ರಾಜಶೇಖರ ಮಠಪತಿ ಅವರು ಬರೆದ ಜೀವನ ಚಿತ್ರ ಕೃತಿ ಅನಾದ. ಕೃತಿಯಲ್ಲಿ ಆರ್.ಕೆ.ಕುಲಕರ್ಣಿ ಅವರು ಕೃತಿಗೆ ಬೆನ್ನುಡಿಯನ್ನು ಬರೆದಿದ್ದಾರೆ. ಅವರು ಃಏಳುವಂತೆ, ಆತ್ಮಸಾಕ್ಷಿಯೊಡನೆ ರಾಜಿಮಾಡಿಕೊಳ್ಳದೆ, ಸ್ವಾಭಿಮಾನವನ್ನು ಬಿಟ್ಟುಕೊಡದೆ, ಲೋಕದ ಮಾತಿಗೆ ಕಿವಿಗೊಡದೆ ಬಾಳಿದ ಅಪ್ಪಟ ಪ್ರಾಮಾಣಿಕ ಬಹು ಮಹತ್ವದ ಲೇಖಕ ಸಾಮರ್ ಸೆಟ್ ಮಾಮ್. ಇವನದು ವ್ಯಾಖ್ಯಾನಿಸಲಾಗದ ವ್ಯಕ್ತಿತ್ವ. ಈತನನ್ನ ಪಾರಂಪರಿಕ ಪರಿಕಲ್ಪನೆಯ ಚೌಕಟ್ಟಿನಲ್ಲಿ ಕಟ್ಟಿ ಹಾಕಲಾಗದು. ಎಲ್ಲರಿಗಿಂತಲೂ ಅರ್ತಪೂರ್ಣವಾಗಿ ಭಿನ್ನವಾಗಿರುವ ಈ ಬರಹಗಾರನಿಗೆ ರಾಗಂ ನೀಡಿದ ಕಾಣಿಕೆ ಅವರ ಪ್ರಸ್ತುತ ಕೃತಿ ಅನಾದ. ಮಾಮ್ ನ ಬಾಹ್ಯ ಜೀವನಕ್ಕಿಂತ ಅವನ ಅಂತರ್ ಲೋಕವನ್ನು ಅನಾವರಣಗೊಳಿಸುವ ಈ ಕೃತಿ ಬದುಕು -ಬರಹದ ದಾರಿಯಲ್ಲಿರುವವರ ಪಾಲಿಗೆ ಮಾರ್ಗದರ್ಶಿಯಾಗಿದೆ ಎಂದಿದ್ದಾರೆ.
ಸಾಹಿತಿ, ಚಿಂತಕ, ಕನ್ನಡ ಸಾಹಿತ್ಯ ಆಕಾಡೆಮಿ ಸದಸ್ಯರಾದ ರಾಜಶೇಖರ ಮಠಪತಿ (ರಾಗಂ) ಅವರು ಹುಟ್ಟಿದ್ದು ಬೆಳಗಾಂವ ಜಿಲ್ಲೆಯ ತೆಲಸಂಗದಲ್ಲಿ. ಕರ್ನಾಟಕದ ಗಡಿಯ ಊರಾದ ಚಡಚಣದಲ್ಲಿ ಪ್ರಾಥಮಿಕದಿಂದ ಪದವಿಪೂರ್ವದ ಶಿಕ್ಷಣ, ನಂತರ ಬಿಜಾಪೂರ ಮತ್ತು ಸೊಲ್ಲಾಪುಗಳಲ್ಲಿ ಪದವಿ ಹಾಗೂ ಸ್ನಾತಕೋತ್ತರ ಶಿಕ್ಷಣ, ಕ.ವಿ.ವಿ ಧಾರವಾಡದಿಂದ ಆಂಗ್ಲ ಸಾಹಿತಿ, ಸಿನಿಮಾ ನಿರ್ದೇಶಕ,ಪತ್ರಕರ್ತ, ಕೆ.ಎ.ಅಬ್ಬಾಸರನ್ನು ಕುರಿತು ಪಿ.ಹೆಚ್.ಡಿ - ಹೀಗೆ ಶೈಕ್ಷಣಿಕ ಬದುಕಿನ ಹಲವು ಹಂತಗಳನ್ನು ಗಳಿಸಿದ್ದಾರೆ. ಇದುವರೆಗೆ ಅವರು ಕನ್ನಡ, ಇಂಗ್ಲಿಷ್ ಎರಡೂ ಭಾಷೆಗಳಲ್ಲಿ ಬರೆದ ಕೃತಿಗಳ ಸಂಖ್ಯೆ ಅರವತ್ತು ಅಂಕಿಯನ್ನು ದಾಟುತ್ತದೆ. ಕಾವ್ಯ, ಕತೆ, ನಾಟಕ, ಪ್ರಬಂಧ, ಅಂಕಣ, ಸಂಶೋಧನೆ, ...
READ MORE