ಡಿ.ಕೆ.ರವಿ ದುರಂತ ಕಥೆ ನಗ್ನಸತ್ಯ

Author : ಅ.ನಾ. ಪ್ರಹ್ಲಾದರಾವ್

Pages 80

₹ 100.00




Year of Publication: 2021
Published by: ಅನು ಪ್ರಕಾಶನ
Address: # 1008 8ನೆ ಬಿ ಮುಖ್ಯ ರಸ್ತೆ, 3ನೆ ಸ್ಟೇಜ್ , 3ನೆ ಫೇಸ್, ಬಸವೇಶ್ವರನಗರ, ಬೆಂಗಳೂರು-560079
Phone: 08023233311

Synopsys

ಲೇಖಕ ರಾಮಕೃಷ್ಣ ಉಪಾಧ್ಯೆ ಅವರ ಇಂಗ್ಲಿಷ್ ಕೃತಿಯನ್ನು ಲೇಖಕ ಅ.ನಾ. ಪ್ರಹ್ಲಾದರಾವ್ ಅವರು ‘ಡಿ.ಕೆ. ರವಿ ದುರಂತ ಕಥೆ ನಗ್ನಸತ್ಯ’ ಶೀರ್ಷಿಕೆಯಡಿ ಕನ್ನಡಕ್ಕೆ ಅನುವಾದಿಸಿದ್ದಾರೆ. 

ಡಿ.ಕೆ.ರವಿ ಎಂದೇ ಖ್ಯಾತರಾಗಿದ್ದ ದೊಡ್ಡಕೊಪ್ಪಲು ಕರಿಯಪ್ಪ ರವಿ ಅವರು ಐಎಎಸ್ ಅಧಿಕಾರಿ. 2015 ರ ಮಾರ್ಚ್ 16 ರಂದು ಸಂಭವಿಸಿದ ಇವರ ಸಾವು, ಸಾಕಷ್ಟು ಊಹಾಪೋಹಗಳಿಗೆ ಕಾರಣವಾಗಿತ್ತು. ಐಎಎಸ್ ಅಧಿಕಾರಿಯಾಗಿ, ಜನಾನುರಾಗಿಯಾಗಿ, ದಿಟ್ಟ ಆಡಳಿತಗಾರರಾಗಿದ್ದ ಅವರು ಆತ್ಮಹತ್ಯೆಯಂತಹ ಹೀನ ಕೆಲಸಕ್ಕೆ ಮುಂದಾಗುವರೆ? ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಭುಗಿಲೆದ್ದು, ಈ ಪ್ರಕರಣದ ತನಿಖೆಯು ಸಹ ಸವಾಲಾಗಿತ್ತು. ಆಡಳಿತದಲ್ಲಿ ಸರ್ಕಾರವನ್ನು ಮುಜುಗರಕ್ಕೀಡು ಮಾಡಿತ್ತು. ಸಿಐಡಿ ತನಿಖೆ ನಂತರ ಜನರ ಒತ್ತಾಯದ ಮೇರೆಗೆ ಸಿಬಿಐ ತನಿಖೆಗೂ ಈ ಪ್ರಕರಣವನ್ನು ನೀಡಲಾಗಿತ್ತು. ಇಡೀ ಈ ಪ್ರಕರಣ ಸುತ್ತ ನಡೆದ ಘಟನೆಗಳ ಸತ್ಯಾಸತ್ಯತೆಯ ವಿವರಗಳನ್ನು ಈ ಕೃತಿಯಲ್ಲಿ ಮೂಲ ಲೇಖಕರು  ಸಂಗ್ರಹಿಸಿದ್ದಾರೆ. 

