ವಾಸವಿ ಜೀವನಚರಿತ್ರೆ ಪುಸ್ತಕವನ್ನು ಲೇಖಕ ಕಾಶಿ ವಿಶ್ವನಾಥ ಶೆಟ್ಟಿ ಅವರು ರಚಿಸಿದ್ದಾರೆ. ಈ ಕೃತಿಯಲ್ಲಿ ಈಶ್ವರನನ್ನೆ ಮದುವೆಯಾಗುತ್ತೇನೆ ಎಂದು ನಿರ್ಧರಿಸಿ ಹರೆಯದಲ್ಲಿ ತಪಸ್ಸಿಗೆ ಮುಡಿಪಾದ ರಾಜಕುಮಾರಿ. ತನ್ನನ್ನು ಮದುವೆಯಾಗಲು ಹಠ ಹಿಡಿದು ಪ್ರಬಲ ಸೈನ್ಯದೊಡನೆ ವಿಷ್ಣುವರ್ಧನನೆಂಬ ರಾಜನು ಬಿರುಗಾಳಿಯಂತೆ ಬಂದಾಗ ಅಗ್ನಿಗೆ ತನ್ನ ದೇಹವನ್ನು ಅರ್ಪಿಸಿದ ವೀರ ಕನ್ಯೆ. ಇಂದು ವಾಸವಿ ಎಂದು, ಕನ್ನಿಕಾಪರಮೇಶ್ವರಿ ಎಂದು ಅವಳಿಗೆ ಪೂಜೆ ಸಲ್ಲುತ್ತಿದೆ ಎಂದು ವಾಸವಿ ಅವರ ಕುರಿತು ಈ ಕೃತಿಯಲ್ಲಿ ವಿವರಿಸಲಾಗಿದೆ. ಹರೆಯದಲ್ಲೇ ತಪಸ್ಸಿಗೆ ತೆರಳಿದ ಇತಿಹಾಸ, ಬಾಲ್ಯ ಜೀವನ, ವೀರತ್ವ ಪ್ರದರ್ಶಿಸಿದ ಕ್ಷಣಗಳನ್ನು ಲೇಖಕರು ಈ ಪುಸ್ತಕದಲ್ಲಿ ನವಿರಾಗಿ ಚಿತ್ರಿಸಿದ್ದಾರೆ.
ಕಾಶಿ ವಿಶ್ವನಾಥ ಶೆಟ್ಟಿ ಅವರು ತುಮಕೂರಿನಲ್ಲಿ 1928 ಫೆಬ್ರುವರಿ 24ರಂದು ಜನಿಸಿದರು. ತಂದೆ ಕೃಷ್ಣ ಶೆಟ್ಟಿ, ತಾಯಿ ಸೀತಾಲಕ್ಷ್ಮಮ್ಮ. ಮೈಸೂರಿನಲ್ಲಿ ಸ್ನಾತಕೋತ್ತರ ಪದವಿ ಪಡೆದ ಇವರು ಚಿಕ್ಕಮಗಳೂರಿನ ಸರ್ಕಾರಿ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ. ಇವರು ಬರೆದ ಪ್ರಮುಖ ಕೃತಿಗಳೆಂದರೆ ಸೀತಕ್ಕನ ಸವತಿ, ಕಾಶಿಕಾವೇರಿ, ಮಾವುಮಲ್ಲಿಗೆ, ಸಮಾಗಮ, ಸ್ವಾಮಿ ಶಿವಾನಂದ, ಸರಸ್ವತಿ, ಸೋದರಿ ನಿವೇದಿತೆ, ಗೃಹದೇವತೆ, ಬ್ರಹ್ಮಗಂಟು, ಧರ್ಮನಂದನ, ಉತ್ತಿಷ್ಠ ಭಾರತ, ಬುದ್ಧ ಚರಿತ ಮಹಾಮಧು- ಬೃಹತ್ ಕಾವ್ಯ ಮುಂತಾದವು. ಕರ್ನಾಟಕ ಸಾಹಿತ್ಯ ಅಕಾಡಮಿಯ ಸದಸ್ಯರಾಗಿದ್ದ ಇವರು ಚಿಕ್ಕಮಗಳೂರಿನ ಜಿಲ್ಲಾ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿಯೂ ಕೆಲಸ ಮಾಡಿದ್ದಾರೆ. ...
READ MORE