‘ನನ್ನ ಅಣ’ ಮೈಸೂರು ಅನಂತಸ್ವಾಮಿ ಅಪೂರ್ವ ಛಾಯಾಚಿತ್ರಗಳೊಂದಿಗೆ ಮೈಸೂರು ಅನಂತಸ್ವಾಮಿ ಅವರ ಮಗಳು ಸುನೀತಾ ಅನಂತಸ್ವಾಮಿ ಅವರು ಪ್ಯರಕಟಿಸಿರುವ ಕೃತಿ.
ಕನ್ನಡ ಸಾಹಿತ್ಯದ ಬನಿಯನ್ನು ಮನೆ ಮನಗಳೊಂದಿಗೆ ಬೆಸುಗೆ ಹಾಕುವಲ್ಲಿ ಮೈಸೂರು ಅನಂತಸ್ವಾಮಿ ಅವರ ಪಾತ್ರ ಹಿರಿದು. ಅವರ ಮಗಳು, ಅಪ್ಪನ ಗರಡಿಯಲ್ಲಿಯೇ ಪಳಗಿದ ಖ್ಯಾತ ಗಾಯಕಿ ಸುನೀತಾ ಅನಂತಸ್ವಾಮಿ ಇಲ್ಲಿ ತಂದೆಯೊಂದಿಗಿನ ಹಲವು ಆಪ್ತ ಸಂಗತಿಗಳನ್ನು ದಾಖಲಿಸಿದ್ದಾರೆ. ಮೈಸೂರು ಅನಂತಸ್ವಾಮಿ ಅವರ ಲೋಕದಲ್ಲಿ ವಿಹರಿಸಬೇಕಾದರೆ ಈ ಕೃತಿಯನ್ನು ಓದಬೇಕು.
ಸುನೀತಾ ಅನಂತಸ್ವಾಮಿ, ಸುಗಮ ಸಂಗೀತ ಕ್ಷೇತ್ರದ ಮಹಾನ್ ಕಲಾವಿದರಾದ ಮೈಸೂರು ಅನಂತಸ್ವಾಮಿ ಅವರ ಪುತ್ರಿ. ಅಮೆರಿಕಾದಲ್ಲಿ ನೆಲೆಸಿರುವ ಸುನೀತಾ ಅಲ್ಲಿಯೂ ಕನ್ನಡದ ಕಂಪನ್ನು ಬಿತ್ತುವ ಕೆಲಸ ಮಾಡುತ್ತಿದ್ದಾರೆ. ತಂದೆಯಂತೆ ಸುಗಮ ಸಂಗೀತ ಕ್ಷೇತ್ರದಲ್ಲಿ ಮಹತ್ವದ ಸಾಧನೆಗೈದಿದ್ದು, ಹಲವು ಲೇಖನಗಳನ್ನು ಬರೆದಿದ್ದಾರೆ. ಜೊತೆಗೆ, ತಮ್ಮ ತಂದೆಯ ವ್ಯಕ್ತಿತ್ವ ಕುರಿತು‘ನನ್ನ ಅಣ’ ಎಂಬ ಕೃತಿಯನ್ನು ರಚಿಸಿದ್ದಾರೆ. ...
READ MORE