‘ಶಿಲ್ಪಕಲಾರತ್ನ ನಾ.ಸೂ. ವೆಂಕಟಾಚಾರ್ಯ ಬದುಕು- ಸಾಧನೆ’ ಹೆಸರೇ ಸೂಚಿಸುವಂತೆ ಈ ಕೃತಿ ಕಲಾವಿದ ನಾ.ಸೂ. ವೆಂಕಟಾಚಾರ್ಯ ಅವರ ಬದುಕು-ಸಾಧನೆಯನ್ನು ಬಿಂಬಿಸುವ ಕೃತಿ. ಲೇಖಕಿ ಎನ್.ವಿ. ಅಂಬಾಮಣಿಮೂರ್ತಿ ಅವರ ಮೊದಲ ಕೃತಿ.
ಭಾಷೆ, ಶೈಲಿ, ನಿರೂಪಣೆಗಳೆಲ್ಲವೂ ಸೊಗಸಾಗಿ ಮೂಡಿಬಂದಿದೆ. ಶಿಲ್ಪದ ಸ್ಥೂಲ ಮಾಹಿತಿಯನ್ನೊದಗಿಸುವ, ಶ್ರೇಷ್ಠ ಶಿಲ್ಪಿಯೋರ್ವರ ರೋಚಕ ಅನುಭವದ ಅಭಿವ್ಯಕ್ತಿಯಾಗಿದೆ ಈ ಕೃತಿ.
ಬರಹಗಾತಿ ಅಂಬಾಮಣಿಮೂರ್ತಿ 1948 ಮೇ 17 ಹಾಸನದಲ್ಲಿ ಜನಿಸಿದರು. ತಂದೆ ನಾ.ಸೂ. ವೆಂಕಟಾಚಾರ್ಯ, ತಾಯಿ ಕೆ. ಎ. ನಾಗರತ್ನಮ್ಮ. 'ಅಮೆರಿಕಾದಲ್ಲಿ ಆರು ತಿಂಗಳು' (ಪ್ರವಾಸ ಕಥನ), ಶಿಲ್ಪಕಲಾರತ್ನ ನಾ.ಸೂ. ವೆಂಕಟಾಚಾರ್ಯ ಬದುಕು-ಸಾಧನೆ (ವ್ಯಕ್ತಿ ಚಿತ್ರಣ), ಮನದಾಳದ ಭಾವ (ಕವನ ಸಂಕಲನ). ’ಸಾಹಿತ್ಯ ಶಿರೋಮಣಿ’ ಎಂಬ ಪ್ರಶಸ್ತಿ ದೊರೆತಿದೆ. ...
READ MORE