ಲೇಖಕ ಸುಭಾಶ್ಚಂದ್ರ ಕಶೆಟ್ಟಿ ಬಾಚನಾಳ ಅವರು ರಚಿಸಿದ ಕೃತಿ-‘ಮಹಾಯೋಗಿ’ ಶ್ರೀ ದತ್ತ ದಿಗಂಬರ ಮಾಣಿಕ್ಯ ಮುತ್ಯಾ ಕಲ್ಮುಡ್ ಅವರ ಚರಿತ್ರೆ ಇದು. ಮಾಣಿಕ ಮುತ್ಯಾ ಜನನ ಮತ್ತು ಬಾಲ್ಯ, ವೈರಾಗ್ಯ ಉದಯ, ಹನುಮಾನ ಕ್ಷೇತ್ರಕ್ಕೆ ಮಾಣಿಕರಾಯರ ಪಯಣ, ಅಮೃತ ಕೊಂಡದಲ್ಲಿ ಅನುಷ್ಠಾನ,ಮೈಲಾರ ಗುಡ್ಡದಲ್ಲಿ ಸಾಧು ಮಾಣಿಕಪ್ರಭು ಗಳು, ಶ್ರೀಶೈಲ ಪರ್ವತದಲ್ಲಿ ಮಾಣಿಕಪ್ರಭುಗಳು, ಚಂಗಟಾ ಗ್ರಾಮಕ್ಕೆ ಆಗಮನ, ಸ್ವಂತ ಗ್ರಾಮಕ್ಕೆ ಪ್ರಭುಗಳ ಪ್ರಯಣ, ಪ್ರಭುಗಳ ಜೋಳಿಗೆ ಕದ್ದ ದುಷ್ಟ, ಶಿವಶರಣಪ್ಪ ಚಿರಂಜೀವಿ ಅವರಿಗೆ ಶ್ರೀಗಳ ಆಶೀರ್ವಾದ, ಮುಲ್ಲಮರಿ ನದಿತೀರಕ್ಕೆ ಮಾಣಿಕ್ ಪ್ರಭುಗಳು, ಮರಳಿ ವಟು ವೃಕ್ಷಕ್ಕೆ ಆಗಮನ, ಹಾವು ಕಡಿಸಿಕೊಂಡ ಮಾಣಿಕಪ್ಪಅಂಬಲಗಿ ಡಿಕಾಸನ್ ಕುಡಿದು ಸುಖನಿದ್ರೆ ಮಾಡಿದ, ಕಲ್ಮುಡ್ ಗುಡ್ಡದಲ್ಲಿ ಸಪ್ತಾಹ ಆಚರಣೆ, ಗುಂಡಪ್ಪ ಮುಕರಂಬಿ ಅವರಿಗೆ ಶ್ರೀಗಳ ಆದೇಶ, ನಾ ಕಂಡ ಪ್ರಭುಗಳು, ಮಾಣಿಕ ಪ್ರಭುಗಳ ಕೊನೆಯ ದಿನಗಳು,ಹೀಗೆ ಹತ್ತು ಹಲವು ವಿಷಯಗಳನ್ನುಒಳಗೊಂಡ ದತ್ತ ದಿಗಂಬರ ಮಾಣಿಕೇಶ್ವರರ ಸಂಪೂರ್ಣ ಚರಿತ್ರೆಯನ್ನು ಒಳಗೊಂಡಿದೆ.
ಲೇಖಕ ಸುಭಾಶ್ಚಂದ್ರ ಕಶೆಟ್ಟಿ ಬಾಚನಾಳ ಅವರು ಕಲಬುರಗಿ ಜಿಲ್ಲೆಯ ಕಮಲಾಪುರ ತಾಲೂಕಿನ ಬಾಚನಾಳ ಗ್ರಾಮದವರು. ಹುಟ್ಟೂರಿನಲ್ಲಿ ಪ್ರಾಥಮಿಕ ಶಿಕ್ಷಣ, ಕಮಲಾಪುರದಲ್ಲಿ ಪಿಯುಸಿ, ಕಲಬುರಗಿಯಲ್ಲಿ ಪದವಿ ಶಿಕ್ಷಣ ಪೂರೈಸಿದರು. ಸರ್ಕಾರದ ವಿವಿಧ ಇಲಾಖೆಯಲ್ಲಿ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿ, ನಂತರ ಕಂದಾಯ ಇಲಾಖೆಯಲ್ಲಿ ಶಿರಸ್ತೇದಾರರಾಗಿ (2006) ನಿವೃತ್ತರಾದರು. ಕಮಲಾಪುರ ಸುತ್ತಮುತ್ತಲಿನ ಸಾಧು-ಸಂತರ ಬಗ್ಗೆ, ಜಾನಪದ,ವಚನ ಸಾಹಿತ್ಯ,ನಾಟಕ, ಕವನ, ಜೀವನ ಚರಿತ್ರೆ,ಕುರಿತು 30ಕ್ಕಿಂತ ಹೆಚ್ಚು ಕೃತಿಯನ್ನು ರಚಿಸಿದ್ದಾರೆ. ಕೃತಿಗಳು: ಬದುಕಿನ ಪ್ರಜ್ಞೆ, ಕಾನನದ ಹೂಗಳು, ಸುಗಂಧ ಪುಷ್ಪಗಳು, ಸುಮಂಗಲ ಗೀತೆಗಳು (ಸಂ) ಜೇನುಹನಿ (ಕವನ ಸಂಕಲನ), ನಿತ್ಯಸತ್ಯ (ಚಿಂತನಗಳು), ಜನಮೆಚ್ಚಿದ ನಾಯಕ ಶ್ರೀ ಶಂಕರಶೆಟ್ಟಿ ಪಾಟೀಲರು ...
READ MORE