‘ಮೂರುಜಾವಿ ದೇವರ ಚರಿತ್ರೆ’ ಜಿ. ಜ್ಞಾನಾನಂದ ಮತ್ತು ವಿ.ಜಿ. ದೀಕ್ಷಿತ್ ಅವರು ಸಂಪಾದಿಸಿ ಪ್ರಕಟಿಸಿರುವ ಐತಿಹಾಸಿಕ ಕೃತಿ. ಕರ್ನಾಟಕದಲ್ಲಿ ವೀರಶೈವ ಧರ್ಮವು ವ್ಯಾಪಕವಾಗಿ ಹರಡಲು ಕಾರಣಕರ್ತರಾದ ಮಹನೀಯರಲ್ಲಿ ಮೂರುಜಾವಿ ದೇವರೆಂದು ಖ್ಯಾತರಾದ ಚಿಕ್ಕೇಶ್ವರರು ಮುಖ್ಯರು. ವಿಶ್ವಬ್ರಾಹ್ಮಣ ಗುರುಪೀಠಸ್ಥರಾಗಿದ್ದ ಇವರು ಶಿವಾವತಾರಿಗಳೆಂದೇ ಜನಪ್ರಿಯರಾಗಿದ್ದರು.
ಚಿಕ್ಕೇಶ್ವರರ ಕಾಲ, ಪರಿಸರ, ಧ್ಯೇಯ ಧೋರಣೆಗಳ ಬಗ್ಗೆ ಚಿಂತನೆಗಳಿವೆ. ಅವರ ಬಗೆಗಿನ ಶಾಸನ, ಕಾವ್ಯಗಳಲ್ಲಿ ದೊರೆಯುವ ಮಾಹಿತಿಗಳ ಹಿನ್ನೆಲೆಯಲ್ಲಿ ಲೇಖಕರು ಚಿಕ್ಕೇಶ್ವರರನ್ನು ಮೂರುಜಾವಿ ದೇವರ ಚರಿತ್ರೆಯಲ್ಲಿ ಒಡಮೂಡಿಸುವ ಪ್ರಯತ್ನ ಮಾಡಿದ್ದಾರೆ.
ಲೇಖಕ ಜ್ಞಾನಾನಂದರು ಮೂಲತಃ ಚಿಕ್ಕಬಳ್ಳಾಪುರದ ನಂದಿ ಗ್ರಾಮದವರು. ತಂದೆ- ಎಂ.ಆರ್. ಜಿ. ಶಂಕರ್, ತಾಯಿ ಈಶ್ವರಮ್ಮ. ಪ್ರಾಥಮಿಕ ಶಿಕ್ಷಣವನ್ನು ಚಿಕ್ಕಬಳ್ಳಾಪುರದಲ್ಲಿ ಪಡೆದ ಜ್ಞಾನಾನಂದರು ಆನಂತರ ಮೈಸೂರಿನ ಮಹಾರಾಜ ಕಾಲೇಜಿನಿಂದ ಬಿ.ಎಸ್ಸಿ ಪದವಿ ಪಡೆದು, ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಿಂದ ಎಂ.ಎ. ಪದವಿ ಮತ್ತು ಹಂಪಿಯ ಕನ್ನಡ ವಿಶ್ವವಿದ್ಯಾಲಯಕ್ಕೆ ‘ಕನ್ನಡ ಮಹಾಭಾರತಗಳಲ್ಲಿ ಶಿಲ್ಪ ಮತ್ತು ಶಿಲ್ಪಿ’ ಎಂಬ ಮಹಾಪ್ರಬಂಧ ಮಂಡಿಸಿ, ಪಿ.ಎಚ್.ಡಿ. ಪಡೆದರು. ಚೆನ್ನೈನ ದಕ್ಷಿಣ ಭಾರತ ಹಿಂದಿಸಭಾದಿಂದ ರಾಷ್ಟ್ರಭಾಷಾ ಪ್ರವೀಣ್, ಇಂಡಿಯನ್ ಸ್ಟ್ಯಾಟಿಸ್ಟಿಕಲ್ ಇನ್‌ಸ್ಟಿಟ್ಯೂಟ್‌ನಿಂದ ಸ್ನಾತಕೋತ್ತರ ಸರ್ಟಿಫಿಕೇಟ್ (ಸ್ಟ್ಯಾಟಿಸ್ಟಿಕಲ್ ಅಪ್ಲೈಡ್ ಟು ಇಂಡಸ್ಟ್ರಿ), ಸೂಪರ್‌ವೈಸರಿ ಡೆವಲಪ್‌ಮೆಂಟ್ ಡಿಪ್ಲೊಮ ಮತ್ತು ಡಿಪ್ಲೊಮ ...
READ MORE