ಮಗು ನೀನಾಗು ಮಲಾಲಾ

Author : ಲಿಂಗರಾಜ ರಾಮಾಪೂರ

Pages 68

₹ 50.00




Year of Publication: 2016
Published by: ಹಳ್ಳದಮನಿ ಪ್ರಕಾಶನ
Address: ಹಳೇಹುಬ್ಬಳ್ಳಿ, ಹುಬ್ಬಳ್ಳಿ
Phone: 7795920050

Synopsys

ತಾಲಿಬಾನ್ ಉಗ್ರವಾದಿಗಳ ವಿರುದ್ಧ ಗುಡುಗಿದ ಬಾಲೆ ಮಲಾಲ ಅನ್ಯಾಯವನ್ನು ಸಹಿಸಲಾರದ ಮನಸ್ಥಿತಿಗೆ ಸಂಕೇತ. ಮಲಾಲ ಯುಸೂಫ್ ಅವರ ಧೈರ್ಯ, ಸ್ಥೈರ್ಯ ಮಕ್ಕಳಿಗೆ ಮಾತ್ರವಲ್ಲ ದೊಡಗ್ಡವರಿಗೂ ಮಾದರಿ ಹಾಗೂ ಅನುಕರಣೀಯ. ಈ ಕುರಿತು ಲೇಖಕ ಲಿಂಗರಾಜ ರಾಮಾಪುರ ಅವರು ಮಲಾಲ ಅವರುಜೀವನ ಚಿತ್ರಣ ಕಟ್ಟಿಕೊಟ್ಟಿದ್ದಾರೆ. 

 

About the Author

ಲಿಂಗರಾಜ ರಾಮಾಪೂರ
(22 July 1978)

ಡಾ.ಲಿಂಗರಾಜ ರಾಮಾಪೂರ ವ್ರತ್ತಿಯಲ್ಲಿ ಶಿಕ್ಷಕರು. ಪ್ರವ್ರತ್ತಿಯಲ್ಲಿ ಬರಹಗಾರರು. ಪ್ರಸ್ತುತ ಹುಬ್ಬಳ್ಳಿ ತಾಲೂಕು ಕಿರೇಸೂರ ಸರಕಾರಿ ಪ್ರೌಢಶಾಲೆಯ ಆಂಗ್ಲ ಭಾಷೆಯ ಶಿಕ್ಷಕ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಮಕ್ಕಳ ಸಾಹಿತ್ಯದ ಎಲ್ಲ ಪ್ರಕಾರಗಳ ಕ್ರಷಿ ಮಾಡಿದ್ದಾರೆ. 25ಕೂ ಹೆಚ್ಚು ಕೃತಿ ರಚಿಸಿದ್ದಾರೆ. 200ಕೂ ಹೆಚ್ಚು ಲೇಖನ ಪ್ರಕಟಿಸಿದ್ದಾರೆ. ಹುಗ್ಗಿ ಅಂದ್ರ ಹಿಂಗೈತಿ, ಪುಟ್ಟರಾಜ, ಭೂಮಿ ಮಾರಾಟಕ್ಕಿಲ್ಲ, ನಿಸಗ೯ ನ್ಯಾಯ, ನೀರ್ ಬಾರ್ ಮಕ್ಕಳ ನಾಟಕ ಕೃತಿಗಳು. ಪರಿಸರದೊಳಗಿನ ಸತ್ಯದ ಮಾತು, ವಿಜ್ಞಾನದ ಬೆಳಕಿನಲ್ಲಿ ಇವು ಬರಹಗಳನ್ನೊಳಗೊಂಡ ಕೃತಿಗಳು. ಗುಬ್ಬಿಗೊಂದು ಮನೆ ಮಾಡಿ ಮಕ್ಕಳ ಕಾದಂಬರಿ. ಶಿಕ್ಷಕನ ನೋಟದಲ್ಲಿ ಅಮೇರಿಕಾ, ವಿಜ್ಞಾನದ ...