About the Author

ಅ.ನಾ. ಪ್ರಹ್ಲಾದರಾವ್
(24 July 1953)

ಅ.ನಾ.ಪ್ರಹ್ಲಾದರಾವ್‌ರವರು, ಕನ್ನಡದ ಪದಬಂಧ ಲೇಖಕರಲ್ಲಿ ಪ್ರಮುಖರು. ಇವರು ಕನ್ನಡದಲ್ಲಿ ಸುಮಾರು ನಲವತ್ತು ಸಾವಿರ ಪದಬಂಧಗಳನ್ನು ರಚಿಸಿದ್ದಾರೆ. ಇವರ ಪದಬಂಧಗಳು ಕನ್ನಡದ ಪ್ರಮುಖ ಪ್ರತ್ರಿಕೆಗಳಲ್ಲಿ, ನಿಯತಕಾಲಿಕೆಗಳಲ್ಲಿ ಪ್ರಕಟಗೊಂಡಿವೆ.ಭಾರತದ ಪ್ರಾದೇಶಿಕ ಭಾಷೆಗಳಲ್ಲಿಯೇ ಅತೀ ಹೆಚ್ಚು ಪದಬಂಧ ರಚಿಸುವ ಮೂಲಕ 2015, 2016 ಹಾಗೂ 2017ರ ಲಿಮ್ಕಾ ದಾಖಲೆ ಪುಸ್ತಕದಲ್ಲಿ ಸೇರಿಕೊಳ್ಳುವ ಮೂಲಕ ರಾಷ್ಟ್ರೀಯ ದಾಖಲೆ ಮಾಡಿದ ಕೀರ್ತಿ ಇವರದು. ಬೆಂಗಳೂರು, ಮಂಡ್ಯ ಹಾಗೂ ಕೋಲಾರದಲ್ಲಿ ಹಲವಾರು ಸಂಘ ಸಂಸ್ಥೆಗಳು ಸನ್ಮಾನಿಸಿ ,ಪ್ರಜಾರತ್ನ, ಪದಬಂಧಬ್ರಹ್ಮ, ಪದಬಂಧಸಾಮ್ರಾಟ್, ಮುಂತಾದ ಬಿರುದುಗಳನ್ನು ನೀಡಿವೆ.  ...

READ MORE

Reviews

ಮುನ್ನುಡಿ

ಜೀವಗಳಂತೆಯೇ ಸಾವುಗಳು ಸಹ ಜನಸಮುದಾಯದಲ್ಲಿ ಮಾತುಕತೆಗಳನ್ನು ಹುಟ್ಟುಹಾಕುವಂತಹ ಪ್ರಾಬಲ್ಯತೆಯನ್ನು ಹೊಂದಿವೆಯಲ್ಲದೆ, ರಾಜಕೀಯ ಉಪನ್ಯಾಸಗಳಿಗೆ ಕಾರಣವಾಗಿವೆ. ಸಾಮಾನ್ಯವಾಗಿ ಸಾವುಗಳು ವೈಯಕ್ತಿಕ ವ್ಯವಹಾರಗಳಾಗಿವೆ, ಅದು ಬದುಕಿನಿಂದ ದೂರ ಹೋದ ವ್ಯಕ್ತಿ, ಅವನ ಕುಟುಂಬದ ಸದಸ್ಯರು ಮತ್ತು ಸ್ನೇಹಿತರು ಹಾಗೂ ಪರಿಚಯಸ್ಥರಾದ ಸಮೀಪ ವಲಯದಲ್ಲಿನ ಕೆಲವರಿಗೆ ಮಾತ್ರ ಸಂಬಂಧಿಸಿದೆ. ಆದರೆ ಕೆಲವು ಸಾವುಗಳು ಅವುಗಳನ್ನು ಮೀರಿ ಅಲ್ಪ ಸಮಯದವರೆಗೆ ಅಥವಾ ದೀರ್ಘಕಾಲದವರೆಗೆ ವಿಶಾಲ ಸಮಾಜದಲ್ಲಿ ಚಿಂತನೆ, ಚರ್ಚೆ, ಸಂಭಾಷಣೆಗಳಿಗೆ ಕಾರಣವಾಗುವಷ್ಟು ಪ್ರಭಾವ ಬೀರುತ್ತವೆ. ಅವುಗಳಲ್ಲಿ ಕೆಲವು ಘಟನೆಗಳು. ಕ್ರಮೇಣ ಜನಮಾನಸದಿಂದ ಮರೆಯಾಗುತ್ತವೆ ಆದರೆ ಇತರ ಹಲವು ಸಮಾಜದ ಗಮನವನ್ನು ಸೆಳೆಯುತ್ತವೆ. 2015ರ ಮಾರ್ಚ್ 16ರಂದು ಆತ್ಮಹತ್ಯೆಯಿಂದ ಮೃತಪಟ್ಟ ಕರ್ನಾಟಕ ಕೇಡರ್‌ನ ಯುವ ಐಎಎಸ್ ಅಧಿಕಾರಿ ಡಿ ಕೆ ರವಿ ಅವರ ನಿಧನ ಸಮಾಜದ ಗಮನ ಸೆಳೆಯಿತಲ್ಲದೆ ಕೆಲವು ಪ್ರಶ್ನೆಗಳನ್ನು ಹುಟ್ಟುಹಾಕಿತು.

