ಲೇಖಕ ಎನ್. ರಂಗನಾಥಶರ್ಮಾ ಅವರ ಕೃತಿ ʻವೀರ ಕಂಪಣರಾಯʼ. ಪುಸ್ತಕವು ಇತಿಹಾಸದಲ್ಲಿ ಕಂಡುಬರುವ ರಾಜಕಾರ್ಯ ದಕ್ಷನೂ ಉತ್ತಮ ಆಡಳಿತಗಾರನಾಗಿರುವ ಕಂಪಣರಾಯನ ಕುರಿತ ಜೀವನಚರಿತ್ರೆಯನ್ನು ಹೇಳುತ್ತದೆ. ಇವನಿಗೆ ʻಕುಮಾರಕಂಪಣʼ ಎಂಬ ಹೆಸರೂ ಇತ್ತು. ಬುಕ್ಕರಾಯನಿಗೆ ರಾಜ್ಯಭಾರದಲ್ಲಿ ಬಲಗೈ ಬಂಟನಂತಿದ್ದ ಇವನಿಗೆ ಮುಳಬಾಗಿಲು ಪ್ರದೇಶಕ್ಕೆ ಮಹಾ ಮಾಂಡಲಿಕನನ್ನಾಗಿ ನೇಮಿಸಿ ಬಳಿಕ ಅಲ್ಲಿನ ಮಧುರೆಯ ಸುಲ್ತಾನನನ್ನು ಜಯಿಸಿ ಅಲ್ಲಿ ಶಾಂತಿಯನ್ನು ನೆಲೆಗೊಳಿಸಿದರ ಬಗ್ಗೆ ಇತಿಹಾಸ ಹೇಳುತ್ತದೆ. ಇವರಿಗೆ ಸಂಬಂಧಿಸಿದಂತೆ ಇವರ ಕಾಲದ 132 ಶಾಸನಗಳು ದೊರಕಿವೆ. ಆದರೆ ಇನ್ನೂ ಅನೇಕ ಮಾಹಿತಿಗಳು ಇಂದಿಗೂ ಅಸ್ಪಷ್ಟವಾಗಿ ಉಳಿದುಬಿಟ್ಟಿದೆ.
ವಿದ್ವಾನ್ ಎನ್. ರಂಗನಾಥಶರ್ಮಾ ಅವರು 1916 ಜನವರಿ 07ರಂದು ಶಿವಮೊಗ್ಗ ಜಿಲ್ಲೆಯ ಸೊರಬ ತಾಲ್ಲೂಕಿನ ನಡಹಳ್ಳಿ ಗ್ರಾಮದಲ್ಲಿ ಜನಿಸಿದರು. ತಂದೆ-ತಿಮ್ಮಪ್ಪ, ತಾಯಿ-ಜಾನಕಮ್ಮ. ಪ್ರಾಥಮಿಕ ವಿದ್ಯಾಭ್ಯಾಸ ನಡಹಳ್ಳಿಯಲ್ಲಿ, ಮಾಧ್ಯಮಿಕ ವಿದ್ಯಾಭ್ಯಾಸವು ಸೊರಬದಲ್ಲಿ ಮುಗಿಯಿತು. ಅಗಡಿಯ ಆನಂದವನ ಆಶ್ರಮದಲ್ಲಿ ಸಂಸ್ಕೃತ ಕಲಿತ ಅವರು ನಂತರ ಕೆಳದಿ ಸಂಸ್ಕೃತ ಪಾಠಶಾಲೆಗೆ ಸೇರಿದರು. ಇದರೊಂದಿಗೆ ಖಾಸಗಿಯಾಗಿ ಮದರಾಸಿನ ವಿಶ್ವವಿದ್ಯಾಲಯದ ಕನ್ನಡ ವಿದ್ವತ್ ಮತ್ತು ಮೈಸೂರಿನ ಕನ್ನಡ ಪಂಡಿತ ಪರೀಕ್ಷೆಗಳನ್ನೂ ಪಾಸ್ ಮಾಡಿದರು. ಡಿವಿಜಿ ಅವರ ಒಡನಾಡಿ ಆಗಿದ್ದ ಅವರು ಡಿವಿಜಿ ಮರಣಾ ನಂತರ ‘ಮರಳು ಮುನಿಯನ ಕಗ್ಗ’ದ ಕರಡು ತಿದ್ದಿದವರೇ ರಂಗನಾಥ ಶರ್ಮಾ. ಸಂಸ್ಕೃತ ಕೃತಿಗಳು: ಬಾಹುಬಲಿ ವಿಜಯಂ (ಐತಿಹಾಸಿಕ ನಾಟಕ), ಏಕಚಕ್ರಂ (ಪೌರಾಣಿಕ ನಾಟಕ, ಗುರುಪಾರಮಿತ್ರ ಚರಿತಂ, ಗೊಮ್ಮಟೇಶ್ವರ ಸುಪ್ರಭಾತಂ, ಗೊಮ್ಮಟೇಶ ...
READ MORE