ಶ್ರೀಮಾತೆ ಜೀವನಚರಿತ್ರೆ ಪುಸ್ತಕವನ್ನು ಲೇಖಕ ಕೋ. ಚೆನ್ನಬಸಪ್ಪ ಅವರು ರಚಿಸಿದ್ದಾರೆ. ಈ ಕೃತಿಯಲ್ಲಿ ಫ್ರಾನ್ಸಿನಲ್ಲಿ ಹುಟ್ಟಿದ ಹುಡುಗಿ, ಮುಂದೆ ಭಾರತದಲ್ಲಿ ಅರವಿಂದಾಶ್ರಮದ ನಿರ್ವಹಣೆ ಹೊತ್ತ ಶಕ್ತಿ. ಬಾಲ್ಯದಿಂದ ಸುಪ್ತವಾಗಿದ್ದ ಆಧ್ಯಾತ್ಮಕ ಹಂಬಲ ಶ್ರೀ ಅರವಿಂದರ ಸನ್ನಿಧಿಯಲ್ಲಿ ಧನ್ಯತೆ ಕಂಡಿತು. ಶ್ರೀಮಾತೆ ಭಕ್ತರನ್ನು ಆತ್ಮೋನ್ನತಿಯ ಮಾರ್ಗದಲ್ಲಿ ನಡೆಸಿದರು ಎಂದು ಶ್ರೀಮಾತೆಯ ಕುರಿತು ಈ ಕೃತಿಯಲ್ಲಿ ವರ್ಣಿಸಲಾಗಿದೆ. ಈ ಪುಸ್ತಕದಲ್ಲಿ ಶ್ರೀಮಾತೆ ಅವರ ಬಾಲ್ಯ ಜೀವನ, ಭಾರತದೆಡೆ ಶ್ರೀಮಾತೆ ಪ್ರಭಾವಿತಳಾದ ಪರಿ, ಅರವಿಂದಾಶ್ರಮವನ್ನು ಮುನ್ನಡೆಸಿದ ರೀತಿ, ಎದುರಾದ ಸವಾಲುಗಳು ಹೀಗೆ ಶ್ರೀಮಾತೆ ಅವರ ಜೀವನದ ಪ್ರಮುಖ ಘಟ್ಟಗಳನ್ನು ಲೇಖಕರು ಇಲ್ಲಿ ವಿವರಸಿದ್ದಾರೆ.
ನ್ಯಾಯಾಧೀಶರಾಗಿ, ಸಾಹಿತಿಗಳಾಗಿ, ಚಳುವಳಿಕಾರರಾಗಿ ನಾಡುನುಡಿಗೆ ಸೇವೆ ಸಲ್ಲಿಸಿರುವ ಕೋ. ಚೆನ್ನಬಸಪ್ಪ ಅವರು ಬಳ್ಳಾರಿ ಜಿಲ್ಲೆಯವರು. ತಾಯಿ ಬಸಮ್ಮ- ತಂದೆ ವೀರಣ್ಣ. 1922ರ ಫೆಬ್ರುವರಿ 27ರಂದು ಜನಿಸಿದರು. ಕಾಲೇಜು ಶಿಕ್ಷಣವನ್ನು ಅನಂತಪುರದಲ್ಲಿ ಪಡೆಯುತ್ತಿದ್ದಾಗ ಕ್ವಿಟ್ ಇಂಡಿಯಾ ಚಳುವಳಿಯಲ್ಲಿ ಭಾಗವಹಿಸಿ ಶಾಲೆಗೆ ತಿಲಾಂಜಲಿಯಿತ್ತರು. ಅನಂತರ ವಿದ್ಯಾಭ್ಯಾಸ ಮುಂದುವರಿಸಿ ಬಿ.ಎ. ಮತ್ತು ಲಾ ಪದವಿಯನ್ನೂ ಹಾಗೂ ಎಂ.ಎ. ಪದವಿಯನ್ನೂ ಗಳಿಸಿದರು. 1946ರಲ್ಲಿ ಬಳ್ಳಾರಿ ಜಿಲ್ಲೆಯ ಡಿಸ್ಟ್ರಿಕ್ಟ್ ಕೋರ್ಟಿನಲ್ಲಿ ವಕೀಲರಾಗಿ ವೃತ್ತಿಜೀವನ ಪ್ರಾರಂಭಿಸಿದ ಇವರು 1965ರಲ್ಲಿ ಡಿಸ್ಟ್ರಿಕ್ಟ್ ಸೆಷನ್ ಜಡ್ಜ್ ಆಗಿ ಅಮೂಲ್ಯ ಸೇವೆಸಲ್ಲಿಸಿದರು. ಇವರು ಹಲವಾರು ಸಂಘ ಸಂಸ್ಥೆಗಳಲ್ಲಿ ಸಮಾಜಮುಖಿ ಸೇವೆ ...
READ MORE