READ MORE

Reviews

ಲಿಂಗರಾಜ ರಾಮಾಪೂರ ಮಕ್ಕಳಿಗಾಗಿ ಮಿಡಿದ ಮಹಾಚೇತನ. ‘ಮಕ್ಕಳಿಗಾಗಿ ಆಸ್ತಿ ಮಾಡಬೇಡಿ, ಮಕ್ಕಳನ್ನೇ ಆಸ್ತಿಯನ್ನಾಗಿಸಿ’ ಎಂಬ ತತ್ವವನ್ನು ನಂಬಿದವರು. ಈ ದಿಶೆಯಲ್ಲಿ ತಾವು ಕೆಲಸ ಮಾಡಿದ ಶಾಲೆಗಳಲ್ಲೆಲ್ಲಾ ಮಕ್ಕಳ ಸರ್ವಾಂಗೀಣ ವಿಕಾಸಕ್ಕಾಗಿ ಶ್ರಮಿಸಿದವರು. ಹೆಣ್ಣು-ಗಂಡು, ಕರಿಯ-ಬಿಳಿಯ, ಬಡವ-ಶ್ರೀಮಂತ, ಉಚ್ಛ-ನೀಚ ಇದ್ಯಾವ ಭಾವವನ್ನೂ ಮಕ್ಕಳಲ್ಲಿ ತೋರದೇ ತಮ್ಮದೇ ಸ್ವಂತ ಮಕ್ಕಳಂತೆ ಪ್ರೀತಿ ನೀಡಿದವರು. ಇವರ ಮಾರ್ಗದರ್ಶನದಲ್ಲಿ ಹುಬ್ಬಳ್ಳಿ ತಾಲೂಕಿನ ಭೈರಿದೇವರಕೊಪ್ಪ ಸರಕಾರಿ ಶಾಲೆಯ ಮಕ್ಕಳು ರಾಷ್ಟ್ರೀಯ ವಿಜ್ಞಾನ ಸಮಾವೇಶಗಳಲ್ಲಿ 3 ಬಾರಿ ರಾಷ್ಟ್ರಮಟ್ಟದಲ್ಲಿ, 9 ಬಾರಿ ರಾಜ್ಯಮಟ್ಟದಲ್ಲಿ ಮಿಂಚುವಂತೆ ಶ್ರಮಿಸಿದವರು. ಮಕ್ಕಳಿಗಾಗಿ ನಾಟಕಗಳನ್ನು ರಚಿಸಿ ಅವುಗಳನ್ನು ಮಕ್ಕಳಿಂದಲೇ ಆಡಿಸಿದವರು. ಮಕ್ಕಳೊಂದಿಗೆ ತಾವೂ ಮಕ್ಕಳಾಗಿ ಹಾಡಿದವರು. ಪೌರಪ್ರಜ್ಞೆ, ಪರಿಸರ ಪ್ರಜ್ಞೆಗಾಗಿ ಮಕ್ಕಳ ಚಳುವಳಿ ನೇತೃತ್ವ ವಹಿಸಿದವರು. ಸಾವಯವ ಕೃಷಿಗಾಗಿ ಮಕ್ಕಳ ಆಂದೋಲನ ರೂಪಿಸಿದವರು. ಶಾಲೆಗಳಲ್ಲಿ ಮಕ್ಕಳ ಚಿಲಿಪಿಲಿ ಕಲರವಕ್ಕೆ ದನಿಯಾದವರು. ಇವರು ಸಾಗಿದಲ್ಲೆಲ್ಲಾ ಇವರ ಹಿಂದೆ ಮಕ್ಕಳ ಸೈನ್ಯ. ಕರ್ನಾಟಕ ಸರಕಾರದ ಬಾಲವಿಕಾಸ ಅಕಾಡೆಮಿಯ ರೂಪುರೇಷೆಗಳನ್ನು ನೀಡಿ ಸಲಹಾ ಸಮಿತಿ ಸದಸ್ಯರಾದವರು. ಚಿಲಿಪಿಲಿ ಗುಬ್ಬಚ್ಚಿ ಗೂಡು ಮಕ್ಕಳ ಬಳಗದ ಮಾರ್ಗದರ್ಶಕರಾಗಿ ಕಾರ್ಯ ನಿರ್ವಹಿಸಿದವರು. ‘ಗುಬ್ಬಚ್ಚಿ ಗೂಡು’ ಮಕ್ಕಳ ಪತ್ರಿಕೆಗೆ ಕಳೆದ 15 ವರ್ಷಗಳಿಂದ ಬರೆಯುತ್ತಾ ಅದರ ಸಹಸಂಪಾದಕರಾದವರು. ಕಥೆ, ಕವನ, ನಾಟಕ, ಕಾದಂಬರಿ ಹೀಗೆ ಸಾಹಿತ್ಯದ ಎಲ್ಲಾ ಮಜಲುಗಳನ್ನು ಮಕ್ಕಳಿಗೆ ತಮ್ಮ ಅಮೂಲ್ಯ ಕೃತಿಗಳ ಮೂಲಕ ಪರಿಚಯಿಸಿದವರು. ಈಗ ‘ಮಹಾಬಾಲೆ ಮಲಾಲಾ’, ಮಲಾಲಾ ಯೂಸುಫ್ ಜೈ ಅವಳ ಹೋರಾಟದ ಹಾದಿಯನ್ನು ಪರಿಚಯಿಸುವುದಲ್ಲದೇ ಮಕ್ಕಳ ಹಕ್ಕುಗಳನ್ನು ಸಾರಿ ಹೇಳುತ್ತದೆ. ಓದಿ ಪ್ರತಿಕ್ರಿಯಿಸಿರಿ.
-ಶ್ರೀಮತಿ ವಿಜಯಲಕ್ಷ್ಮಿ ಹಂಚಿನಾಳ
ಉಪನ್ಯಾಸಕರು, ಡೈಟ್ ಧಾರವಾಡ
 

Related Books