About the Author

ಕನ್ನಡದಲ್ಲಿ ಸ್ವತಂತ್ರ ಪತ್ರಿಕೆ ‘ಸಾಧ್ವಿ’ ಆರಂಭಿಸಿದ ಎಂ. ವೆಂಕಟಕೃಷ್ಣಯ್ಯ ಅವರು ‘ತಾತಯ್ಯ’ ಎಂದೇ ಪ್ರಸಿದ್ಧರು. ಪತ್ರಿಕಾ ಪ್ರಪಂಚದ ಭೀಷ್ಮರು ಎಂದು ಗುರುತಿಸಲಾಗುತ್ತಿದೆ. ಮೈಸೂರು ಸರ್ಕಾರದ ಪ್ರತಿನಿಧಿಯಾಗಿದ್ದರು.
ನ್ಯಾಯ ವಿಧಾಯಕಸಭೆ, ಸಂಪದಭ್ಯುದಯ ಸಭೆ, ಜಿಲ್ಲಾಮಂಡಳಿ, ಪೌರ ಪರಿಷತ್ತು, ಲಿಟರರಿ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿದ್ದು, ಮೈಸೂರು ಅನಾಥಾಲಯದ ಸ್ಥಾಪಕರಲ್ಲಿ ಒಬ್ಬರು.

ಎಂ. ವೆಂಕಟಕೃಷ್ಣಯ್ಯ ಜನಿಸಿದ್ದು 1844ರ ಆಗಸ್ಟ್ 20ರಂದು ಹೆಗ್ಗಡೆದೇವನ ಕೋಟೆ ತಾಲ್ಲೂಕಿನ ಮೊಗ್ಗೆ ಗ್ರಾಮದಲ್ಲಿ. ತಂದೆ ಸುಬ್ಬಯ್ಯ, ತಾಯಿ ಭಾಗೀರಥಮ್ಮ. ಮೆಟ್ರಿಕ್ಯುಲೇಷನ್ ಪರೀಕ್ಷೆ ನಂತರ ಮೈಸೂರಿನಲ್ಲಿ ಮರಿಮಲ್ಲಪ್ಪ ಶಾಲೆಯಲ್ಲಿ ಉಪಾಧ್ಯಾಯರಾದರು. ಅನಂತರ ಹಲವಾರು ಶಾಲೆಗಳಲ್ಲಿಸುಮಾರು 50 ವರ್ಷ ಸೇವೆ ನಂತರ ಮುಖ್ಯೋಪಾಧ್ಯಾಯರಾಗಿ ನಿವೃತ್ತರಾದರು. ಜತೆಗೆ ಕನ್ನಡದಲ್ಲಿ ಸ್ವತಂತ್ರ ಪತ್ರಿಕೆ ‘ಸಾಧ್ವಿ’ಪ್ರಾರಂಭಿಸಿದರು. ವೆಲ್ತ್ ಆಫ್ ಮೈಸೂರು, ಮೈಸೂರು ಪೇಟ್ರಿಯಟ್, ನೇಚರ್ಕ್ಯೂರ್, ದಿ ಸಿವಿಕ್ ಅಂಡ್ ಸೋಷಿಯಲ್ ಜರ್ನಲ್ ಪತ್ರಿಕೆಗಳನ್ನು ನಡೆಸಿದರು.
1922ರಲ್ಲಿ ದಾವಣಗೆರೆಯಲ್ಲಿ ನಡೆದ 8ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು. ದಯಾಸಾಗರ, ಪತ್ರಿಕಾ ಪಿತಾಮಹ, ಭೀಷ್ಮಾಚಾರ್ಯ ಎಂದೆಲ್ಲಾ ಪ್ರೀತಿಯಿಂದ ಕರೆದು ಗೌರವಿಸಲಾಗುತ್ತದೆ.
ಕೃತಿಗಳು: ಚೋರಗ್ರಹಣತಂತ್ರ (ಕಾದಂಬರಿ), ಪರಂತಪವಿಜಯ (ಕಾದಂಬರಿ),  ವಿದ್ಯಾಕರಭೂಷಣ ಧನಾರ್ಜನೆಯ ಕ್ರಮ, ಅರ್ಥಸಾಧನ,  ಹರಿಶ್ಚಂದ್ರ ಚರಿತೆ,  ಆರೋಗ್ಯ ಸಾಧನ ಪ್ರಕಾಶಿಕೆ, ಬೂಕರ್ ಇ ವಾಷಿಂಗ್ಟನ್ ಚರಿತ್ರೆ ಇತ್ಯಾದಿ.,  ಅವರು 1933ರ ನವೆಂಬರ್ 8ರಂದು ನಿಧನರಾದರು.

ಎಂ. ವೆಂಕಟಕೃಷ್ಣಯ್ಯ

(20 Aug 1844-08 Nov 1933)