ಟೆಲಿಮಾಕಸ್ಸನ ಸಾಹಸ ಚರಿತ್ರೆ

Author : ಎಂ. ವೆಂಕಟಕೃಷ್ಣಯ್ಯ

Pages 163




Year of Publication: 1920
Published by: ಎಂ. ವೆಂಕಟಕೃಷ್ಣಯ್ಯ
Address: ಮೈಸೂರು

Synopsys

ಲೇಖಕ ಎಂ. ವೆಂಕಟಕೃಷ್ಣಯ್ಯ ಅವರು ಕ್ರಿಟ್ ದ್ವೀಪದ ಟೆಲಿಮಾಕಸ್ಸನ ಕುರಿತು ಬರೆದ ಜೀವನ ಚರಿತ್ರೆ. ಟೆಲಿಮಾಕಸಗ್, ಹೇಜಲ್ ಹಾಗೂ ಮೆಂಟರ್ ಹಾಗೂ ಟೆಲಿಮಾಕಸ್ ಸಹ ಕ್ರಿಟ್ ದ್ವೀಪದ ಆಡಳಿತ ವಹಿಸಿಕೊಳ್ಳುವುದನ್ನು ನಿರಾಕರಿಸುತ್ತಾರೆ. ನಂತರ ಅರಿಸ್ಟೋಡಿಮಸ್ ಎಂಬ ಸೇನೆಯಿಂದ ಅನ್ಯಾಯವಾಗಿ ತೆಗೆಯಲ್ಪಟ್ಟ ವ್ಯಕ್ತಿ. ಆತ ಪ್ರಾಮಾಣಿಕನಾಗಿದ್ದು, ಆತನ ಕಡೆಗೆ ಎಲ್ಲ ಗಮನ ಸೆಳೆಯುತ್ತದೆ. ಹೀಗಾಗಿ, ಆತನಿಗೆ ದ್ವೀಪದ ಪ್ರಭುತ್ವ ನೀಡಲು ಬಯಸಲಾಗುತ್ತದೆ. ಆದರೆ, ಈತ ಷರತ್ತು ಹಾಕುತ್ತಾನೆ; ಒಂದು-ಎರಡು ವರ್ಷ ಅವಕಾಶ ನೀಡಬೇಕು. ಈಗಿನದಕ್ಕಿಂತ ಜನರ ಜೀವನ ಮಟ್ಟ ಹೆಚ್ಚದಿದ್ದರೆ ಅಧಿಕಾರದಿಂದ ಕಿತ್ತೊಗೆಯಬೇಕು. ಎರಡು-ಈಗ ನಾನು ದುಡಿಯುವಂತೆ ಮುಂದೆಯೂ ನನ್ನ ತೋಳ್ಬಲವನ್ನೇ ಆಶ್ರಯಿಸುತ್ತೇನೆ. ಯಾರೂ ಆಕ್ಷೇಪಿಸುವಂತಿಲ್ಲ. ನನ್ನನ್ನು ಪ್ರಭುವೆಂದು ನೋಡಬಾರದು, ನಾನು ಒಬ್ಬ ಸಾಮಾನ್ಯನಂತೆ. ಮೂರು-ತಪ್ಪು ಮಾಡಿದರೆ ಸಾಮಾನ್ಯರಿಗೆ ಇರುವಂತೆ ತಮಗೂ ಶಿಕ್ಷೆ ಇರಬೇಕು ಎಂಬುದು. ಎಲ್ಲರೂ ಈ ಕರಾರುಗಳಿಗೆ ಒಪ್ಪುತ್ತಾರೆ.

About the Author

ಎಂ. ವೆಂಕಟಕೃಷ್ಣಯ್ಯ
(20 August 1844 - 08 November 1933)

ಕನ್ನಡದಲ್ಲಿ ಸ್ವತಂತ್ರ ಪತ್ರಿಕೆ ‘ಸಾಧ್ವಿ’ ಆರಂಭಿಸಿದ ಎಂ. ವೆಂಕಟಕೃಷ್ಣಯ್ಯ ಅವರು ‘ತಾತಯ್ಯ’ ಎಂದೇ ಪ್ರಸಿದ್ಧರು. ಪತ್ರಿಕಾ ಪ್ರಪಂಚದ ಭೀಷ್ಮರು ಎಂದು ಗುರುತಿಸಲಾಗುತ್ತಿದೆ. ಮೈಸೂರು ಸರ್ಕಾರದ ಪ್ರತಿನಿಧಿಯಾಗಿದ್ದರು. ನ್ಯಾಯ ವಿಧಾಯಕಸಭೆ, ಸಂಪದಭ್ಯುದಯ ಸಭೆ, ಜಿಲ್ಲಾಮಂಡಳಿ, ಪೌರ ಪರಿಷತ್ತು, ಲಿಟರರಿ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿದ್ದು, ಮೈಸೂರು ಅನಾಥಾಲಯದ ಸ್ಥಾಪಕರಲ್ಲಿ ಒಬ್ಬರು. ಎಂ. ವೆಂಕಟಕೃಷ್ಣಯ್ಯ ಜನಿಸಿದ್ದು 1844ರ ಆಗಸ್ಟ್ 20ರಂದು ಹೆಗ್ಗಡೆದೇವನ ಕೋಟೆ ತಾಲ್ಲೂಕಿನ ಮೊಗ್ಗೆ ಗ್ರಾಮದಲ್ಲಿ. ತಂದೆ ಸುಬ್ಬಯ್ಯ, ತಾಯಿ ಭಾಗೀರಥಮ್ಮ. ಮೆಟ್ರಿಕ್ಯುಲೇಷನ್ ಪರೀಕ್ಷೆ ನಂತರ ಮೈಸೂರಿನಲ್ಲಿ ಮರಿಮಲ್ಲಪ್ಪ ಶಾಲೆಯಲ್ಲಿ ಉಪಾಧ್ಯಾಯರಾದರು. ಅನಂತರ ಹಲವಾರು ಶಾಲೆಗಳಲ್ಲಿಸುಮಾರು 50 ವರ್ಷ ಸೇವೆ ನಂತರ ಮುಖ್ಯೋಪಾಧ್ಯಾಯರಾಗಿ ನಿವೃತ್ತರಾದರು. ಜತೆಗೆ ಕನ್ನಡದಲ್ಲಿ ಸ್ವತಂತ್ರ ಪತ್ರಿಕೆ ...

READ MORE

Related Books