ರಾಮಕೃಷ್ಣ ಉಪಾಧ್ಯರು ಆ ಪ್ರಶ್ನೆಗಳಿಗೆ ಉತ್ತರಿಸುತ್ತಾರೆ ಮತ್ತು ಮುಖ್ಯವಾಗಿ, ಆ ಪ್ರಶ್ನೆಗಳು ಏಕೆ ಉದ್ಭವಿಸಿದವು ಎಂಬುದನ್ನು ಬಿಂಬಿಸುತ್ತಾರೆ. ಸಾವು ಸಂಭವಿಸಿದ ಸನ್ನಿವೇಶ ಮತ್ತು ಸಾಮಾಜಿಕ ಮತ್ತು ರಾಜಕೀಯ ಜಗತ್ತಿನಲ್ಲಿ ಘಟನೆ ನಡೆಯುವ ಪರಿಸರದಿಂದ ಪ್ರಶ್ನೆಗಳು ಉದ್ಭವಿಸುತ್ತವೆ ರವಿ ಒಬ್ಬ ಭರವಸೆಯ ಅಧಿಕಾರಿಯಾಗಿದ್ದು, ಅವರು ಉನ್ನತ ಹುದ್ದೆಯನ್ನು ಗಳಿಸಿದ್ದರು ಮತ್ತು ಅಧಿಕಾರಶಾಹಿ ಮತ್ತು ವ್ಯಾಪಾರದ ಪ್ರಪಂಚಗಳಲ್ಲಿ ಸುತ್ತಾಡಿದ್ದರು ಮತ್ತು ರಾಜಕೀಯ ಸಂಪರ್ಕಗಳನ್ನು ಹೊಂದಿದ್ದರು. ಅವರ ಸಾವು ಅಚ್ಚರಿಯನ್ನು ಸೃಷ್ಟಿಸಿತು ಮತ್ತು ಆಘಾತಯುತ ತರಂಗಗಳನ್ನು ಬಡಿದೆಬ್ಬಿಸಿತು. ಸಿದ್ದರಾಮಯ್ಯ ಸರ್ಕಾರವನ್ನು ಮೂಲೆಗುಂಪು ಮಾಡಲು ಕರ್ನಾಟಕದ ವಿರೋಧ ಪಕ್ಷಗಳು ತಕ್ಷಣವೇ ಶಸ್ತ್ರಾಸ್ತ್ರಗಳನ್ನು ಎತ್ತಿಕೊಂಡವು. ಅಲ್ಪಸಂಖ್ಯಾತ ಸಮುದಾಯದ ನಾಯಕ ಕೆ ಜೆ ಜಾರ್ಜ್ ಗೃಹ ಸಚಿವರಾಗಿದ್ದುದು ಅವರ ಆಯುಧಗಳ ಅಲಗು ಮತ್ತಷ್ಟು ಹರಿತವಾಗಲು ಕಾರಣವಾಯಿತು. ಯಾವುದೇ ಗುರಿಯಿಲ್ಲದಿದ್ದರೂ ನಿರಂತರವಾಗಿ ಜಾರ್ಜ್ ಅವರನ್ನು ಗುರಿಯಾಗಿಸಲಾಯಿತು. ಈ ಕಥೆಯು ಜನರ ಗಮನವನ್ನು ಸೆಳೆಯಿತು ಏಕೆಂದರೆ ಇದು ಜನರ ಅಭಿರುಚಿಯನ್ನು ಆಕರ್ಷಿಸುವಂತಹ ಅನೇಕ ಅಂಶಗಳನ್ನು ಒಳಗೊಂಡಿತ್ತು. ಅಧಿಕಾರ, ಹಣ, ಪ್ರೀತಿ ಪ್ರೇಮಗಳ ಆಸಕ್ತಿ ಮತ್ತು ಸ್ವಯಂನಿರ್ಮಿತ ಯುವಕನ ದುರಂತದ ಸುತ್ತ ಈ ಪ್ರಕರಣ  ಸುತ್ತತೊಡಗಿತ್ತು.

