`ಶ್ರೀ ಅರವಿಂದ' ಜೀವನ ಚರಿತ್ರೆಯ ಈ ಪುಸ್ತಕವನ್ನು ಲೇಖಕ ಕೋ. ಚೆನ್ನಬಸಪ್ಪ ಅವರು ರಚಿಸಿದ್ದಾರೆ. ಪ್ರಾಚೀನ ಋಷಿಮುನಿಗಳೇ ಮೈವೆತ್ತಂತೆ ಭಾರತಕ್ಕೆ ಹೊಸ ದರ್ಶನವನ್ನಿತ್ತ ಆಧುನಿಕ ದ್ರಷ್ಟಾರ; ಯೋಧನಾಗಿಯೂ ಯೋಗಿಯಾಗಿಯೂ ವಿಲಕ್ಷಣ ಜೀವನಪ್ರಭೆ ಬೀರಿದ ಮಹಾಪುರುಷ; ಮಾನವನನ್ನು ’ಅತಿ ಮಾನವತ್ವ’ಕ್ಕೇರಿಸುವ ಪೂರ್ಣಯೋಗ ವಿದ್ಯೆಯ ಪ್ರಬೋಧಕ ಎಂದು ಅರವಿಂದ ಅವರನ್ನು ವಿವರಿಸುತ್ತಾರೆ. ಶ್ರೀ ಅರವಿಂದರ ಅಭೂತಪೂರ್ವಾ ಜ್ಞಾನ, ನಡೆದು ಬಂದ ಹಾದಿ, ಜೀವನದ ತಿರುವುಗಳು, ಕೈಗೊಂಡ ನಿರ್ಧಾರಗಳ ಬಗೆಗೆ ಈ ಕೃತಿಯಲ್ಲಿ ಲೇಖಕರು ಸರಳ ಕನ್ನಡದಲ್ಲಿ ಸುಂದರವಾಗಿ ಪ್ರಸ್ತುತಪಡಿಸಿದ್ದಾರೆ.
ನ್ಯಾಯಾಧೀಶರಾಗಿ, ಸಾಹಿತಿಗಳಾಗಿ, ಚಳುವಳಿಕಾರರಾಗಿ ನಾಡುನುಡಿಗೆ ಸೇವೆ ಸಲ್ಲಿಸಿರುವ ಕೋ. ಚೆನ್ನಬಸಪ್ಪ ಅವರು ಬಳ್ಳಾರಿ ಜಿಲ್ಲೆಯವರು. ತಾಯಿ ಬಸಮ್ಮ- ತಂದೆ ವೀರಣ್ಣ. 1922ರ ಫೆಬ್ರುವರಿ 27ರಂದು ಜನಿಸಿದರು. ಕಾಲೇಜು ಶಿಕ್ಷಣವನ್ನು ಅನಂತಪುರದಲ್ಲಿ ಪಡೆಯುತ್ತಿದ್ದಾಗ ಕ್ವಿಟ್ ಇಂಡಿಯಾ ಚಳುವಳಿಯಲ್ಲಿ ಭಾಗವಹಿಸಿ ಶಾಲೆಗೆ ತಿಲಾಂಜಲಿಯಿತ್ತರು. ಅನಂತರ ವಿದ್ಯಾಭ್ಯಾಸ ಮುಂದುವರಿಸಿ ಬಿ.ಎ. ಮತ್ತು ಲಾ ಪದವಿಯನ್ನೂ ಹಾಗೂ ಎಂ.ಎ. ಪದವಿಯನ್ನೂ ಗಳಿಸಿದರು. 1946ರಲ್ಲಿ ಬಳ್ಳಾರಿ ಜಿಲ್ಲೆಯ ಡಿಸ್ಟ್ರಿಕ್ಟ್ ಕೋರ್ಟಿನಲ್ಲಿ ವಕೀಲರಾಗಿ ವೃತ್ತಿಜೀವನ ಪ್ರಾರಂಭಿಸಿದ ಇವರು 1965ರಲ್ಲಿ ಡಿಸ್ಟ್ರಿಕ್ಟ್ ಸೆಷನ್ ಜಡ್ಜ್ ಆಗಿ ಅಮೂಲ್ಯ ಸೇವೆಸಲ್ಲಿಸಿದರು. ಇವರು ಹಲವಾರು ಸಂಘ ಸಂಸ್ಥೆಗಳಲ್ಲಿ ಸಮಾಜಮುಖಿ ಸೇವೆ ...
READ MORE