ಸ್ವಾತಂತ್ರ್ಯ ಯೋಧ ಶ್ರೀ ಅರವಿಂದ

Author : ಕೋ. ಚೆನ್ನಬಸಪ್ಪ

₹ 85.00




Year of Publication: 1969
Published by: ರಾಷ್ಟ್ರೋತ್ಥಾನ ಸಾಹಿತ್ಯ
Address: ಬೆಂಗಳೂರು-19.

Synopsys

ʼಸ್ವಾತಂತ್ರ್ಯ ಯೋಧ ಶ್ರೀ ಅರವಿಂದʼ ಜೀವನಚರಿತ್ರೆ ಕೃತಿಯನ್ನು ಲೇಖಕ ಕೋ. ಚೆನ್ನಬಸಪ್ಪ ಅವರು ರಚಿಸಿದ್ದಾರೆ. ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಅನೇಕ ಜನರ ತ್ಯಾಗ- ಬಲಿದಾನಗಳಿವೆ. ಅದೇ ರೀತಿ, ಪಾಶ್ಚಾತ್ಯರ ಆಕ್ರಮಣದಿಂದ ಮಮ್ಮಲ ಮರುಗುತ್ತಿದ್ದ ಭರತಖಂಡದ ಬಂಧ ವಿಮೋಚನೆಗಾಗಿ, ತನಗಾಗಿ ಕಾದಿದ್ದ ಸ್ವರ್ಗ ಸದೃಶ ಸುಖ ಸಂಪತ್ತೆಲ್ಲವನ್ನೂ ಕಡೆಗಣಿಸಿ, ನಮ್ಮ ದೇಶದ ರಾಜಕೀಯ ಕ್ಷೇತ್ರದಲ್ಲಿ ಮಿಂಚಿನಂತೆ ಸಂಚರಿಸಿ, ದೇಶದೆಲ್ಲೆಡೆ ಚೈತನ್ಯ ತುಂಬಿದ, ಯೋಗಿ ಪುರುಷ ಅರವಿಂದರ ಯೋಧ ಜೀವನದ ಅನುಪಮ ಸಾಧನೆಗಳ ಹೃದಯಸ್ಪರ್ಶಿ ಚಿತ್ರಣದ ಕೃತಿಯೇ ’ಸ್ವಾತಂತ್ರ್ಯಯೋಧ ಶ್ರೀ ಅರವಿಂದ’ ಎಂದು ಪುಸ್ತಕದ ಕುರಿತಾಗಿ ವಿವರಿಸಲಾಗಿದೆ.

About the Author

ಕೋ. ಚೆನ್ನಬಸಪ್ಪ
(27 February 1922 - 23 February 2019)

ನ್ಯಾಯಾಧೀಶರಾಗಿ, ಸಾಹಿತಿಗಳಾಗಿ, ಚಳುವಳಿಕಾರರಾಗಿ ನಾಡುನುಡಿಗೆ ಸೇವೆ ಸಲ್ಲಿಸಿರುವ ಕೋ. ಚೆನ್ನಬಸಪ್ಪ ಅವರು ಬಳ್ಳಾರಿ ಜಿಲ್ಲೆಯವರು. ತಾಯಿ ಬಸಮ್ಮ- ತಂದೆ ವೀರಣ್ಣ. 1922ರ ಫೆಬ್ರುವರಿ 27ರಂದು ಜನಿಸಿದರು. ಕಾಲೇಜು ಶಿಕ್ಷಣವನ್ನು ಅನಂತಪುರದಲ್ಲಿ ಪಡೆಯುತ್ತಿದ್ದಾಗ ಕ್ವಿಟ್ ಇಂಡಿಯಾ ಚಳುವಳಿಯಲ್ಲಿ ಭಾಗವಹಿಸಿ ಶಾಲೆಗೆ ತಿಲಾಂಜಲಿಯಿತ್ತರು. ಅನಂತರ ವಿದ್ಯಾಭ್ಯಾಸ ಮುಂದುವರಿಸಿ ಬಿ.ಎ. ಮತ್ತು ಲಾ ಪದವಿಯನ್ನೂ ಹಾಗೂ ಎಂ.ಎ. ಪದವಿಯನ್ನೂ ಗಳಿಸಿದರು. 1946ರಲ್ಲಿ ಬಳ್ಳಾರಿ ಜಿಲ್ಲೆಯ ಡಿಸ್ಟ್ರಿಕ್ಟ್ ಕೋರ್ಟಿನಲ್ಲಿ ವಕೀಲರಾಗಿ ವೃತ್ತಿಜೀವನ ಪ್ರಾರಂಭಿಸಿದ ಇವರು 1965ರಲ್ಲಿ ಡಿಸ್ಟ್ರಿಕ್ಟ್ ಸೆಷನ್ ಜಡ್ಜ್ ಆಗಿ ಅಮೂಲ್ಯ ಸೇವೆಸಲ್ಲಿಸಿದರು. ಇವರು ಹಲವಾರು ಸಂಘ ಸಂಸ್ಥೆಗಳಲ್ಲಿ ಸಮಾಜಮುಖಿ ಸೇವೆ ...

READ MORE

Related Books