ಮುನ್ನುಡಿಯಲ್ಲಿ ಕಥೆಯನ್ನು ಹೇಳಲಾಗುವುದಿಲ್ಲ. ಸಾವು ಮತ್ತು ಅದರ ಪರಿಣಾಮಗಳನ್ನು, ಕಥೆಯಲ್ಲಿ ಬರುವ ಪಾತ್ರಗಳ ಭಾವನೆಗಳ ಒಳನೋಟಗಳು ಮತ್ತು ಅದನ್ನು ರೂಪಿಸುವ ಘಟನೆಗಳ ಬಗ್ಗೆ ಮಾಧ್ಯಮ ವ್ಯಕ್ತಿಯಾಗಿ ಮತ್ತು ಬರಹಗಾರರಾಗಿ ಉಪಾಧ್ಯ ಅತ್ಯಂತ ಪರಿಣಾಮಕಾರಿಯಾಗಿ ನಿಭಾಯಿಸಿದ್ದಾರೆ. ಇದು ಸಾವಿನ ಚರಿತ್ರೆಯಾಗಿದ್ದು ಅದನ್ನು ಚಾಣಾಕ್ಷತನದಿಂದ ಮತ್ತು ಕುತೂಹಲಭರಿತವಾಗಿ ಹೇಳಲಾಗಿದೆ ಮತ್ತು ಪ್ರಸ್ತುತಿಯಲ್ಲಿ ಕೆಲವು ನಾಟಕೀಯ ತಿರುವುಗಳಿವೆ. ಇದನ್ನು ಪತ್ತೇದಾರಿ ಕಥೆಯಾಗಿ ಓದಬಹುದು, ನಾವು ಪುಸ್ತಕವನ್ನು ಓದಲು ಆರಂಭಿಸುವ ಮುನ್ನವೇ ಅದರ ಕೊನೆಯ ಪುಟಗಳು ತಿಳಿದಿರುತ್ತದೆ ಮತ್ತು ಆಸಕ್ತಿಯನ್ನು ಉಳಿಸಿಕೊಳ್ಳುತ್ತದೆ. ಅಧಿಕಾರಿಯ ಸಾವಿನ ಬಗ್ಗೆ ನಮ್ಮ ಜ್ಞಾನದ ಅಂತರವನ್ನು ಹೆಚ್ಚಿಸುತ್ತಾ ಹೋಗುವ ಉಪಾಧ್ಯ, ರವಿ ಅವರ ಜೀವನ, ಅವರ ವೃತ್ತಿಜೀವನ, ಅವರ ವ್ಯಾಪಾರೋದ್ಯಮ ಮತ್ತು ಪ್ರೇಮ ಸಂಬಂಧಗಳ ಬಗ್ಗೆ ಹೇರಳವಾದ ಮಾಹಿತಿಯನ್ನು ತುಂಬುತ್ತಾರೆ. ಸಾವನ್ನು ರಾಜಕೀಯ ಸಮಸ್ಯೆಯನ್ನಾಗಿಸಿದವರ ಪ್ರೇರಣೆಗಳತ್ತಲೂ ಲೇಖಕರ ಹೋಗುತ್ತಾರೆ. ಕೇಂದ್ರೀಯ ತನಿಖಾ ಸಂಸ್ಥೆಯ (ಸಿಬಿಐ)  ತನಿಖೆಯು ಸರಳ, ಮುಕ್ತ ಮತ್ತು ಮುಚ್ಚಿದ ಪ್ರಕರಣವಾಗಿದ್ದು, ಕರ್ನಾಟಕ ಪೊಲೀಸರಿಂದ ಪ್ರಕರಣವನ್ನು ವಹಿಸಿಕೊಂಡ ನಂತರ ವರದಿ ಸಲ್ಲಿಸುವಲ್ಲಿ ಏಕೆ ವಿಳಂಬ ಮಾಡಿತು ಎಂಬುದನ್ನು ವಿವರಿಸುತ್ತಾರೆ. ಇದು ಸತ್ಯಗಳನ್ನು ಆಧರಿಸಿದೆ ಮತ್ತು ಸೂಕ್ಷ್ಮ ಸಂಶೋಧನೆಯಿಂದ ಕೂಡಿದೆ.

