ಬರಹಗಾತಿ ಅಂಬಾಮಣಿಮೂರ್ತಿ 1948 ಮೇ 17 ಹಾಸನದಲ್ಲಿ ಜನಿಸಿದರು. ತಂದೆ ನಾ.ಸೂ. ವೆಂಕಟಾಚಾರ್ಯ, ತಾಯಿ ಕೆ. ಎ. ನಾಗರತ್ನಮ್ಮ. 'ಅಮೆರಿಕಾದಲ್ಲಿ ಆರು ತಿಂಗಳು' (ಪ್ರವಾಸ ಕಥನ), ಶಿಲ್ಪಕಲಾರತ್ನ ನಾ.ಸೂ. ವೆಂಕಟಾಚಾರ್ಯ ಬದುಕು-ಸಾಧನೆ (ವ್ಯಕ್ತಿ ಚಿತ್ರಣ), ಮನದಾಳದ ಭಾವ (ಕವನ ಸಂಕಲನ). ’ಸಾಹಿತ್ಯ ಶಿರೋಮಣಿ’ ಎಂಬ ಪ್ರಶಸ್ತಿ ದೊರೆತಿದೆ.