ಲೇಖಕ ಅನಂತ್ ಪೈ ಅವರ ಕೃತಿ ʻತೆನಾಲಿ ರಾಮ, ದಕ್ಷಿಣ ಭಾರತದ ಬೀರ್ಬಲ್ʼ. ಪುಸ್ತಕವು ವಿಕಟಕವಿ ಎಂದೇ ಪ್ರಸಿದ್ಧವಾಗಿರುವ ತೆನಾಲಿ ರಾಮಕೃಷ್ಣನ ಕುರಿತು ಹೇಳುತ್ತದೆ. ಬುದ್ಧಿವಂತನಾಗಿದ್ದ ಇವನು ವಿಜಯನಗರ ಸಾಮ್ರಾಜ್ಯದ ಶ್ರೀಕೃಷ್ಣದೇವರಾಯರ ಆಸ್ಥಾನದಲ್ಲಿದ್ದ ಅಷ್ಟದಿಗ್ಗಜರಲ್ಲಿ ಒಬ್ಬನಾಗಿದ್ದನು. ಅಲ್ಲಿನ ಆಸ್ಥಾನ ಕವಿಯಾಗಿದ್ದ ಇವನು, ಅಲ್ಲಿ ನಡೆಯುತ್ತಿದ್ದ ಚರ್ಚೆಗಳಿಗೆ ಹಾಸ್ಯ ರೂಪವನ್ನು ಕೊಡುತ್ತಾ ಎಲ್ಲರನ್ನೂ ನಗಿಸುತ್ತಿದ್ದನು. ಇನ್ನು, ರಾಮಕೃಷ್ಣ ರಚನೆಗಳು ಪ್ರಬಂಧ ಶೈಲಿಯಲ್ಲಿರುತ್ತಿದ್ದವು. ಅದರಲ್ಲೂ ಹಾಸ್ಯ ಹಾಗು ವ್ಯಂಗ್ಯ ರಸಗಳೇ ತುಂಬಿರುತ್ತಿದ್ದವು.
ಅನಂತ ಪೈ ಅವರ ಪೂರ್ಣ ಹೆಸರು-ಕಾರ್ಕಳ ವೆಂಕಟ್ರಾಯ ಅನಂತ್ ಪೈ. ಕಾರ್ಕಳದಲ್ಲಿ 17-09-1929ರಂದು ಜನನ. ತಂದೆ ವೆಂಕಟ್ರಾಯ, ತಾಯಿ ಸುಶೀಲಾ. ಮಗು ಎರಡು ವರ್ಷವಿದ್ದಾಗ ತಂದೆ-ತಾಯಿ ತೀರಿಕೊಂಡರು. ಸಂಬಂಧಿಕರ ಸಹಕಾರದಲ್ಲಿ ಬೆಳೆದರು. ಮುಂಬೈನ ಮಾಹಿಮ್ ಓರಿಯೆಂಟಲ್ ಶಾಲೆಯಲ್ಲಿ ಶಿಕ್ಷಣ ನಂತರ ಮುಂಬೈ ವಿ.ವಿ.ಯಿಂದ ಕೆಮಿಕಲ್ ಟೆಕ್ನಾಲಜಿಯಲ್ಲಿ ಎರಡು ಪದವಿ ಪಡೆದರು. ಅಂಕಲ್ ಪೈ ಎಂದೇ ವಿಶ್ವಖ್ಯಾತಿ. ವ್ಯಂಗ್ಯ ಚಿತ್ರಗಳು ಅಷ್ಟೇನೂ ಹೆಸರುಮಾಡಿರದ ಕಾಲದಲ್ಲಿ 'ಅನಂತ ಪೈ'ರವರು ಮಕ್ಕಳ ಮನಸ್ಸಿಗೆ ನಾಟುವಂತೆ ಸೃಷ್ಟಿಸಿದ ಕಥಾಚಿತ್ರಗಳು, ಅವರ ಕಥೆಯನ್ನು ಹೇಳುವ ಕೌಶಲ್ಯಕ್ಕೆ ಸಾಕ್ಷಿಯಾಗಿವೆ. ಮಕ್ಕಳ ಸುಸುಪ್ತ ಚೇತನವನ್ನು ಹುರಿಗೊಳಿಸಿ ಅತ್ಯಂತ ...
READ MORE