ಕೃತಿಯು ಸಿಬಿಐ ವರದಿಯ ಸಾರಗಳನ್ನು ಹೊಂದಿದೆ, ಕಥೆಯಲ್ಲಿ ಬರುವ ಪಾತ್ರಗಳ ನಡುವೆ ವಿನಿಮಯವಾದ ಸಂದೇಶಗಳ ವಿವರಗಳು ಮತ್ತು ಇತರ ಸಂಬಂಧಿತ ಮಾಹಿತಿಗಳು, ಇವೆಲ್ಲವೂ ಘಟನೆಯ ಸುತ್ತಿನ ಒಂದು ನೋಟವನ್ನು ನೀಡುತ್ತದೆ. ರವಿಯ ಸಾವಿನ ಮೇಲಿನ ಆಸಕ್ತಿ ಮತ್ತು ಸಾವನ್ನು ಸುತ್ತುವರೆದಿರುವ ಘಟನೆಗಳು ಕ್ಷೀಣಿಸಿದ ನಂತರ ಸಾವಿಗೆ ತನ್ನದೇ ಆದ ಕಾರಣಗಳಿದ್ದವು ಮತ್ತು ಅದರಲ್ಲಿ ರಾಜಕೀಯ ಲಾಭದ ಉದ್ದೇಶವೇನೂ ಇರಲಿಲ್ಲ ಎಂಬುದು ವ್ಯಕ್ತವಾಗುತ್ತದೆ.  ರಾಜಕೀಯವು ಕ್ಷಣಿಕ ಕಾಳಜಿ ಮತ್ತು ಆಸಕ್ತಿಗಳನ್ನು ಹೊಂದಿರುತ್ತದೆ ಮತ್ತು ಅದರಿಂದ ಏನೂ ಲಾಭವಿಲ್ಲ ಎಂದು ತಿಳಿದ ಕೂಡಲೇ ಆ ಸಮಸ್ಯೆಯನ್ನು ಬಿಟ್ಟು, ಮುಂದಿನ ವಿವಾದಾತ್ಮಕ ವಿಷಯದತ್ತ ಹೋಗುತ್ತದೆ. ಆದಾಗ್ಯೂ, ಜವಾಬ್ದಾರಿಯುತ ವ್ಯಕ್ತಿಗಳು ನೇತಾಡುವ ಎಳೆಗಳನ್ನು ಹಿಡಿದುಕೊಂಡು ಸತ್ಯವನ್ನು ಎಂದೆಂದಿಗೂ ಮುಚ್ಚಿಡದಂತೆ ಅನಾವರಣಗೊಳಿಸುತ್ತಾರೆ. ಈ ನಿಟ್ಟಿನಲ್ಲಿ ಉಪಾಧ್ಯ ಅದನ್ನು ಚೆನ್ನಾಗಿ ಮಾಡಿದ್ದಾರೆ.

