ಭವ್ಯಭಾರತದ ಕನಸುಗಾರ : ಅಬ್ದುಲ್ ಕಲಾಂ

Author : ಟಿ. ಆರ್. ಅನಂತರಾಮು

Pages 163

₹ 150.00




Year of Publication: 2017
Published by: ಸಪ್ನ ಬುಕ್ ಹೌಸ್
Address: ತುಂಗಾ ಕಾಂಪ್ಲೆಕ್ಸ್, ಗಾಂಧಿನಗರ, ಬೆಂಗಳೂರು-560 009
Phone: 0804011 4455

Synopsys

ಅಬ್ದುಲ್ ಕಲಾಂ ಎಂದೊಡನೆ ಭಾರತೀಯರ ಕಿವಿ ಅರಳುತ್ತದೆ. ರಾಕೆಟ್ ತಂತ್ರಜ್ಞಾನದಲ್ಲಿ ಪರಿಣತರಾಗಿ ದೇಶವನ್ನು ಮುನ್ನಡೆಸಿದ್ದು ಒಂದಾದರೆ, ರಾಷ್ಟ್ರಪತಿ ಹುದ್ದೆಯನ್ನು ಅಲಂಕರಿಸಿದ ಮೊದಲ ತಂತ್ರಜ್ಞ ಎಂಬ ಬಿರುದೂ ಅವರಿಗೆ ಸಲ್ಲುತ್ತದೆ. ಕಡು ಬಡ ಕುಟುಂಬದಲ್ಲಿ ಹುಟ್ಟಿದ ಕಲಾಂ ಅವರು ಮೆಲ್ಲ ಮೆಲ್ಲನೆ ಪ್ರಗತಿಯ ಮೆಟ್ಟಿಲನ್ನೇರಿದರು. ರಾಕೆಟ್ ತಂತ್ರಜ್ಞಾನದಲ್ಲಿ ಆರಂಭದಿಂದಲೂ ತೊಡಗಿಕೊಂಡು ನಮ್ಮ ದೇಶವನ್ನು ತಂತ್ರಜ್ಞಾನದಲ್ಲಿ ಸಶಕ್ತ ಮಾಡಿದರು. ಅವರಿಗೆ ಭಾರತ ಅಭಿವೃದ್ಧಿಯಾದ ರಾಷ್ಟ್ರ ಎಂದು ಕರೆಯುವುದರಲ್ಲೇ ಪ್ರೀತಿ. ಅದಕ್ಕಾಗಿಯೇ ವಿಷನ್-2020 ಎಂಬ ಒಂದು ಯೋಜನೆಯನ್ನೇ ಮುಂದಿಟ್ಟು ಸತತ ಅದಕ್ಕಾಗಿ ದುಡಿದರು.

ಮಕ್ಕಳೆಂದರೆ ಅವರಿಗೆ ಅತ್ಯಂತ ಪ್ರೀತಿ. ಶಾಲಾಮಕ್ಕಳು ಅವರನ್ನು `ಮೇಸ್ಟ್ರು’ ಎಂದೇ ಸಂಬೋಧಿಸುತ್ತಿದ್ದರು. ಅವರು ಶಾಂತ ಸ್ವಭಾವದವರಾದರೂ ಪರಕೀಯ ದಾಳಿಯನ್ನು ನಾವು ಎದುರಿಸಲು ಸದಾ ಸಿದ್ಧರಾಗಿರಬೇಕು ಎಂದೇ ನಂಬಿದ್ದರು. ಪೈಲಟ್ ಆಗುವ ಕನಸುಕಂಡ ಬಾಲಕ, ರಾಷ್ಟ್ರದ ಗಗನಮುಖಿ ಆಕಾಂಕ್ಷೆ, ಸಾಧನೆಗಳ ಪೈಲಟ್ ಆಗಿ ರಾಷ್ಟ್ರಪತಿಯಾಗಿ ಈ ನಾಡಿನ ಸುದೀರ್ಘ ಪರಂಪರೆ ಮತ್ತು ಆಧುನಿಕ ಯುಗದ ಸಾಹಸಗಳ ಸಂಕೇತವಾಗಿ ಬೆರಗುಗೊಳಿಸುವ ಕಥೆಯನ್ನು ಈ ಕೃತಿಯಲ್ಲಿ ಅದ್ಭುತವಾಗಿ ನಿರೂಪಿಸಲಾಗಿದೆ. ಜೊತೆಗೆ ಕಲಾಂ ಅವರ ದೀರ್ಘಕಾಲದ ಬದುಕಿನ ಪಯಣವನ್ನೂ ಬಿಂಬಿಸುವ ಅನೇಕ ಚಿತ್ರಗಳು ಈ ಕೃತಿಯಲ್ಲಿವೆ.

About the Author

ಟಿ. ಆರ್. ಅನಂತರಾಮು
(03 August 1949)

ಭೂ ವಿಜ್ಞಾನಿ, ಸಂಶೋಧಕ, ಅಂಕಣಕಾರ, ವಿಜ್ಞಾನ ಲೇಖಕ ಟಿ.ಆರ್. ಅನಂತರಾಮು ಅವರು ಜನಿಸಿದ್ದು 1949 ಆಗಸ್ಟ್ 3ರಂದು ತುಮಕೂರು ಜಿಲ್ಲೆ ಶಿರಾ ತಾಲ್ಲೂಕಿನ ತಾಳಗುಂದದಲ್ಲಿ.ತಾಳಗುಂದ ರಾಮಣ್ಣ ಅನಂತರಾಮು ಅವರ ಪೂರ್ಣ ಹೆಸರು. ಸಿರಾದ ಸರ್ಕಾರಿ ಮಾಧ್ಯಮಿಕ ಶಾಲೆಯಲ್ಲಿ ಮಾಧ್ಯಮಿಕ ಶಿಕ್ಷಣ ಪೂರ್ಣಗೊಳಿಸಿದ ಅವರು ಸಿರಾದ ಮುನಿಸಿಪಲ್ ಹೈಸ್ಕೂಲಿನಲ್ಲಿ ಪ್ರೌಢಶಿಕ್ಷಣ ಪೂರ್ಣಗೊಳಿಸಿದ್ದಾರೆ. ಆನಂತರ ತುಮಕೂರಿನ ಸರ್ಕಾರಿ ಕಾಲೇಜಿನಲ್ಲಿ ಪದವಿ, ಮೈಸೂರು ವಿಶ್ವವಿದ್ಯಾಲಯದಲ್ಲಿ ಎಂ.ಎನ್ಸಿ(ಜಿಯಾಲಜಿ) ಪದವಿ ಪಡೆದಿದ್ದಾರೆ.  ಭೂ ವಿಜ್ಞಾನ ವಿಷಯದಲ್ಲಿ ಪದವಿ ಪಡೆದ ನಂತನ ಬೆಂಗಳೂರಿನ ಸರ್ಕಾರಿ ವಿಜ್ಞಾನ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ, ರಾಜ್ಯದ ನಾನಾ ಕಾಲೇಜುಗಳಲ್ಲಿ ಅಧ್ಯಾಪಕರಾಗಿ ಕೆಲಸ ಮಾಡಿದ್ದಾರೆ.  ...

READ MORE

Related Books