ ಪರಂಪರೆಯ ಲವಲೇಶವೂ, ಗಂಧ ಗಾಳಿಯೂ ಇಲ್ಲದ ಮನೆಯಿಂದ ಬಂದವರು ಕೃಷ್ಣಪ್ಪ, ಅವರ ಬದುಕು ಆಸಕ್ತಿಗಳ ಕುರಿತು ಈ ಕೃತಿಯು ವಿವರಿಸುತ್ತದೆ.
ರಂಗಕರ್ಮಿ, ಲೇಖಕ ಡಾ. ಡಿ.ಬಿ. ಮಲ್ಲಿಕಾರ್ಜುನಸ್ವಾಮಿ ಮಹಾಮನೆ ಅವರು ಮೂಲತಃ ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ದೇವಲಾಪುರ (31-07-1958) ಗ್ರಾಮದವರು. ತಂದೆ- ಡಿ.ಎಸ್. ಬಸಟ್ಟಪ್ಪ, ತಾಯಿ- ಸಿ.ಆರ್. ಮಂಗಳಗೌರಮ್ಮ. ಕನ್ನಡ ಎಂ.ಎ ಪದವೀಧರರು. ಎಂ.ಪಿ.ಎ.ಎಂ.ಫಿಲ್(ಜಾನಪದ ರಂಗಭೂಮಿ) ಹಾಗೂ ಅಭಿನಯ ತರಂಗದ (ರಂಗಶಿಕ್ಷಣ) ಡಿಪ್ಲೊಮಾ ಪಡೆದಿದ್ದಾರೆ. 1976ರಲ್ಲಿ ನಾಗಮಂಗಲದ ಉದಯಭಾನು ಕಲಾಸಂಘದ ‘ಸಂಚು ಹೂಡಿದ ಸಿಂಹ’ ನಾಟಕದ ಮೂಲಕ ರಂಗಪ್ರವೇಶ ಮಾಡಿದರು. 19881ರಲ್ಲಿ ಅಭಿನಯ ತರಂಗ ಸೇರಿ, ‘ಕೋತಿಕತೆ’, ‘ಜನಮರುಳೋ’, ‘ಮಾ ನಿಷಾಧ’, ‘ಚಿರಸ್ಮರಣೆ’, ‘ಕಿಂಗ್ ಲಿಯರ್’, ‘ಟೊಳ್ಳುಗಟ್ಟಿ’, ‘ಪ್ರತಿಜ್ಞಾ ಯೌಗಂಧರಾಯಣ’ ಹಾಗೂ ಬೆಂಗಳೂರಿನ ಇತರ ತಂಡಗಳಲ್ಲಿ 30ಕ್ಕೂ ...
READ MORE