ಪತ್ರಿಕೋದ್ಯಮವು ಇತಿಹಾಸದ ಮೊದಲ ಕರಡು ಎಂದು ಭಾವಿಸಲಾಗಿದೆ. ರವಿ ಅವರ ಕಥೆಯು ಇತಿಹಾಸವನ್ನು ರಚಿಸುವುದಿಲ್ಲ, ಮತ್ತು ಇದು ಕೆಲವು ವಾರಗಳು ಮತ್ತು ತಿಂಗಳುಗಳವರೆಗೆ ಒಂದೆರಡು ಜಿಲ್ಲೆಗಳು ಮತ್ತು ರಾಜ್ಯದಲ್ಲಿ ಅವ್ಯಕ್ತಗೊಂಡ ನಿರೂಪಣೆಯಲ್ಲಿ ಒಂದು ಸಣ್ಣ ಅಡಿ ಟಿಪ್ಪಣಿ ಮಾತ್ರ. ಆದರೆ ಇದು ಮಾನವೀಯ ಮೌಲ್ಯಗಳನ್ನು ಹೊಂದಿದ ಕಥೆಯಾಗಿದ್ದು ಅದನ್ನು ಬಿಚ್ಚಿಡಬೇಕು ಮತ್ತು ಸ್ವಲ್ಪ ವಿವರವಾಗಿ ಹೇಳಬೇಕು. ಉಪಾಧ್ಯ ಅವರ ಬರಹವು ಡಿ ಕೆ ರವಿ ಅವರ ಬಾಲ್ಯ ಅಥವಾ ಸಂಬಂಧಿಸಿದ ಗೆಳೆತನದ ಸಂಗತಿಗಳನ್ನು ಹೇಳುವುದಿಲ್ಲ, ಬದಲಿಗೆ ಕಥೆಯಲ್ಲಿ ಕಾಣಿಸಿಕೊಂಡಿರುವುದು ರವಿಯ ಪೂರ್ವಾಗ್ರಹಗಳನ್ನು ಹೊರತುಪಡಿಸಿ ನಮಗೆ ಅವರ ಜೀವನದ ಬಗ್ಗೆ ಎಲ್ಲವನ್ನೂ ನೀಡುವುದಿಲ್ಲ. ಆದರೆ ಸಾರ್ವಜನಿಕ ಹಿತಾಸಕ್ತಿಗೆ ಮುಖ್ಯವಾದ ಮತ್ತು ಕಥೆಯ ತಿಳುವಳಿಕೆಗೆ ಅಗತ್ಯವಾದ ಎಲ್ಲಾ ಸಂಗತಿಗಳು ಮತ್ತು ಘಟನೆಗಳನ್ನು ಅವರು ಪ್ರಸ್ತುತಪಡಿಸುತ್ತಾರೆ ಮತ್ತು ಅನೇಕ ಕನಸುಗಳನ್ನು ಹೊಂದಿದ್ದ, ತಮ್ಮದೇ ಆದ ತಪ್ಪಿಸಿಕೊಳ್ಳಲಾಗದಂತಹ ಒಂದು ದುಃಸ್ವಪ್ನದಲ್ಲಿ ಸಿಲುಕಿಕೊಂಡ ಯುವ ಅಧಿಕಾರಿಯ ಚಿತ್ರಣವನ್ನು ಚಿತ್ರಿಸುತ್ತಾರೆ.

ಇತಿಹಾಸವನ್ನು ಬದಲಿಸಿದ ಹುಟ್ಟುಗಳು, ನಡೆದ ಅಥವಾ ನಡೆಯದದ ವಿವಾಹಗಳು, ಸಾವುಗಳು ಮತ್ತು ಸಾವುಗಳನ್ನು ಅನುಸರಿಸಿದ ಹಗರಣಗಳನ್ನು ಕುರಿತು ಪತ್ರಕರ್ತರು ಪುಸ್ತಕಗಳನ್ನು ಮಾಡಿದ್ದಾರೆ. ರವಿಯ ಕಥೆಯು ದೊಡ್ಡ ಕ್ಯಾನ್ವಾಸ್‌ಗಾಗಿ ಅಲ್ಲ, ಆದರೆ ಸಾಕ್ಷಿಯನ್ನು ನೀಡುವ ಅತ್ಯುತ್ತಮ ಪತ್ರಿಕೋದ್ಯಮ ಸಂಪ್ರದಾಯಗಳಲ್ಲಿ ದಾಖಲೆಯನ್ನು ನೇರವಾಗಿ ಇರಿಸಲು ಅರ್ಹವಾದುದೆಂದು ಹೇಳಬಹುದಾಗಿದೆ. ರಾಮಕೃಷ್ಣ ಉಪಾಧ್ಯರು ಇದನ್ನು ಸೂಕ್ಷ್ಮತೆ ಮತ್ತು ಸಹಾನುಭೂತಿಯಿಂದ ಈ ಕೃತಿಯನ್ನು ರಚಿಸಿದ್ದಾರೆ. 

-ಎ.ವಿ.ಎಸ್.ನಂಬೂದರಿ, ಅಸೋಸಿಯೇಟ್ ಎಡಿಟರ್ (ನಿ), ಡೆಕ್ಕನ್ ಹೆರಾಲ್ಡ್

Related Books