ಶಿಶುನಾಳ ಶರೀಫರು

Author : ಸ.ಸ. ಮಾಳವಾಡ

Pages 120

₹ 15.00




Year of Publication: 1976
Published by: ರಾಷ್ಟ್ರೋತ್ಥಾನ ಸಾಹಿತ್ಯ
Address: ಬೆಂಗಳೂರು-19.

Synopsys

`ಶಿಶುನಾಳ ಶರೀಫರು' ಈ ತತ್ವಜ್ಞಾನಿಯ ಜೀವನಚರಿತ್ರೆಯ ಪುಸ್ತಕವಿದು. ಲೇಖಕ ಸ.ಸ. ಮಾಳವಾಡ ಅವರು ರಚಿಸಿದ್ದಾರೆ. ಕಬೀರರಂತೆ ಎಲ್ಲ ಧರ್ಮಗಳ ದೇವರೂ ಒಬ್ಬನೇ ಎಂಬ ಅರಿವನ್ನು ರಕ್ತಗತ ಮಾಡಿಕೊಂಡ ಹಿರಿಯರು. ತಮಗಾಗಿ ಏನನ್ನೂ ಬಯಸಲಿಲ್ಲ. ಜನರಲ್ಲಿ ಒಂದಾಗಿ, ಅವರಿಗೆ ಅರ್ಥವಾಗುವ ಸರಳ ಭಾಷೆಯಲ್ಲಿ ಹಾಡಿ, ಮಾರ್ಗದರ್ಶನ ಮಾಡಿದರು ಎಂದು ಶಿಶುನಾಳ ಶರೀಫರ ಕುರಿತಾಗಿ ಈ ಕೃತಿಯಲ್ಲಿ ವಿವರಿಸಲಾಗಿದೆ. ಅವರ ಬದುಕು ಹಾಗೂ ಸಾಹಿತ್ಯಕ ಸಾಧನೆ, ಸಾಮಾಜಿಕ ಅರಿವಿನ ಹಿನ್ನೆಲೆಯಲ್ಲಿ ಹೋರಾಟ, ಕೋಮು ಸಾಮರಸ್ಯ ಸ್ಥಾಪನೆಯಲ್ಲಿ ಅವರ ಕಳಕಳಿ ಇತ್ಯಾದಿ ಅಂಶಗಳನ್ನು ಚಿತ್ರಿಸಿರುವ ಕೃತಿ ಇದಾಗಿದ್ದು ಲೇಖಕರು ಸರಳ ಕನ್ನಡದಲ್ಲಿ ಸುಂದರವಾಗಿ ಚಿತ್ರಿಸಿದ್ದಾರೆ.

About the Author

ಸ.ಸ. ಮಾಳವಾಡ
(14 November 1910 - 30 August 1987)

ಸಾಹಿತಿ ಸ.ಸ. ಮಾಳವಾಡರು ಹುಟ್ಟಿದ್ದು ಧಾರವಾಡ ಜಿಲ್ಲೆಯ ಮೆಣಸಗಿಯಲ್ಲಿ. ತಂದೆ ಸಂಗನ ಬಸಪ್ಪ, ತಾಯಿ- ಕಾಳಮ್ಮ. ಪ್ರಾರಂಭಿಕ ಶಿಕ್ಷಣವನ್ನು ಗೋವನ ಕೊಪ್ಪ, ಗುಳೇದಗುಡ್ಡ, ಬಾಗಲಕೋಟೆ, ವಿಜಾಪುರಗಳಲ್ಲಿ ಪಡೆದರು. ಧಾರವಾಡದಲ್ಲಿ  ಎಂ.ಎ. ಪದವಿ ಪಡೆದರು. ಕೆಲಕಾಲ ಮಾಧ್ಯಮಿಕ ಕಾಲೇಜು ಶಿಕ್ಷಕರಾಗಿದ್ದರು. ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿ, ಪ್ರಾಚಾರ‍್ಯರಾಗಿ, ನಿವೃತ್ತರಾದರು. ಯು.ಜಿ.ಸಿ. ಪ್ರಾಧ್ಯಾಪಕರಾಗಿ ಕನ್ನಡ ಸಂಶೋಧನಾ ಸಂಸ್ಥೆಯ ನಿರ್ದೇಶಕರಾಗಿ, ಕರ್ನಾಟಕ ವಿಶ್ವವಿದ್ಯಾಲಯದ ಪಠ್ಯಪುಸ್ತಕ ನಿರ್ದೇಶನಾಲಯದ ಸಂಸ್ಥಾಪಕ ಗೌರವ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದರು. ಪರರಾಜ್ಯದ ಪಠ್ಯಪುಸ್ತಕ ರಚನಾ ಸಮಿತಿಗಳಲ್ಲಿ ಸೇವೆ ಸಲ್ಲಿಸಿದರು. ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡದ ಆಕಾಶವಾಣಿ ನಿಲಯಗಳ ಸ್ಥಾಪನೆಯಲ್ಲಿ ಮಹತ್ತರ ಪಾತ್ರ ವಹಿಸಿದ್ದರು. ‘ಕರ್ನಾಟಕ ಸಾಹಿತ್ಯ-ಸಂಸ್ಕೃತಿ ದರ್ಶನ’ ...

READ MORE

Related Books